LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಆಚರಣೆಗಳ ಅನಾವರಣ

ನಾಯಕನಹಟ್ಟಿ : ಹೋಬಳಿಯ ಹಿರೇಕೆರೆ ಕಾವಲಿನಲ್ಲಿ ಬುಡಕಟ್ಟು ಜನರ ಆರಾಧ್ಯ ದೇವತೆ ಹಿರೇಕೆರೆ ಕಾವಲುಚೌಡೇಶ್ವರಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಮಂಗಳವಾರ ಸಾವಿರಾರು ಭಕ್ತ ಸಮ್ಮುಖದಲ್ಲಿ ವಿಜೃಂಭಣೆಯಿAದ ನಡೆಯಿತು.

ಹಿರೇಕೆರೆ ಕಾವಲು ಚೌಡೇಶ್ವರಿ ದೇವಿಯು ಸುತ್ತಮುತ್ತಲ ಗ್ರಾಮಗಳ ಆರಾದ್ಯ ದೇವತೆಯಾಗಿದ್ದಾಳೆ. ಜಾತ್ರೆಯ ಸಂದರ್ಭದಲ್ಲಿ ಬುಡಕಟ್ಟು ಸಂಸ್ಕೃತಿಯ ಆಚರಣೆಗಳು ಅನಾವರಣವಾದವು. ಎತ್ತಿನಹಟ್ಟಿ ಗೌಡರ ಮನೆಯಿಂದ ಬಲಿ ಅನ್ನ ತರಲಾಯಿತು. ಹಾಗೂ ಕಡಬನಕಟ್ಟೆ ಗೊಲ್ಲರಹಟ್ಟಿ, ಜೋಗಿಹಟ್ಟಿಯಿಂದ ಕಾಸು ಮೀಸಲು, ಮೊಸರು ಕುಂಭ, ಜಿನಿಗೆಹಾಲು ತಂದು ದೇವರಿಗೆ ಮತ್ತು ರಥದ ನಾಲ್ಕು ಚಕ್ರಗಳಿಗೆ ಎಡೆಹಾಕಿದರು. ಹಾಗೂ ಕಹಳೆ, ಉರುಮೆಗಳು ಸೇರಿದಂತೆ ಹಲವು ಜಾನಪದ ಆಚರಣೆಗಳು ಕಂಡು ಬಂದವು.



ರಥೋತ್ಸವಕ್ಕೂ ಮೊದಲು ಮುಕ್ತಿ ಬಾವುಟ ಹಾರಾಜು ಪ್ರಕ್ರಿಯೆಯಲ್ಲಿ ಎತ್ತಿನಹಟ್ಟಿ ಗ್ರಾಮದ ಎಸ್.ಟಿ.ತಿಪ್ಪೇಸ್ವಾಮಿ ರೂ.90ಸಾವಿರಕ್ಕೆ ಹರಾಜಿನಲ್ಲಿ ತೆಗೆದುಕೊಂಡರು. ನಂತರ ಮಹಾಮಂಗಳಾರತಿ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಹಲವು ಬಣ್ಣಗಳ ಬಾವುಟಗಳಿಂದ ಸುಂದರವಾಗಿ ಅಲಂಕೃತಗೊAಡ ರಥವನ್ನು ದೇವಾಲಯದ ಎದುರು ಇರುವ ಪಾದಗಟ್ಟೆಯ ಬಳಿಗೆ ನೆರೆದ ಸಾವಿರಾರು ಭಕ್ತರು ಎಳೆದು ತಂದು ಪೂಜೆಯನ್ನು ಮಾಡಿ, ಪುನಃ ದೇವಾಲಯದ ಸ್ವಸ್ಥಾನಕ್ಕೆ ರಥವನ್ನು ಎಳೆದು ತಂದು ದೇವರನ್ನು ಗುಡಿದುಂಬಿಸಲಾಯಿತು.

ನೆರೆದ ಸಾವಿರಾರು ಭಕ್ತರು ರಥಕ್ಕೆ ಕಾಳುಮೆಣಸು, ಚೂರುಬೆಲ್ಲ, ಮಂಡಕ್ಕಿ ಸೇರಿದಂತೆ ದವಸ ದಾನ್ಯಗಳನ್ನು ಎರಚಿ ಭಕ್ತಿಯನ್ನು ಅರ್ಪಿಸಿದರು. ಮೂರು ದಿನಗಳ ಜಾತ್ರೆ ಇದಾಗಿದ್ದು, ಸಾವಿರಾರು ಭಕ್ತರು ಭೇಟಿ ನೀಡುವ ಹಿನ್ನೆಲೆಯಲ್ಲಿ ಸಾಕಷ್ಟು ಅಂಗಡಿ ಮುಂಗಟ್ಟುಗಳಲ್ಲಿ ತಿಂಡಿ ತಿನಿಸುಗಳು ಮತ್ತು ಅಲಂಕಾರಿಕ ವಸ್ತುಗಳ ಕೊಳ್ಳುವಲ್ಲಿ ಜನರು ನಿರತರಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಥೋತ್ಸವಕ್ಕೆ ಜಾನಪದ ಕಲಾವಾದ್ಯಗಳು ಮೆರಗು ನೀಡಿದ್ದವು.

ಇದೇವೇಳೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ದೇವಾಲಯ ಸಮಿತಿ ಅಧ್ಯಕ್ಷ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ(ಎತ್ತಿನಹಟ್ಟಿ ಗೌಡ್ರು), ಕಾರ್ಯದರ್ಶಿ ಎಂ.ವೈ.ಟಿ.ಸ್ವಾಮಿ, ನಿವೃತ್ತ ಕೆಎಎಸ್ ಅಧಿಕಾರಿ ಎನ್.ರಘುಮೂರ್ತಿ, ಜೆ.ಪಿ.ರವಿಶಂಕರ್, ಜಿ.ಟಿ.ದೇವರಾಜ್, ಪ.ಪಂ.ಸದಸ್ಯರಾದ ಟಿ.ಮಹೇಶ್ವರಿ, ಸುನೀತಾ, ಎಂ.ಟಿ.ಮಂಜುನಾಥ್, ಪಿ.ಓಬಯ್ಯ ಮುಖಂಡರಾದ ಪಿ.ಯು.ಸುನೀಲ್‌ಕುಮಾರ್, ಚಿನ್ನಯ್ಯ, ಕಾಕಸೂರಯ್ಯ ಮತ್ತು ಸ್ಥಳೀಯ ಗ್ರಾ.ಪಂ.ಪ್ರತಿನಿಧಿಗಳು, ಸಾವಿರಾರು ಭಕ್ತರು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