LIVE TV StateNationalPoliticsCrimeEntertainmentSportsEducationFINANCE & TAXATION
State News

ಸಂಗೀತಾಸಕ್ತರನ್ನು ರಂಜಿಸಿದ "ನಾದ ನಮನ" ಸಂಗೀತ ಸಂಜೆ

ಬೆಂಗಳೂರು : ಸಾಕಿ ಚಾರಿಟೇಬಲ್ ಟ್ರಸ್ಟ್ ನಿಂದ ನಗರದ ಎಪಿಎಸ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ "ನಾದ ನಮನ" ಸಂಗೀತ ಕಾರ್ಯಕ್ರಮ ಸಂಗೀತಾಸಕ್ತರಿಗೆ ಅಪೂರ್ವ ಸಂಗೀತ ರಸದೌತಣವನ್ನು ಉಣಬಡಿಸಿತು.

ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಹಾಗೂ ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ಕುಮಾರ್ ಅವರ ಅಮರ ಗೀತೆಗಳಿಗಾಗಿ ಕಾರ್ಯಕ್ರಮವನ್ನು ಸಮರ್ಪಿಸಲಾಗಿತ್ತು.

ಗಾಯಕರಾದ ಕಿರಣ್, ರಮೇಶ್, ಸಿರಿ ಹಾಗೂ ಲಕ್ಷ್ಮಿ ಅವರು ಎಸ್. ಜಾನಕಿ ಮತ್ತು ಡಾ. ರಾಜ್ಕುಮಾರ್ ಅವರ ಜನಪ್ರಿಯ ಗೀತೆಗಳನ್ನು ಮನೋಜ್ಞವಾಗಿ ಹಾಡಿ ಪ್ರೇಕ್ಷಕರನ್ನು ಸಂಗೀತ ಲೋಕಕ್ಕೆ ಕರೆದೊಯ್ದರು. ಅವರ ಸುಮಧುರ ಗಾಯನಕ್ಕೆ ಸಭಾಂಗಣದಲ್ಲಿ ಸಂಗೀತಾಸಾಕ್ತರು ಹುಚ್ಚೆದ್ದು ಕುಣಿದರು.

ಕಾರ್ಯಕ್ರಮದ ನಿರೂಪಕರಾದ ಸಾವಿತಾ ಅವರು ಪ್ರತಿಯೊಂದು ಹಾಡಿನ ಹಿನ್ನೆಲೆ, ಗೀತರಚನೆಕಾರರಾದ ದಿವಂಗತ ಚಿ. ಉದಯಶಂಕರ್ ಹಾಗೂ ಕೆ. ಸೀತಾರಾಮ ಶಾಸ್ತ್ರಿ ಅವರ ಸಾಹಿತ್ಯ ವೈಶಿಷ್ಟ್ಯವನ್ನು ಮನಮುಟ್ಟುವ ರೀತಿಯಲ್ಲಿ ಪರಿಚಯಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ಕಾರ್ಯಕ್ರಮವನ್ನು ಎಪಿಎಸ್ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಸಿಎ ಡಾ. ವಿಷ್ಣು ಭರತ್ ಆಲಂಪಳ್ಳಿ ಉದ್ಘಾಟಿಸಿದರು. ಸಂದರ್ಭದಲ್ಲಿ ಸಂಗಾತಿ ವೆಂಕಟೇಶ್, ಎಚ್.ಸಿ. ಕೃಷ್ಣ, ಲಕ್ಷ್ಮೀಕಾಂತ್, ಕಿರಣ್ ಕುಮಾರ್, ರಮೇಶ್ ಚಂದ್ರ ಹಾಗೂ ಮೇದಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

600 ಆಸನಗಳ ಸಾಮರ್ಥ್ಯ ಹೊಂದಿರುವ ಎಪಿಎಸ್ ಆಡಿಟೋರಿಯಂ ಸಂಪೂರ್ಣ ಭರ್ತಿಯಾಗಿದ್ದು, ಕಾರ್ಯಕ್ರಮಕ್ಕೆ ಸಂಗೀತಾಭಿಮಾನಿಗಳಿಂದ ದೊರೆತ ಅಭೂತಪೂರ್ವ ಸ್ಪಂದನೆಗೆ ಸಾಕ್ಷಿಯಾಯಿತು. ನೆನಪುಗಳನ್ನು ಮರುಕಳಿಸಿದ ಸುಮಧುರ ಗೀತೆಗಳನ್ನು ಆಲಿಸಿದ ಪ್ರೇಕ್ಷಕರು ಪ್ರತಿಯೊಂದು ಗಾಯನಕ್ಕೂ ಹರ್ಷೋದ್ಗಾರ ಹಾಗೂ ಭರ್ಜರಿ ಕರತಾಡನದ ಮೂಲಕ ಕಲಾವಿದರನ್ನು ಅಭಿನಂದಿಸಿದರು.

ಕನ್ನಡ ಸಂಗೀತದ ಶ್ರೀಮಂತ ಪರಂಪರೆಯನ್ನು ಸ್ಮರಿಸುವ ವಿಶೇಷ ಸಂಗೀತ ಸಂಜೆ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ನೆನಪುಗಳನ್ನು ಮೂಡಿಸಿ ಯಶಸ್ವಿಯಾಗಿ ಸಂಪನ್ನಗೊಂಡಿತು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ತಡೆಗಟ್ಟಬಹುದು-ಡಾ. ನಿಗ್ಗುಡಗಿವಿಜಯರಾಘವೆಂದ್ರ ಅಭಿನಯದ “ರುದ್ರಾಭಿಷೇಕಂ’ ಚಿತ್ರದ ಟ್ರೈಲರ್ ಬಿಡುಗಡೆ ಪಠ್ಯದ ಜೊತೆಗೆ ಮೌಲ್ಯವರ್ಧಿತ ಕೋರ್ಸಗಳ ಆಯ್ಕೆ ಬಹುಮುಖ್ಯ-ಯಡ್ರಾಮಿ