LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಸಿಎಂ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಸಿದ್ದರಾಮಯ್ಯ

ನನಗೆ ಮತದಾರರು ಅಭಿಮಾನಿ ದೇವರು, ಸಂವಿಧಾನವೇ ನನಗೆ ಧರ್ಮಗ್ರಂಥ

ಸಿದ್ದರಾಮಯ್ಯ ಸಿಎಂ ವಿದಾಯ ಹೇಳಿಕೆ

ಹಣ, ಆಸ್ತಿ, ಅಂತಸ್ತು ಮಾಡಲು ರಾಜಕೀಯಕ್ಕೆ ಬರಲಿಲ್ಲ; ಜನರ ಸೇವೆ ಮಾಡಲು ಬಂದವನು

ನನ್ನ ರಾಜಕೀಯ ಜೀವನ ತೆರೆದ ಪುಸ್ತಕ,

ನಾನು ನನ್ನ ಸಿದ್ದಾಂತ, ಮೌಲ್ಯ, ನೆಲ, ಜಲ ಹಕ್ಕುಗಳಿಗಾಗಿ ರಾಜಿ ಆಗಿಲ್ಲ

ಕೊನೆ ಉಸಿರಿರೋವರಿಗೂ ಕೋಮು ಶಕ್ತಿಗಳ ವಿರುದ್ಧ ನನ್ನ ಹೋರಾಟ

ಬುದ್ಧ, ಬಸವ, ಅಂಬೇಡ್ಕರ್ ತತ್ವಗಳು ನನಗೆ ಆದರ್ಶಪ್ರಾಯ

ಬೆಂಗಳೂರು : ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜ್ಯಪಾಲರ ಭವನದಲ್ಲಿ ರಾಜೀನಾಮೆ ಸಲ್ಲಿಸಿದ್ದೇನೆ, ರಾಜ್ಯಪಾಲರು ಊರಿನಲ್ಲಿ ಇಲ್ಲ ಅವರ ಕಚೇರಿಯಲ್ಲಿ ತಿಳಿಸಿದ್ದಾರೆ, ಅವರು ಊರಿಂದ ರಾತ್ರಿ ಬರುತ್ತಾರೆ ಹಾಗಾಗಿ ರಾಜೀನಾಮೆ ಪತ್ರವನ್ನು ಅವರ ಕಚೇರಿಯ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ಕೊಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಅವರು ರಾಜೀನಾಮೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

 

ಅವರು ರಾಜೀನಾಮೆ ನೀಡಿ ಗುರುವಾರ ಬೆಂಗಳೂರಿನಗೃಹಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ್ನಾಡಿ, ನಾನು ಮೊದಲಿನಿಂದಲೂ ಅನೇಕ ಸಲ ಹೇಳಿದ್ದೇನೆ, ಹೈಕಮಾಂಡ್ ನನಗೆ ಯಾವಾಗ ಸೂಚಿಸುತ್ತಾರೆ, ಆವಾಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದೆ, ಅದೇ ರೀತಿ ಹೈಕಮಾಂಡ್ ಅವರು ನನಗೆ ರಾಜೀನಾಮೆ ಕೊಡಿ ಎಂದು ಹೇಳಿದ ಮೇಲೆ ನಾನು ರಾಜೀನಾಮೆ ಸಲ್ಲಿಸಿದ್ದೇನೆ.ರಾಜ್ಯಪಾಲರು ಬಂದ್ಮೇಲೆ ರಾಜೀನಾಮೆ ಪತ್ರ ಅಂಗೀಕಾರ ಮಾಡ್ತಾರೆ, ಸಂವಿಧಾನ ಬದ್ಧವಾಗಿ ಮಾಡಲೇ ಬೇಕು, ಮುಖ್ಯಮಂತ್ರಿಗಳು ಒಮ್ಮೆ ರಾಜೀನಾಮೆ ಕೊಟ್ಟಮೇಲೆ ಅಂಗೀಕಾರ ಮಾಡಿ ಮುಂದಿನ ಮುಖ್ಯಮಂತ್ರಿಗೆ ಅವಕಾಶ ಮಾಡಿಕೊಡುವುದು ಅವರ ಜವಾಬ್ದಾರಿ ಎಂದು ಹೇಳಿದರು.

