ಬೆಂಗಳೂರು : ಭಾರತ ಸರ್ಕಾರದ ಅಡಿಯಲ್ಲಿ ಬರುವ ಭಾರತೀಯ ಪೇಟೆಂಟ್ ಕಚೇರಿ ವತಿಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನ ಕೊಡಮಾಡುವ ಉತೃಷ್ಟ ಸಂಶೋಧನೆಗಾಗಿ ಬೆಂಗಳೂರು ವಿಶ್ವವಿದ್ಯಾಲಯ ರಾಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ. ಜಿ. ಕೃಷ್ಣಮೂರ್ತಿ , ಅವರ ಸಂಶೋಧನಾ ತಂಡವು ಆಯ್ಕೆಯಾಗಿದ್ದಾರೆ.
ಈ ಸಂಶೋದನಾ ತಂಡವು ಅಭಿವೃದ್ಧಿಪಡಿಸಿದ ಪಾಲಿಮರ್ ಮ್ಯಾಟ್ರಿಕ್ಸ್ ಸಪೋರ್ಟೆಡ್ ಐರನ್- ಮಾಫ್ (Fe-MOF) : ಎ ಸೆಲ್ಫ್ - ಕ್ಲೀನಿಂಗ್ ಮೆಂಬ್ರೇನ್" ಹೊಸ ಆವಿಷ್ಕಾರಕ್ಕಾಗಿ ಪ್ರೊ. ಜಿ. ಕೃಷ್ಣಮೂರ್ತಿ ಹಾಗೂ ಅವರ ಸಂಶೋಧನಾ ತಂಡ ಭಾರತೀಯ ಪೇಟೆಂಟ್ ಅನುದಾನಕ್ಕೆ ಭಾಜನರಾಗಿದ್ದಾರೆ.
ಈ ಐರನ್- ಮಾಫ್ (Fe-MOF) : ಮೂವರು ವಿದೇಶಿ ರಸಾಯನಶಾಸ್ತ್ರಜ್ಞರು 2025 ರ ರಸಾಯನಶಾಸ್ತ್ರದ ನೋಬಲ್ ಪ್ರಶಸ್ತಿಯನ್ನು ಹಂಚಿಕೊಂಡ ವರ್ಗದ ವಸ್ತುವಾಗಿದೆ. ಪ್ರೊ. ಜಿ. ಕೃಷ್ಣಮೂರ್ತಿ ಮತ್ತು ಅವರ ತಂಡವು ಅಭಿವೃದ್ಧಿಪಡಿಸಿದ ಪಾಲಿಮರ್ ಮ್ಯಾಟ್ರಿಕ್ಸ್ ಸಪೋರ್ಟೆಡ್ ಐರನ್- ಮಾಫ್ (Fe-MOF) ವಿವಿಧ ಅನ್ವಯಿಕೆಗಳಿಗೆ ಆಕರ್ಷಕ ವಸ್ತುವಾಗಿದೆ.
ಈ ಐರನ್- ಮಾಫ್ (Fe-MOF) ಎಂಬುದು ಸ್ವಯಂ ಶುದ್ಧೀಕರಣ ಹಾಗೂ ಕಲುಷಿತ ನಿರೋಧಕ, ಜಲ ಶೋಧನೆಗೆ ಅತ್ಯಂತ ಭರವಸೆಯ ಉನ್ನತ ವಸ್ತುವಾಗಿವೆ. ವಿಶೇಷವಾಗಿ ಮಲಿನಜಲ ಶುದ್ಧೀಕರಣ ಮತ್ತು ಎಣ್ಣೆ-ನೀರು ವಿಭಜನೆ ಕ್ಷೇತ್ರಗಳಲ್ಲಿ, ಕೈಗಾರಿಕಾ ತ್ಯಾಜ್ಯ ನೀರಿನಲ್ಲಿರುವ ವಿಷಕಾರಿ ಬಣ್ಣಗಳನ್ನು ಪರಿಸರ ಸ್ನೇಹಿ ವಸ್ತುಗಳಾಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲಿ ಉಪಯುಕ್ತವಾಗಿವೆ.
ಈ ಮಹತ್ವದ ಶೈಕ್ಷಣಿಕ ಸಾಧನೆಗೆ ಬೆಂಗಳೂರು ವಿವಿಯ ಕುಲಪತಿ ಪ್ರೊ. ಜಯಕರ್ ಎಸ್.ಎಂ, ಆಡಳಿತ ವರ್ಗ, ಪ್ರಾಧ್ಯಾಪಕರ ವರ್ಗದವರು ಸೇರಿದಂತೆ ಮತ್ತಿತರರು ಸಂಶೋಧನಾ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ, ಪ್ರಶಂಸಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಐರನ್- ಮಾಫ್ (Fe-MOF) ಮೂವರು ವಿದೇಶಿ ರಸಾಯನಶಾಸ್ತ್ರಜ್ಞರು 2025 ರ ರಸಾಯನಶಾಸ್ತ್ರದ ನೋಬಲ್ ಪ್ರಶಸ್ತಿಯನ್ನು ಹಂಚಿಕೊಂಡ ವರ್ಗದ ವಸ್ತುವಾಗಿದೆ. ಪ್ರೊ. ಜಿ. ಕೃಷ್ಣಮೂರ್ತಿ ಮತ್ತು ಅವರ ತಂಡವು ಅಭಿವೃದ್ಧಿಪಡಿಸಿದ ಪಾಲಿಮರ್ ಮ್ಯಾಟ್ರಿಕ್ಸ್ ಸಪೋರ್ಟೆಡ್ ಐರನ್- ಮಾಫ್ (Fe-MOF) ವಿವಿಧ ಅನ್ವಯಿಕೆಗಳಿಗೆ ಆಕರ್ಷಕ ವಸ್ತುಗೆ ಸಾಕ್ಷಿಯಾಗಿದೆ.