LIVE TV StateNationalPoliticsCrimeEntertainmentSportsEducationFINANCE & TAXATION
State News

ಕೇಂದ್ರವು ಸಂವಿಧಾನ ಬದಲಿಸಲು ಸಂಚು ರೂಪಿಸಿದೆ : ಬಿ.ಕೆ.ಹರಿಪ್ರಸಾದ್ ಆರೋಪ

ಬೆಂಗಳೂರು:  ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಮೂಲಕ ದೇಶದಲ್ಲಿ ಎರಡನೇ ಮೂರರಷ್ಟು ಅಧಿಕಾರದ ಬಲ ಪಡೆದು, ಸಂವಿಧಾನ ಬದಲಾವಣೆ ಮಾಡಲು ಬಿಜೆಪಿ ಸಂಚು ರೂಪಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಜನರ ಮನಸ್ಸನ್ನು ಗೆದ್ದು ನೇರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ಎಸ್‌‍ಐಆರ್ಮೂಲಕ ಕೆಲ ರಾಜ್ಯಗಳ ಚುನಾವಣೆಯಲ್ಲಿ ಅಧಿಕಾರ ಗಿಟ್ಟಿಸಿಕೊಂಡಿದೆ. ಇದೇ ರೀತಿ ಎರಡನೇ ಮೂರರಷ್ಟು ಬಲಾಬಲವನ್ನು ಕ್ರೂಢಿಕರಿಸಿಕೊಂಡು ನಂತರ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಎಚ್ಚರಿಸಿದರು.

ಬಿಜೆಪಿ ದೇಶದಲ್ಲಿ ಜೆಡಿಯು, ಅಕಾಲಿಕ ದಳ, ಶಿವಸೇನೆ, ತೃಣಮೂಲ ಕಾಂಗ್ರೆಸ್‌‍ ಸೇರಿದಂತೆ ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ವಿಭಜಿಸಿ, ತನ್ನ ಬೇಳೆ ಬೇಯಿಸಿಕೊಂಡಿದೆ. ಕರ್ನಾಟಕದಲ್ಲಿ ಜೆಡಿಎಸ್‌‍ ಮಾತ್ರ ಪ್ರಾದೇಶಿಕವಾಗಿ ಉಳಿದುಕೊಂಡಿದೆ. ಈಗ ಬಿಜೆಪಿಯವರು ಅದರ ಮೇಲೂ ಕಣ್ಣಿಟ್ಟಿದ್ದಾರೆ ಎಂದು ಹೇಳಿದರು.

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರಿಗೆ, ಪ್ರಹ್ಲಾದ್ಜೋಷಿ ಅವರ ಜೊತೆ ಹೋಗುವಂತಹ ದುಃಸ್ಥಿತಿ ಬರಬಾರದಿತ್ತು. ಹಿಂದೆ ಇದೇ ಕುಮಾರಸ್ವಾಮಿ ಅವರು, ಜೋಷಿ ಅವರ ಬಗ್ಗೆ ಏನೆಂದು ಟೀಕೆ ಮಾಡಿದ್ದರು ಎಂಬುದನ್ನು ನಾನು ನೆನಪಿಸಲು ಬಯಸುವುದಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿಯವರು, ಕುಮಾರಸ್ವಾಮಿ ಅವರನ್ನು ದಾಳವನ್ನಾಗಿ ಬಳಿಸಿ, ಬಲಿಪಶು ಮಾಡುತ್ತಿದ್ದಾರೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿರುವ 5.65ಕೋಟಿ ಮತದಾರರ ಪಟ್ಟಿ ಮ್ಯಾಪಿಂಗ್ಆಗದೇ ಇರುವ 50 ಲಕ್ಷ ಜನರಿದ್ದಾರೆ. ಅವರನ್ನು ಕೈ ಬಿಡುವ ಹುನ್ನಾರ ನಡೆದಿದೆ. ರಾಮನಗರದ ಮಸೀದಿ ಅಥವಾ ಇತರ ಕಡೆಗಳಲ್ಲಿ ಎಸ್‌‍ಐಆರ್ಪ್ರಕ್ರಿಯಗಳ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿವೆ. ಜನ ಪ್ರಾತಿನಿದ್ಯ ಕಾಯ್ದೆಯಡಿ ಜಲವಸತಿ ಶ್ರೀಯೋಭಿವೃದ್ಧಿ ಸಂಘಗಳು, ಚರ್ಚ್‌, ಮಸೀದಿಯಂತಹ ಧಾರ್ಮಿಕ ಆವರಣದಲ್ಲಿ ಜಾಗೃತಿ ಮೂಡಿಸಲು ಅವಕಾಶ ಇದೆ.

