LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಬೆಂಗಳೂರು ವಿವಿಯ ನೂತನ ಕುಲಪತಿಯಾಗಿ ಪ್ರೊ. ಶಿವರಾಜು ನೇಮಕ

ಬೆಂಗಳೂರು ವಿವಿಯ ಇತಿಹಾಸದಲ್ಲೇ ದಲಿತ ಕುಲಪತಿಯಾಗಿ ಪ್ರೊ. ಶಿವರಾಜು ನೇಮಕ

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ. ಶಿವರಾಜು ಸಿ, ಅವರನ್ನು ನೇಮಿಸಿ ರಾಜ್ಯಪಾಲ ಥಾವರಚಂದ್ ಗೆಹಲೋತ್  ಗುರುವಾರ ಆದೇಶ ಹೊರಡಿಸಿದ್ದಾರೆ.

 

ವಿಷಯದ ಸಂಬಂಧಿಸಿದಂತೆ ಬುಧವಾರ ಸಂಜೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯಪಾಲ ಅವರನ್ನು ಭೇಟಿ ಮಾಡಿದ್ದರು. ಇದೇ ಸಮಯದಲ್ಲಿ ನಾನು ಪ್ರತಿನಿಧಿಸುವ ಕನಕಪುರ ಕ್ಷೇತ್ರದವರೇ ಆಗಿರುವ ಪ್ರೊ. ಶಿವರಾಜು ಸಿ, ಅವರನ್ನೇ ನೇಮಿಸಬೇಕು ಎಂದು ಮುಖ್ಯಮಂತ್ರಿ ಒತ್ತಾಯಿಸಿದ್ದು ಬೆಳಕಿಗೆ ಬಂದಿದೆ.

 

ಬೆಂಗಳೂರು ವಿವಿ ಸೇರಿದಂತೆ ರಾಜ್ಯದ 4 ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಗೆ ಸಂಬಂಧಿಸಿದ ಕಡತಗಳನ್ನು ಸ್ವತಃ ಮುಖ್ಯಮಂತ್ರಿಯವರೇ ರಾಜ್ಯಪಾಲರ ಕಚೇರಿಗೆ ಹೋಗಿದ್ದರು. ಬೆಂಗಳೂರು ವಿವಿಯಕ್ಕೆ ತಾವು ಹೇಳಿದವರನ್ನೇ ನೇಮಿಸಬೇಕು ಎಂದು ಒತ್ತಾಯಿಸಿದ ಬಗ್ಗೆ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

 

ಕರ್ನಾಟಕ ಇತಿಹಾಸದಲ್ಲೇ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಬೆಂಗಳೂರು ವಿವಿಯ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರ ದಲಿತ ಸಮುದಾಯದಿಂದ ಪ್ರಥಮ ಕುಲಪತಿಯಾಗಿ ಆಯ್ಕೆ ಮಾಡಿದ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಬೆಂಬಲದಿಂದ ಹಾಗೂ ವಿವಿಯ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರು ಎನ್ನುವ ಅಂಶವು ಬೆಳಕಿಗೆ ಬಂದಿದೆ.

 

ಹಾಲಿ ಕುಲಪತಿಯಾಗಿರುವ ಪ್ರೊ. ಜಯಕರ ಎಸ್.ಎಂ. ಅವರ ಅಧಿಕಾರಾವಧಿ (ಶುಕ್ರವಾರ) ತೆರವಾಗುತ್ತಿರುವ ಸ್ಥಾನಕ್ಕೆ ಬೆಂಗಳೂರು ವಿವಿಯ ನೂತನ ಕುಲಪತಿಗಳಾಗಿ ಪ್ರೊ. ಶಿವರಾಜು ಸಿ ಅವರು ಇಂದು ಸಂಜೆ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ ಎಂದ ಮೂಲಗಳು ತಿಳಿಸುವೆ.

 

ಪ್ರೊ. ಶಿವರಾಜು ಸಿ ಅವರು ಪ್ರಸ್ತುತ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿ ಹಾಗೂ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ, ಹಿಂದೆಯೇ ಇದೇ  ವಿವಿಯಲ್ಲಿ ಮೌಲ್ಯಮಾಪನ ಕುಲಸಚಿವರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು, ವಿದ್ಯಾರ್ಥಿ ಸ್ನೇಹಿ, ನೌಕರರ ಪರವಾಗಿ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಯಶಸ್ವಿಯಾಗಿ ಮತ್ತು ಉತ್ತಮ ಆಡಳಿತಗಾರರಾಗಿ ಅನುಭವ ಹೊಂದಿದ್ದಾರೆ.

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST