LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ರಸ್ತೆ ದುರಸ್ಥಿ ಕಾಮಗಾರಿ ಯಾವಾಗ…?

ಟಿ.ಟಿ.ಹರೀಶ್ ತಿಮ್ಮಪ್ಪಯ್ಯನಹಳ್ಳಿ

ನಾಯಕನಹಟ್ಟಿ : ತಳಕು, ಚಳ್ಳಕೆರೆ, ಮನಮೈನಹಟ್ಟಿ, ನೇರಲಗುಂಟೆ, ಕಾತ್ರಿಕೇನಹಟ್ಟಿ, ಎನ್.ದೇವರಹಳ್ಳಿ, ಮಹದೇವಪುರ, ಗೌರಿಪುರ, ನಾಯಕನಹಟ್ಟಿ, ಮಲ್ಲೂರಹಳ್ಳಿ, ಮಲ್ಲೂರಹಟ್ಟಿ, ಜಾಗನೂರಹಟ್ಟಿ, ರೇಖಲಗೆರೆ, ತುರುವನೂರು ಹೋಬಳಿಯ ಬೊಮ್ಮಕ್ಕನಹಳ್ಳಿ, ಹಾಯ್ಕಲ್, ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳು ಬಿದ್ದಿದ್ದು ಅಪಾಯಕ್ಕೆ ಅಹ್ವಾನಿಸುತ್ತಿದೆ. ಈ ಮುಖ್ಯ ರಸ್ತೆಗಳಲ್ಲಿ ಬೈಕ್ ಸವಾರು, ತ್ರಿಚಕ್ರವಾಹನ, ರೈತರು, ವಿಶೇಷ ಚೇತನರು, ಇದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ವಾಹನ ಸವಾರರು ಯಾಮಾರಿ ಬಿದ್ದರೆ ನರಕಕ್ಕೆ ಹೋಗುವುದು ಗ್ಯಾರೆಂಟಿ ಇದರಲ್ಲಿ ಎರಡು ಮಾತಿಲ್ಲ. ಹಲವಾರು ಸವಾರರು ಮಳೆ ಬಂದ ಸಂದರ್ಭದಲ್ಲಿ ರಸ್ತೆ ಕಾಣದೆ ತಗ್ಗು ದಿನ್ನಿಗಳ ಆಯ ತಪ್ಪಿ ಬಿದ್ದು ಕೈಕಾಲು ಮುರಿದ ಘಟನೆಗಳು ಸಂಭವಿಸಿದೆ. ದ್ವಿಚಕ್ರ ವಾಹನ ಸವಾರರು ಬೆನ್ನುಮೂಳೆ ಮುರಿದು ಪ್ರಾಣವನ್ನು ಕಳೆದುಕೊಳ್ಳಲಿ ಚಿಂತೆಯಿಲ್ಲ. ಆದರೂ ತನಗೆ ಸಂಬಂಧವಿಲ್ಲವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ದೊಡ್ಡ ದೊಡ್ಡ ಗುಂಡಿಗಳಿದ್ದು ಅವುಗಳನ್ನು ಮುಚ್ಚಿ ಎಲ್ಲಾ ವಾಹನ ಸವಾರರಿಗೆ ಅನುಕೂಲ ಕಲ್ಪಿಸಬೇಕೆಂದು ಸೌಜನ್ಯ ಕೂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಇಲ್ಲದಿರುವುದು ನಾಚಿಗೆಡಿನ ವಿಷಯ. ಚುನಾವಣೆ ಸಂದರ್ಭದಲ್ಲಿ ನಮಗೆ ಉತ್ತಮ ಗುಣಮಟ್ಟದ ರಸ್ತೆಗಳನ್ನು ಮಾಡಿಸಿಕೊಡುತ್ತೇವೆ ಎಂದು ಭರವಸೆ ನೀಡುತ್ತಾರೆ. ಒಮ್ಮೆ ಗೆದ್ದ ಮೇಲೆ ಇತ್ತಕಡೆ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತ ಪಡಿಸಿದರು.