news_1779987464_1_320.webp

 

ನಮ್ಮ ಪಕ್ಷ 135+1 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದಿದ್ದೇವೆ.  ನಮ್ಮ ಪಕ್ಷಕ್ಕೆ ರಾಜ್ಯದ ಜನರು ಮತ ನೀಡಿ ಬೆಂಬಲಿಸಿದ್ದಾರೆ. ನಾವು ಸಂಪೂರ್ಣ ಬಹುಮತದಿಂದ ಸರ್ಕಾರ ರಚಿಸಿದ್ದೇವೆ. ಕನ್ನಡದ ಮೇರು ನಟ ರಾಜಕುಮಾರು ಅವರು ಅಭಿಮಾನಿಗಳು ದೇವರು ಎಂದಿದ್ದರು, ನಾನು ರಾಜಕಾರಣಿ ಸಂವಿಧಾನವೇ ನನ್ನ ಧರ್ಮಗ್ರಂಥ, ಮತದಾರರು ನಮ್ಮ ಅಭಿಮಾನಿ ದೇವರು ಎಂದು ರಾಜ್ಯದ ಜನರು ನನ್ನಪಾಲಿಗೆ ದೇವರು ಎಂದು ಹೇಳಿದರು.

ಕನ್ನಡ ನಾಡಿನ 7 ಕೋಟಿ ಜನರ ಸೇವೆ ಮಾಡಲು ಎರಡು ಸಲ ಮುಖ್ಯಮಂತ್ರಿ ಅವಕಾಶ, ಎರಡು ಸಲ ವಿರೋಧಪಕ್ಷ ನಾಯಕನಾಗುವ ಅವಕಾಶ ಕೊಟ್ಟಿದ್ದಾರೆ.  ಅವಕಾಶ ಒದಗಿಸಿಕೊಟ್ಟಿದ್ದು ನಮ್ಮ ಪಕ್ಷದ ಸೋನಿಯಾಗಾಂಧಿ, ರಾಯಲ್ ಗಾಂಧಿ ಹಾಗೂ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಅವರಿಗೆ ಅಪಾರವಾದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

 

ನಾನು ಕಾಂಗ್ರೆಸ್ ಸೇರಿದ್ದು 2006ರಲ್ಲಿ ಅಂದಿನಿಂದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಶಾಸಕರು, ಸಂಸದರು, ಸಚಿವರು ಅವರೆಲ್ಲರೂ ಪ್ರೀತಿ ತೋರಿಸಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳು ಸಲ್ಲಿಸುತ್ತೇನೆ. ನಾನು ಎರಡು ಸಲ ಮುಖ್ಯಮಂತ್ರಿಯಾಗಿದ್ದು, ಸಂದರ್ಭದಲ್ಲಿ ಸಹೋದ್ಯೋಗಿಗಳಿಗೆ ನಾನು ಚಿರೃಣಿ, ಅವರು ಸಾಕಷ್ಟು ನನ್ನ ಮೇಲೆ ಪ್ರೀತಿತೋರಿಸಿದ್ದಾರೆ ಎಂದು ಭಾವುಕಾರಿಗೆ ಸಿದ್ದರಾಮಯ್ಯ ಅವರು ಹೇಳಿದರು

