LIVE TV StateNationalPoliticsCrimeEntertainmentSportsEducationFINANCE & TAXATION
State News

ಬಳ್ಳಾರಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿ

ಬಳ್ಳಾರಿ: ಟ್ರೇಡಿಷನಲ್ ಶೊಟೊಕಾನ್ ಕರಾಟೆ ಅಕಾಡೆಮಿ ಕರ್ನಾಟಕ ಆಯೋಜಿಸಿದ 3ನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯನ್ನು  ಬಳ್ಳಾರಿ ಕಿಂಗ್ಸ್ ಪ್ಯಾಲೇಸ್ ನಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಪಂದ್ಯಾವಳಿಯಲ್ಲಿ ಸುಮಾರು 900 ಕ್ಕೂ ಹೆಚ್ಚು ಕರಾಟೆ ಪಟುಗಳು ಕಟಾ ಮತ್ತು ಕುಮಿತೆ ವಿಭಾಗಗಳಲ್ಲಿ  ಭಾಗವಹಿಸಿದ್ದರು,

 

ಕಾರ್ಯಕ್ರಮವನ್ನು  ಮಹಾನಗರ ಪಾಲಿಕೆಯ ಮಹಾ ಪೌರರಾದ ಪಿ ಗಾದೆಪ್ಪ ರವರು ಉದ್ಘಾಟಿಸಿ  ಮಾತನಾಡಿ, ಈ ರಾಷ್ಟ್ರ   ಕರಾಟೆ ಪಂದ್ಯಾವಳಿಯು  ನಮ್ಮ  ಬಳ್ಳಾರಿಯಲ್ಲಿ ನಡೆಯುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಮಹಿಳೆಯರಿಗೆ ಕರಾಟೆಯ ಅಗತ್ಯ ಇದೆ. ಕರಾಟೆ ತರಬೇತಿ ಪಡೆಯುವುದರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು ಎಂದರು.

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಹಾಗೂ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಅಸೋಸಿಯೇಷನ ಅಧ್ಯಕ್ಷರಾದ  ಸಿ ಎಸ್ ಅರುಣ್ ಮಾಚಯ್ಯ ಮಾತನಾಡಿ ಕರಾಟೆ ಇಂದು ದೇಶದ ಪ್ರತಿ ಶಾಲಾ ಕಾಲೇಜುಗಳ ಹಂತದಲ್ಲಿ ತರಬೇತಿಗಳು ನೀಡುತ್ತಿದ್ದು   ಸರ್ಕಾರ  ವಿಶೇಷವಾಗಿ ಹೆಣ್ಣು ಮಕ್ಕಳಿಗೆ ತರಬೇತಿಯನ್ನು ಕೊಡಿಸುವ ಮೂಲಕ ಆತ್ಮಸ್ಥೈರ್ಯವನ್ನು ತುಂಬುವ ಮೂಲಕ ನಮ್ಮ ರಾಜ್ಯದ ಸಾವಿರಾರು ಕರಾಟೆ ಶಿಕ್ಷಕರಿಗೆ ಸರ್ಕಾರವು ಸಹಾಯಧನ ಕೂಡ ನೀಡುತ್ತಿದ್ದು ಇದೆ ನಿಟ್ಟಿನಲ್ಲಿ ಬಳ್ಳಾರಿಯಲ್ಲಿ ಪಂದ್ಯಾವಳಿಯು‌ ಬಹಳ ಅಚ್ಚುಕಟ್ಟಾಗಿ ಆಯೋಜನೆ ಮಾಡಿದ ಆಯೋಜಕರ ಕಾರ್ಯ ಶ್ಲಾಘನಿಯ‌ ಎಂದರು

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುಂಡರಗಿ ನಾಗರಾಜ್, ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷರಾದ ಮೊಹಮ್ಮದ್ ನದೀಮ್,  ಕರ್ನಾಟಕ ಸ್ಟೇಟ್ ಪೊಲೀಸ್ ತರಬೇತುದಾರಾರದ ಮಾಲತೇಶ್ ,  ಮತ್ತು ಜಿಕೆ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಿ ಕೆ ಸ್ವಾಮಿ, ಪಾಲಿಕೆ ಸದಸ್ಯರಾದ ಆಸೀಫ್ ಬಾಷಾ, ಶ್ರೀ ರಾಮ ರಾಜು ಫೌಂಡೇಶನ್ ನ ಅಧ್ಯಕ್ಷ ಶ್ರೀರಾಮರಾಜು,  ಯುವ ನಾಯಕರದ ನೂರ್ ಮಹಮ್ಮದ್ , ಪಿ ಡಬ್ಲ್ಯೂಡಿ  ನಿರ್ವಾಹಕ ಇಂಜಿನಿಯರ್ ಹೇಮರಾಜ್,‌ ಪೋಲಾ ಪ್ರವೀಣ್,  ಕನ್ನಹಳ್ಳಿ  ಚಂದ್ರಶೇಖರ್, ಕರ್ನಾಟಕ ಏಕೀಕರಣ ರಾಜ್ಯ ಅಧ್ಯಕ್ಷ ಪಿ  ಶೇಖರ್, ಆರ್ ಪಿ ಇಂಟರ್ನ್ಯಾಷನಲ್ ಹಾಲಿಡೇಸ್ ನ ಮಾಲೀಕರಾದ  ರೇಣುಕ ಪ್ರಸಾದ್ ಉಪಸ್ಥಿತರಿದ್ದರು.

 

ನಿರೂಪಣೆಯನ್ನು ಗವಿಸಿದ್ದೇಶ್ ನೆರವೇರಿಸಿದರು. ಅಕಾಡೆಮಿಯ ತರಬೇತಿದಾರರು ಹಾಗೂ ಆಯೋಜಕರಾದ ಕಟ್ಟೆ ಸ್ವಾಮಿ  ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಂದನಾರ್ಪಣೆಯನ್ನು ಅಕಾಡೆಮಿ ತಾಂತ್ರಿಕ ನಿರ್ದೇಶಕರಾದ  ಸುಭಾಷ್ ಚಂದ್ರ ನೆರವೇರಿಸಿದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ತಡೆಗಟ್ಟಬಹುದು-ಡಾ. ನಿಗ್ಗುಡಗಿವಿಜಯರಾಘವೆಂದ್ರ ಅಭಿನಯದ “ರುದ್ರಾಭಿಷೇಕಂ’ ಚಿತ್ರದ ಟ್ರೈಲರ್ ಬಿಡುಗಡೆ ಪಠ್ಯದ ಜೊತೆಗೆ ಮೌಲ್ಯವರ್ಧಿತ ಕೋರ್ಸಗಳ ಆಯ್ಕೆ ಬಹುಮುಖ್ಯ-ಯಡ್ರಾಮಿ