 

ರಾಜೀವ್ ವಿದ್ಯಾರ್ಥಿ ಘಟಕದ ಅಧ್ಯಕ್ಷರು ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಕರ್ನಾಟಕ ಪ್ರಸನ್ನ ಮಾತನಾಡಿ ಗ್ರಾಮೀಣ ಪ್ರದೇಶ ಭಾಗದತ್ತ ಮುಖ ಮಾಡಿದರೆ ಮೊದಲು ಆಹ್ವಾನಿಸುವುದು ಗುಂಡಿ ಬಿದ್ದ ರಸ್ತೆಗಳು. ಅಲ್ಲಲ್ಲಿ ಚೂರು ಪಾರು ಡಾಂಬರ್ ಮೆತ್ತಿಕೊಂಡ ಕೊರಕಲು ಬಿದ್ದ ಮಣ್ಣಿನ ಮಾರ್ಗಗಳು. ಆ ರಸ್ತೆಯಲ್ಲೇ ಪ್ರಯಾಸಪಟ್ಟು ಸಾಗಬೇಕಾದ ಅನಿವಾರ್ಯತೆ ಗ್ರಾಮೀಣ ಜನರದ್ದು.

 

ಪ್ರಸಕ್ತ ವರ್ಷ ವಾಡಿಕೆಗಿಂತಲೂ  ಹೆಚ್ಚು ಮಳೆ ಬಿದ್ದ ಪರಿಣಾಮ ಗ್ರಾಮೀಣ ಭಾಗದ ರಸ್ತೆಗಳು ಬಹುತೇಕ ಹಾಳಾಗಿವೆ. ಅವುಗಳನ್ನು ತುರ್ತಾಗಿ ದುರಸ್ತಿ ಮಾಡಬೇಕಾದ ಸವಾಲು ಸರ್ಕಾರಕ್ಕಿದೆ. ನಾಯಕನಹಟ್ಟಿ ಹೋಬಳಿಯ ಪ್ರಮಖ ರಸ್ತೆಗಳೇ ಗುಂಡಿ ಬಿದ್ದು ನಾಗರಿಕರ ಓಡಾಟ ದುಸ್ತರವಾಗಿದೆ. ಇನ್ನು ಗ್ರಾಮೀಣ ರಸ್ತೆಗಳ ಸ್ಥಿತಿ ಅದಕ್ಕಿಂತಲೂ ಶೋಚನೀಯವಾಗಿದೆ. ಅಲ್ಲಲ್ಲಿ ರಸ್ತೆಗಳಿಗೆ ಕಿರು ಸೇತುವೆಗಳ ಬಳಿ ಕೊರಕಲು ಬಿದ್ದು ಹಾಳಾಗಿದ್ದು, ಬಹುತೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಗ್ರಾಮೀಣ ರಸ್ತೆಗಳು ತೀರಾ ಹದಗೆಟ್ಟಿದ್ದು, ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಬಹುತೇಕ ರಸ್ತೆಗಳಲ್ಲಿ ವಾಹನ ಸಂಚರಿಸದAತಹ ಸ್ಥಿತಿ ಇದೆ. ಶೀಘ್ರ ಈ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ದುರಸ್ತಿಗೆ ಬಿಡುಗಡೆಯಾದ ಅನುದಾನಕ್ಕೆ ಪರ್ಸಂಟೇಜ್ ಹಾವಳಿ ಹೆಚ್ಚಾಗಿದೆ. ಒಂದು ಕಿ.ಮೀ ರಸ್ತೆ ನಿರ್ಮಿಸಲು ಒಂದು ಲಕ್ಷ ಬಿಡುಗಡೆಯಾಗಿದೆ ಎಂದರೆ ಅದರಲ್ಲಿ ಶೇ 60ರಷ್ಟು ಲಂಚಕ್ಕೆ ಹಣ ಕೊಡಬೇಕು. ಉಳಿದದ್ದು ಶೇ 40 ಮಾತ್ರ. ಈ ಹಣದಲ್ಲಿ ಮೇಲ್ಮೈಗೆ ತೇಪೆ ಹಾಕಿ ರಸ್ತೆ ದುರಸ್ತಿ ಮಾಡಲಾಗುತ್ತದೆ. ಅದು ಮೂರ್ನಾಲ್ಕು ತಿಂಗಳೂ ಬಾಳಿಕೆ ಬರುವುದಿಲ್ಲ. ಮುಂದಿನ ಮಳೆಗಾಲಕ್ಕೆ ಮತ್ತೆ ರಸ್ತೆ ಕಿತ್ತು ಹೋಗುತ್ತದೆ. ಪ್ರತಿ ವರ್ಷ ಇದು ಪುನರಾವರ್ತನೆಯಾಗುತ್ತದೆ. ಈ ಕ್ರಮ ಸರಿಯಲ್ಲ. ಶಾಶ್ವತ ರಸ್ತೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.