ನಾನು ಹಳ್ಳಿಗಾಡಿನಿಂದ ಬಂದಂತವನು, ನಾನು ಶಾಸಕ, ಮಂತ್ರಿ ಆಗುತ್ತೇನೆ, ಮುಖ್ಯಮಂತ್ರಿ ಆಗುತ್ತೇನೆ ಎಂದು ಕನಸು ಕಂಡಿರಲಿಲ್ಲ, ನಾನು ರಾಜಕಾರಣಕ್ಕೆ ಬಂದಿದ್ದು ಆಕಸ್ಮಿಕ, ಯಾಕಾಂದ್ರೆ ನಮ್ಮ ಕುಟುಂಬದಲ್ಲಿ ಯಾರು ಸಹ ರಾಜಕಾರಣದಲ್ಲಿ ಇರಲಿಲ್ಲ, ರಾಜಕೀಯ ಬಗ್ಗೆ ಯಾರಿಗೂ ಆಸಕ್ತಿ ಇರಲಿಲ್ಲ. ನಾನು ಮೊದಲಿನಿಂದಲೂ ಬುದ್ದ, ಬಸವ, ಬಾಬಾ ಸಾಹೇಬ್ ಅಂಬೇಡ್ಕರ್, ಗಾಂಧಿಜಿ ಅವರ ಬಗ್ಗೆ ಓದಿಕೊಂಡು, ಅವರ ಆದರ್ಶ ಹಾಗೂ ತತ್ವಗಳ ಬಗ್ಗೆ  ಅಪಾರ ಗೌರವ ಇಟ್ಟುಕೊಂಡಿರುವವನು, ಯಾವುದೇ ಜಾತಿ, ಮತ, ಧರ್ಮ ಇಲ್ಲದಂತೆ ಒಂದು ಕುಟುಂಬದಂತೆ ನಾನು ಓದುವ ಸಂದರ್ಭದಲ್ಲಿಯೂ,  ರಾಜಕೀಯ ಜೀವನದಲ್ಲಿ ಕಾಪಾಡಿಕೊಂಡು ಬಂದವನು ಎಂದರು.

news_1779987464_2_917.webp

 

ಸಂವಿಧಾನ ಬದ್ಧವಾಗಿ ಆರ್ಥಿಕ ಸಂಪತ್ತು, ಅಧಿಕಾರ ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು ಎನ್ನುವುದು ನಂಬಿಕೊಂಡು ಬದುಕಿದವನು, ಹಾಗಾಗಿ ಬಸವಣ್ಣ, ಬುದ್ಧ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನನಗೆ ಆದರ್ಶಪ್ರಾಯ, ಕುವೆಂಪು ಅವರು ಹೇಳಿರುವಂತೆ ಸರ್ವಜನಾಂಗದ ಶಾಂತಿಯತೋಟದಂತೆ ನಾವು ಬದುಕಬೇಕು, ಇಲ್ಲಿ ಅಸಮಾನತೆ ತೊಲಗಿ ಸಮಾನತೆ ಸೃಷ್ಟಿಯಾಗಬೇಕು, ಎಲ್ಲರಿಗೂ ಸಮಾನತೆ ಅವಕಾಶಗಳು ಸಿಗಬೇಕು, ಸಮಾನ ಅವಕಾಶ, ಸಮಾನತೆ ಬರುವುದಕ್ಕೆ ನಮ್ಮ ಸರ್ಕಾರ ನಡೆದುಕೊಂಡಿದೆ. ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ಪ್ರಾಮಾಣಿಕವಾಗಿ ನಾವು ಯೋಜನೆಗಳನ್ನು ಜಾರಿ ಮಾಡಿದ್ದೇನೆ, ಕಳೆದ 2013ರಲ್ಲಿ ನಮ್ಮ ಸರ್ಕಾರ 165 ರಲ್ಲಿ  158 ಭರವಸೆಗಳನ್ನು ಈಡೇರಿಸಿತ್ತು. 2023ರಲ್ಲಿ ನಾವು ಬಹುಮತದಿಂದ ಸರ್ಕಾರ ರಚನೆ ಮಾಡಿದ್ದು, 550 ಭರವಸೆಗಳನ್ನು ಕೊಟ್ಟಿದ್ದು ಅದರಲ್ಲಿ ಸುಮಾರು 300 ಭರವಸೆಗಳನ್ನು ಈಡೇರಿಸಿದ್ದೇವೆ. ಜೊತೆಗೆ ಐದು ಗ್ಯಾರೆಂಟಿ ಭರವಸೆಗಳನ್ನು ನೀಡಿದ್ದೀವಿ, ಅವುಗಳನ್ನು ಸಹ ಒಂದು ವರ್ಷದಲ್ಲಿ ಈಡೇರಿಸಿದ್ದೇವೆ. ಇವುಗಳಿಗಾಗಿ 148 ಸಾವಿರ ಕೋಟಿಯಷ್ಟು ಖರ್ಚು ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