ಆಯೋಗ ನೀಡಿರುವ ಅರ್ಜಿ ನಮೂನೆಗಳನ್ನು ಭರ್ತಿ ಮಾಡಲು ಪದವಿದಾರರಿಗೆ ಭರ್ತಿ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಮಸೀದಿಗಳಲ್ಲಿ, ದೇವಸ್ಥಾನಗಳಲ್ಲಿ ಅರ್ಜಿ ಭರ್ತಿ ಮಾಡುವ ಪ್ರಕ್ರಿಯೆಗಳಾಗಿರಬಹುದು ಇದು ತಪ್ಪಲ್ಲ ಎಂದರು.

ಹಿಂದೆ ಬಿಜೆಪಿಯವರು ಚುನಾವಣೆ ಗೆಲ್ಲಲು ನಾನಾ ರೀತಿಯ ಹುನ್ನಾರ ನಡೆಸಿದ್ದರು. ಸಿಎಎ, ಎನ್ಆರ್ಸಿ ಸೇರಿದಂತೆ ಹಲವಾರು ಕುತಂತ್ರ ನಡೆಸಿದ್ದರು. ಅದು ಸಾಧ್ಯವಾಗಲಿಲ್ಲ. ಈಗ ಎಸ್‌‍ಐಆರ್ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ಷಾ ಕುತಂತ್ರ, ಷಡ್ಯಂತ್ರ ಹುನ್ನಾರಗಳ ಮುಖಾಂತರ ಎರಡನೇ ಮೂರರಷ್ಟು ಬಹುಮತ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ದೇಶದಲ್ಲಿ ನೆಲೆಸಿರುವವರೆಲ್ಲಾ ಇಲ್ಲಿನ ಪ್ರಜೆಗಳು ಎಂದು ಕೇಂದ್ರ ಸಚಿವ ನಿತಿನ್ಗಡ್ಕರಿ ಹೇಳಿದ್ದಾರೆ. ರಾಜ್ಯದಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಪ್ರಹ್ಲಾದ್ಜೋಷಿ, ನಿತಿನ್ಗಡ್ಕರಿಯಿಂದ ಪಾಠ ಕಲಿಯಲಿ ಎಂದು ತಿಳಿ ಹೇಳಿದರು.ಎಸ್‌‍ಐಆರ್ಬಗ್ಗೆ ಬಿಜೆಪಿಯಲ್ಲೇ ಗೊಂದಲಗಳಿವೆ. ಪ್ರಹ್ಲಾದ್ಜೋಷಿ ಕ್ಷುಲ್ಲಕ ರಾಜಕಾರಣ ಮಾಡುವುದು ಬಿಟ್ಟು ರಾಜ್ಯದ ಅಭಿವೃದ್ಧಿಗೆ ಕೆಂದ್ರದಿಂದ ನೆರವು ಕೊಡಿಸುವ ಪ್ರಯತ್ನ ಮಾಡಲಿ ಎಂದು ತಿರುಗೇಟು ನೀಡಿದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ತಡೆಗಟ್ಟಬಹುದು-ಡಾ. ನಿಗ್ಗುಡಗಿವಿಜಯರಾಘವೆಂದ್ರ ಅಭಿನಯದ “ರುದ್ರಾಭಿಷೇಕಂ’ ಚಿತ್ರದ ಟ್ರೈಲರ್ ಬಿಡುಗಡೆ ಪಠ್ಯದ ಜೊತೆಗೆ ಮೌಲ್ಯವರ್ಧಿತ ಕೋರ್ಸಗಳ ಆಯ್ಕೆ ಬಹುಮುಖ್ಯ-ಯಡ್ರಾಮಿ