ನಾಯಕನಹಟ್ಟಿ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆ  ಕೆಲವು ರಸ್ತೆಗಳಲ್ಲಿ ಗುಂಡಿಗಳಿಂದ ರಾರಾಜಿಸುತ್ತಿದ್ದಾವೇ ಇದಕ್ಕೆ ನೇರವಾಗಿ ಲೋಕೋಪಯೋಗಿ ಇಲಾಖೆ ಬಹಳ ನಿರ್ಲಕ್ಷತೆಯಿಂದ ರಸ್ತೆಯನ್ನು ಮಾಡಿ ವರ್ಷದ ಒಳಗಡೆ ಡಾಂಬರ್ ಕಿತ್ತೋಗಿರುವುದನ್ನು ನೋಡಿದರೆ ಎಷ್ಟು ಕಳಪೆ ಮಟ್ಟದಲ್ಲಿ ರಸ್ತೆಯನ್ನು ನಿರ್ಮಾಣ ಮಾಡಿದ್ದಾರೆಂದು ಗೊತ್ತಾಗುತ್ತದೆ ಈ ಕಳಪೆ ರಸ್ತೆಗಳನ್ನು ನಿರ್ಮಿಸಿದಂತಹವರು  ಕಾರಣರಾಗಿರುತ್ತಾರೆ. ಹಾಗೂ ದಿನವಿಡೀ ಯುವಕರು ವಿದ್ಯಾರ್ಥಿಗಳು ಮಹಿಳೆಯರು ನಾಗರಿಕರು ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಓಡಾಡುವಂಥ ರಸ್ತೆಗಳಲ್ಲಿ ತಗ್ಗು ಗುಂಡುಗಳಿಂದ ಹಲವರು ಬೈಕುಗಳಲ್ಲಿ ಬಿದ್ದು ಗಾಯಗೊಂಡಿರ್ತಾರೆ. ಸಂಚರಿಸುವಂತಹ ವಾಹನಗಳಿಗೆ ತಗ್ಗು ಗುಂಡಿಗಳಿಂದ ಬಹಳ ತೊಂದರೆಯಾಗುತ್ತಿದೆ.

 

ದಯಮಾಡಿ ಇದನ್ನು ಪರಿಗಣನೆಗೆ ತೆಗೆದುಕೊಂಡು ಅತಿ ಶೀಘ್ರವಾಗಿ ಈ ತಗ್ಗು  ಗುಂಡಿಗಳನ್ನು ಮುಚ್ಚಬೇಕೆಂದು ಜಿಲ್ಲಾಡಳಿತಕ್ಕೆ ಹಾಗೂ ಪಟ್ಟಣ ಪಂಚಾಯತಿ ಅಧ್ಯಕ್ಷರು ಹಾಗೂ ಮುಖ್ಯ ಅಧಿಕಾರಿಗಳು ಗಮನ ಹರಿಸಿ ತಗ್ಗು ಗುಂಡುಗಳನ್ನು ಮುಚ್ಚಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ. ವಾಸುದೇವಿ ಮೇಟಿ ಬಣದ ಹೋಬಳಿ ಅಧ್ಯಕ್ಷ ಡಾ.ನಾಗರಾಜ್ ಮೀಸೆ ಆಗ್ರಹಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