 

ನಾವು ಕೊಟ್ಟ ಭರವಸೆ, ವಚನವನ್ನ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ, ನಾವು ಕೊಟ್ಟ ಮಾತು ತಪ್ಪಿಲ್ಲ, ಇವು ನಮಗೆ ಹಾಗೂ ನಮ್ಮ ಪಕ್ಷಕ್ಕೆ ಸಂತೃಪ್ತಿಯನ್ನು ಕೊಟ್ಟಿವೆ. ಇದರ ಬಗ್ಗೆ ವಿರೋಧ ಪಕ್ಷದ ನಾಹಕರು ಹಾಗೂ ಕೇಂದ್ರ ಪ್ರಧಾನಿ ಮೋದಿ ಸೇರಿದಂತೆ ಅಲ್ಲಿನನಾಯಕರು ಟೀಕಿಸಿದರು, ಗ್ಯಾರೆಂಟಿಗಳನ್ನು ಈಡೇರಿಸಲು ಆಗಲ್ಲ, ಆರ್ಥಿಕ ದಿವಾಳಿ, ಖಜಾನೆ ಖಾಲಿ, ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತ ಎಂದು ಟೀಕಿಸಿದರು.‌ಆದರೆ ಗ್ಯಾರೆಂಟಿಗಳ ಜಾರಿಯಿಂದ ಆದಾಯದಲ್ಲಿ ನಾವು ದೇಶದಲ್ಲಿ ನಂಬರ್ ಒನ್ ಆಗಿದ್ದೇವೆ,‌ಕೊಂಡು ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ, ಜಿಎಸ್ ಟಿ ಸಂಗ್ರಹದಲ್ಲಿ ನಾವು ಎರಡನೇ ಸ್ಥಾನದಲ್ಲಿ ಇದ್ದೇವೆ ಎಂದರು.

ನಾನು ಮುಖ್ಯಮಂತ್ರಿಯಾಗಿ, ಹಣಕಾಸು ಮಂತ್ರಿಯಾಗಿ ಕೆಲಸ ಮಾಡಿದ್ದೇನೆ, ಆದರೆ ಸಿದ್ದರಾಮಯ್ಯ ಅವರು ಅತಿ ಹೆಚ್ಚು ಸಾಲವನ್ನ ಮಾಡಿದ್ದೇನೆ ಎಂದು ವಿರೋಧ ಪಕ್ಷದವರು ಸುಳ್ಳು ಆರೋಪ ಮಾಡಿದರು. ಒಂದು ರಾಜ್ಯ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂದರೆ ಮೂರು ಮಾರ್ಗಗಳು ಅನುಸರಿಸಬೇಕು  ಕರ್ನಾಟಕದ ಸಾಲ 24.94  ಒಳಗಡೆ ಇದೆ. ಹಿಂದೆ ಇದ್ದ ಬಿಜೆಪಿ ಸರ್ಕಾರ ರಾಜ್ಯವನ್ನು ಆರ್ಥಿಕವಾಗಿ ಹಾಳು ಮಾಡಿಟ್ಟಿದ್ದರು, ನಮಗೆ ಕೇಂದ್ರದಿಂದ ಬರುವ ಹಣ ಬರಲಿಲ್ಲ ನಮಗೆ ಬರಬೇಕಾದ 11495‌‌ಕೋಟಿ ಕೇಂದ್ರದಿಂದ ಬರಲಿಲ್ಲ. ಜಿಎಸ್ ಟಿ ಬಂದಾಗ ಪರಿಹಾರ ಕೊಡುತ್ತಿದ್ದರು, ಅದನ್ನು ನಿಲ್ಲಿಸಿಬಿಟ್ರು, ಜೆಜೆಎಂ 17 ಸಾವಿರ ಕೋಟಿ ಬರಲಿಲ್ಲ, ಅಮೇಲೆ ನರೇಗಾ ಸ್ಟಾಪ್ ಮಾಡಿದ್ರು ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದರು.

