LIVE TV StateNationalPoliticsCrimeEntertainmentSportsEducationFINANCE & TAXATION
State News

ಡಾ. ಈಶ್ವರ್ ರವರಿಗೆ ಸನ್ಮಾನಿಸಿದ ಅನನ್ಯ ಕುಟುಂಬ

ಬೆಂಗಳೂರು:  ಬೆಂಗಳೂರು ದಕ್ಷಿಣ ತಾಲ್ಲೂಕು ವ್ಯಾಪ್ತಿಯ ರಾಂಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿಯ ಸಂವಹನ ವಿಭಾಗದಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆದ ನಿಮಿತ್ತ ಡಾ. ಈಶ್ವರ್ ಅವರನ್ನು ಅನನ್ಯ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

 

ವೇಳೆ ಅನನ್ಯ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ರಂಜಿತ ರಾಜೇಶ್ ರಾಂಪುರ ಅವರು ಮಾತನಾಡಿ, ನಮ್ಮ ಮನೆಯ ಹೆಮ್ಮೆ, ನಮ್ಮೆಲ್ಲರ ಪ್ರೀತಿಯ ಹುಡುಗ, ನಮ್ಮ ಅನನ್ಯ ಕಂದನಾದ ಡಾ. ಈಶ್ವರ್ ಅವರು ಪಿಎಚ್‌.ಡಿ ಪದವಿಯನ್ನು ಯಶಸ್ವಿಯಾಗಿ ಪಡೆದಿರುವುದು ನಮ್ಮೆಲ್ಲರಿಗೂ ಅಪಾರ ಸಂತಸ ಮತ್ತು ಹೆಮ್ಮೆಯ ವಿಷಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 

ಡಾ. ಈಶ್ವರ್ ಹಿಂದೆ ನಮ್ಮ ಅನನ್ಯ ಸಂಸ್ಥೆಯಲ್ಲಿ ತರಬೇತಿ ಪಡೆದು ರಾಜ್ಯದ ಪ್ರತಿಷ್ಠಿತ ದಿನಪತ್ರಿಕೆಗಳಲ್ಲಿ, ಸಂಜೆ ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇನ್ನೊಂದು ಪ್ರಮುಖ ವಿಷಯವೆಂದರೆ ಬೆಂಗಳೂರು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸಂಶೋಧನಾ ವಿದ್ಯಾರ್ಥಿಯಾಗಿ ಇತ್ತೀಚೆಗೆ ತಮ್ಮ ಮಹಾಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದು ಹೆಮ್ಮೆಯ ಸಂಗತಿ ಎಂದರು.

 

ಡಾ. ಈಶ್ವರ್ ಅವರ ನಿರಂತರ ಪರಿಶ್ರಮ, ಶಿಸ್ತು, ಸಂಕಲ್ಪ ಮತ್ತು ಜ್ಞಾನದ ಹಂಬಲಕ್ಕೆ ಸಾಧನೆ ಒಂದು ಅದ್ಭುತ ಫಲವಾಗಿದೆ. ಮಹತ್ತರ ಕ್ಷಣದಲ್ಲಿ ನಮ್ಮ ಕುಟುಂಬದ ಎಲ್ಲ ಸದಸ್ಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದು, ಅವರ ಮುಂದಿನ ಜೀವನ ಮತ್ತಷ್ಟು ಯಶಸ್ಸು, ಗೌರವ ಮತ್ತು ಸಾಧನೆಗಳಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

 

ಇವರ ಸಾಧನೆ ನಮ್ಮೆಲ್ಲರಿಗೂ ಕೀರ್ತಿ ತಂದಿದ್ದು, ಮುಂದಿನ ಪೀಳಿಗೆಗಳಿಗೆ ಪ್ರೇರಣೆಯಾಗಲಿ. ನಿಮಗೆ ಉತ್ತಮ ಆಯುರಾರೋಗ್ಯ ಹಾಗೂ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವ ಶಕ್ತಿ ನೀಡಲಿ ಎಂದು ಭವಿಷ್ಯದ ಬಗ್ಗೆ ಪ್ರೇರಣೆಯದಾಯಕವಾದ ಹಿತನುಡಿಗಳನ್ನು ಹೇಳಿದರು.

 

ಇದೇ ಸಮಯದಲ್ಲಿ ಅನನ್ಯ ಸಂಸ್ಥೆಯ ಸಂಸ್ಥಾಪಕ ಪ್ರದಾನ ಕಾರ್ಯದರ್ಶಿ ರಾಜೇಶ್ ರಾಂಪುರ, ಮರಿಲಿಂಗಮ್ಮ, ಜಯಲಕ್ಷ್ಮಿ, ರತ್ನಮ್ಮ, ಶಶಿಕಲಾ, ಕುಮಾರ್, ಯಶ್ವಂತ್, ಶಿಲ್ಪಶ್ರೀ, ಕೀರ್ತನ, ಮನ್ವಿತ್ ರಾಜ್, ಚಂದನ, ಕವನ, ಪೂರ್ಣಚಂದ್ರ, ಕಲಿಕಾರ್ಥಿ ಅಮರೇಶ್ ಸಿರಿಗೇರಿ ಮತ್ತಿತರರು ಸೇರಿದಂತೆ ಅನನ್ಯ ಬಳಗದವರು ಉಪಸ್ಥಿತರಿದ್ದರು.

 

ಡಾ. ಈಶ್ವರ್ ಅವರ ನಿರಂತರ ಪರಿಶ್ರಮ, ಶಿಸ್ತು, ಸಂಕಲ್ಪ ಮತ್ತು ಜ್ಞಾನದ ಹಂಬಲಕ್ಕೆ ಸಾಧನೆ ಒಂದು ಅದ್ಭುತ ಫಲ, ಮಹತ್ತರ ಕ್ಷಣದಲ್ಲಿ ನಮ್ಮ ಕುಟುಂಬದ ಎಲ್ಲ ಸದಸ್ಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದು, ಅವರ ಮುಂದಿನ ಜೀವನ ಮತ್ತಷ್ಟು ಯಶಸ್ಸು, ಗೌರವ ಮತ್ತು ಸಾಧನೆಗಳಿಂದ ಕೂಡಿರಲಿ.

- ರಾಜೇಶ್ ರಾಂಪುರ, ಕಾರ್ಯದರ್ಶಿ, ಅನನ್ಯ ಸಂಸ್ಥೆ

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ತಡೆಗಟ್ಟಬಹುದು-ಡಾ. ನಿಗ್ಗುಡಗಿವಿಜಯರಾಘವೆಂದ್ರ ಅಭಿನಯದ “ರುದ್ರಾಭಿಷೇಕಂ’ ಚಿತ್ರದ ಟ್ರೈಲರ್ ಬಿಡುಗಡೆ ಪಠ್ಯದ ಜೊತೆಗೆ ಮೌಲ್ಯವರ್ಧಿತ ಕೋರ್ಸಗಳ ಆಯ್ಕೆ ಬಹುಮುಖ್ಯ-ಯಡ್ರಾಮಿ