LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಸರ್ಕಾರಿ ಶಾಲೆಯ ಆವರಣದಲ್ಲಿ ನಿಲ್ಲದ ಕಿಡಿಗೇಡಿಗಳ ಹಾವಳಿ


  • ಮಂಜುನಾಥ. ಡಿ  ವಾಲ್ಮೀಕಿ


ಮರಿಯಮ್ಮನಹಳ್ಳಿ: ಪಟ್ಟಣದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೆಲವು ವಿಕೃತ ಮನಸ್ಸುಳ್ಳ ಕಿಡಿಗೇಡಿಗಳು ಶಾಲಾ ಕೊಠಡಿ ಬಾಗಿಲು ಮುರಿದು ಒಳನುಗ್ಗಿ ಮಕ್ಕಳ ನಲಿಕಲಿ ಪುಸ್ತಕ, ಆಟಿಕೆಗಳನ್ನು ಬಿಸಾಡಿ, ಅಲ್ಲಿಯೇ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆಯುತ್ತಿದ್ದಾರೆ. ಈ ಕಿಡಿಗೇಡಿಗಳ  ಕಾಟದಿಂದ ರೋಸಿದ ಶಾಲಾ ಶಿಕ್ಷಕರು , ಹಾವಳಿ ತಡೆಯುವಂತೆ ಜನರು ಒತ್ತಾಯಿಸಿದ್ದಾರೆ.‌

 

ನಿಲ್ಲದ ಹಾವಳಿ : ಶಾಲಾ ಅವಧಿ ಮುಗಿದ ಮೇಲೆ ಸಂಜೆಯಾದರೆ ಸಾಕು ಅಲ್ಲಿ ಕಿಡಿಗೇಡಿಗಳ ಕುಡಿದು ಬಾಟಲಿಗಳನ್ನು ಹೊಡೆದು ಅಲ್ಲಿನ ಮಕ್ಕಳಿಗೆ ತೊಂದರೆ ಯಾಗುತ್ತದೆ. ಈ ಹಾವಳಿ ಹೆಚ್ಚುತ್ತದೆ. ಹಾಗೂ ರಜಾ ದಿನಗಳಲ್ಲಿ ಶಾಲಾ ಕೊಠಡಿಗಳ ಮುಂದೆ ಪುಂಡರು ಜಮಾಯಿಸಿಕೊಂಡು ಮೊಬೈಲ್ ನಲ್ಲಿ  ಗೇಮ್ ಆಡುತ್ತ,  ಹರಟೆ ಹೊಡೆಯುತ್ತ, ಗುಟ್ಕಾ ಜಗಿದು ಆವರಣದಲ್ಲಿ ಉಗುಳಿ ಗಲೀಜು ಮಾಡುತ್ತಿದ್ದಾರೆ. ಇನ್ನೂ ಕೆಲವು ವಿಕೃತ ಮನಸ್ಸುಳ್ಳ ಕಿಡಿಗೇಡಿಗಳು ಶಾಲಾ ಕೊಠಡಿ ಬಾಗಿಲು ಮುರಿದು ಒಳನುಗ್ಗಿ ಮಕ್ಕಳ ನಲಿಕಲಿ ಪುಸ್ತಕ, ಆಟಿಕೆಗಳನ್ನು ಬಿಸಾಡಿ, ಅಲ್ಲಿಯೇ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾರೆ.

ಗೋಡೆ ಕೆಡವಿದ ದುರಳರು: ಕೆಲ ತಿಂಗಳಿಂದ ಸರಕಾರಿ ಹೈಸ್ಕೂಲ್ ಆವರಣದ ಸುತ್ತ ನೂತನ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಮುಗಿಯುವ ಹಂತದಲ್ಲಿದೆ. ಎರಡು ದಿನದ ಹಿಂದೆ ದುರುಳರು ಸರಕಾರಿ ಮಾದರಿ ಶಾಲೆ ಬಳಿಯ ನೂತನ ತಡೆ ಗೋಡೆ ಕೆಡವಿದ್ದಾರೆ.



ರೋಸಿದ ಶಿಕ್ಷಕರು: ಪದೇ ಪದೇ ಹಾನಿಯಾಗುತ್ತಿರುವ ಶಾಲಾ ಕೊಠಡಿ ಬಾಗಿಲು, ಕಿಟಕಿಗಳನ್ನು ದುರಸ್ತಿ ಗೊಳಿಸುವುದು,  ದಿನ ಬೆಳಗಾದರೆ ಹೊಲಸು ಗೊಳಿಸಿದ ಕೊಠಡಿಗಳು, ಆವರಣ ಸ್ವಚ್ಚಗೊಳಿಸುವುದೇ ಕಾಯಕವಾಗಿದ್ದು ಶಿಕ್ಷಕರು, ಬಿಸಿಯೂಟ ಸಿಬ್ಬಂದಿ ರೋಸಿ ಹೋಗಿದ್ದಾರೆ.

 

ಕಠಿಣ ಕ್ರಮಕ್ಕೆ ಒತ್ತಾಯ: ಒಂದೆಡೆ ಸರಕಾರಿ ಶಾಲೆಗಳು ಮುಚ್ಚುವ ಕಾರ್ಯ ನೋವು ತಂದರೆ, ಇತ್ತ ಇರುವ ಶಾಲೆಗಳನ್ನು ರಕ್ಷಿಸುವುದು ಸವಾಲಿನ ಕೆಲಸವಾಗಿದೆ. ಇರುವ ಶಾಲೆಗಳನ್ನು ರಕ್ಷಿಸಿ, ಉಳಿಸಲು ಸಂಬಂಧಿಸಿದ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಲಿ ಎಂಬುದು ಜನರ ಕಳಕಳಿಯಾಗಿದೆ.



ಪೊಲೀಸರ ನಿರ್ಲಕ್ಷ್ಯ: ಹಲವು ಬಾರಿ ಸರಕಾರಿ ಶಾಲಾ ಆವರಣ ಅನೈತಿಕ ತಾಣ, ಕುಡುಕರ ಮತ್ತು ಕಿಡಿಗೇಡಿಗಳ‌ ಹಾವಳಿ ಎಂದು ದಿನಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಳ್ಳುತ್ತಿದ್ದರು ಇತ್ತ ಪೊಲೀಸ್ ಇಲಾಖೆ ಗಮನ ಹರಿಸದಿರುವುದು ಅವರ ನಿರ್ಲಕ್ಷ್ಯ ಎತ್ತಿತೋರಿಸುತ್ತಿದೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