 

ನಾನು ಹಣ ಆಸ್ತಿ ಮಾಡಲು ರಾಜಕೀಯಕ್ಕೆ ಬರಲಿಲ್ಲ  2028ಕ್ಕೆ ನನ್ನ ರಾಜಕೀಯ ಜೀವನ ಐವತ್ತು ವರ್ಷ ಆಗುತ್ತೆ, ನನ್ನ ರಾಜಕೀಯ ಜೀವನ ತೆರೆದ ಪುಸ್ತಕ, ಜನಶಕ್ತಿ ಇರೋರು ರಾಜಕೀಯಜೀವನದಲ್ಲಿ ಇರಲು ಸಾಧ್ಯ. 1978 ತಾಲೂಕ ಬೋರ್ಡ್ ಮೆಂಬರ್ ಆಗಿದ್ದೆ, 1983ರಲ್ಲಿ ನಾನು ಮೊದಲ ಬಾರಿಗೆ ಶಾಸಕನಾಗಿದ್ದು, ಸಿದ್ಧಾಂತಗಳಿಗೆ ನಾನು ಎಂದಿಗೂ ರಾಜಿ ಆಗಿಲ್ಲ, ಜಲ ನೆಲದ ವಿಚಾರವಾಗಿ ನಾನು ರಾಜಿ ಆಗಿಲ್ಲ, ನಾನು ನಂಬಿರುವ ಮೌಲ್ಯಗಳಿಗೆ ರಾಜಿ ಆಗಿಲ್ಲ ಅದು ಜನರ ಹಕ್ಕು ಅದಕ್ಕಾಗಿ ಹೋರಾಟ ಮಾಡುವೆ ಎಂದು ಹೇಳಿದರು.

news_1779987464_0_740.webp

 

ಎಂಟು ವರ್ಷ ಮುಖ್ಯಮಂತ್ರಿಯಾಗಿ ನಾನು ಕೆಲಸ ಮಾಡಿರುವ ತೃಪ್ತಿ ಇದೆ, ಸೋನಿಯಾಗಾಂಧಿ ಅವರು ನನ್ನ ಪಕ್ಷಕ್ಕೆ ಬರಮಾಡಿಕೊಂಡರು ಅಂದು ಎಂಟು ಜನ ನಾವು ಕಾಂಗ್ರೆಸ್ ಸೇರ್ಪಡೆ ಆಗಿದ್ದು, ನಾನು ರಾಜಕಾರಣದಲ್ಲಿ ಕೊನೆ ಉಸಿರಿರೋವರೆಗೂ ಕೋಮುವಾದಿ ಶಕ್ತಿಗಳ ವಿರುದ್ದ ಹೋರಾಟ ಮಾಡುವೆ, ಸಂವಿಧಾನ ಇರುವುದರಿಂದ ನಾನು ಶಾಸಕ, ಮಂತ್ರಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಹಣಕಾಸು ಮಂತ್ರಿ ಆಗಿದ್ದು, ಬಾಬಾ ಸಾಹೇಬರು ಕೊಟ್ಟ ಸಂವಿಧಾನವೇ ನನಗೆ ಎಲ್ಲಕೊಟ್ಟಿದ್ದು, ಇಲ್ಲಂದ್ರ ಕುರಿ ಮೇಯಿಸಿಕೊಂಡು ಹೊಲದಲ್ಲಿ ಕೆಲಸ ಮಾಡಿಕೊಂಡು ಇರುತ್ತಿದ್ದೆ, ನನ್ನ ಅಪ್ಪ ಅಮ್ಮ ಅವಿದ್ಯಾವಂತರು, ನನ್ನ ವಿದ್ಯಾವಂತನ್ನಾಗಿ ಮಾಡಿದ್ದಾರೆ, ಅದಕ್ಕೆ ಸಂವಿಧಾನವೇ ಕಾರಣ ಎಂದರು.

ಹೈಕಮಾಂಡ್ ನನಗೆ ರಾಜ್ಯಸಭೆಗೆ ನಿಲ್ಲಲ್ಲು ಹೇಳಿದ್ದಾರೆ. ನಾನು ಬೇಡ ಎಂದಿರುವೆ, ನನಗೆ ರಾಷ್ಟ್ರ ರಾಜಕಾರಣ ಇಷ್ಟವಿಲ್ಲ, ರಾಜ್ಯದಲ್ಲಿಯೇ ನನಗೆ ಆಸಕ್ತಿ ಇದೆ ಎಂದು ಹೇಳಿರುವೆ, ನನ್ನ ಐದು ವರ್ಷಕ್ಕಾಗಿ ಜನರು ಆಯ್ಕೆ ಮಾಡಿದ್ದಾರೆ. ನಾನು ಇನ್ನು ಎರಡು ವರ್ಷ ರಾಜ್ಯದ ಜನರಿಗಾಗಿ ಕೆಲಸ ಮಾಡುವೆ, ನಾನು ಕೋಮು ಶಕ್ತಿಗಳ ವಿರುದ್ಧ ಹೋರಾಟ ಮಾಡುವೆ ಎಂದರು.

 

ಸಂದರ್ಭದಲ್ಲಿ ಡಿಸಿಎಂಡಿಕೆ ಶಿವಕುಮಾರ್, ಗೃಹಮಂತ್ರಿ ಪರಮೇಶ್ವರ, ಮಂತ್ರಿಗಳಾದ  ಕೆ.ಜೆ ಜಾರ್ಜ್, ರಾಮಲಿಂಗರೆಡ್ಡಿ, ಎಂ.ಬಿ ಪಾಟೀಲ್, ಪ್ರಿಯಾಂಕ್ ಖರ್ಗೆ, ಭೈರತಿ ಸುರೇಶ್, ಸಂತೋಷಲಾಡ್ ಸೇರಿದಂತೆ ಇತರರು ಇದ್ದರು.

 

ನಾನೇ ಸ್ವಯಂಪ್ರೇರಿತವಾಗಿ ರಾಜೀನಾಮೆ ಕೊಟ್ಟಿರುವೆ, ಹೈಕಮಾಂಡ್ ಹೇಳಿರುವ ಹಿನ್ನೆಲೆ ನಾನು ರಾಜೀನಾಮೆ ಕೊಟ್ಟಿರುವೆ. ನನಗೆ ಯಾರು ಸಹ ಒತ್ತಡ ಹಾಕಿಲ್ಲ ಎಂದ ಅವರು ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಹೇಳುವ ಬದಲು ಶಿವಕುಮಾರ್ ಅವರ ಮುಖ ನೋಡಿ ಒಂದು ಸ್ಮೈಲ್ ಕೊಟ್ಟು, ಮುಂದಿನ ಸಿಎಂ ಆಯ್ಕೆ ಸಿಪಿಎಲ್ , ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ಸಿದ್ದರಾಮಯ್ಯ ಹೇಳಿದರು.

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