LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಸ್ಲೀಪಿಹೆಡ್ ಸಂಸ್ಥೆಯು ಬೆಂಗಳೂರಿನಲ್ಲಿ ಆಯೋಜಿಸಿದ್ದ ಟ್ರೆಷರ್ ಹಂಟ್ ಕಾರ್ಯಕ್ರಮ ಮುಕ್ತಾಯ

100ಕ್ಕೂ ಹೆಚ್ಚು ಬೆಂಗಳೂರಿಗರು ಸ್ಪರ್ಧೆಯಲ್ಲಿ ಭಾಗಿ

ಬೆಂಗಳೂರು: ಆಧುನಿಕ ಪೀಠೋಪಕರಣಗಳು ಮತ್ತು ನಿದ್ರಾ ಉತ್ಪನ್ನಗಳ ಪ್ರಮುಖ ಬ್ರಾಂಡ್ ಆದ ಸ್ಲೀಪಿಹೆಡ್ ಸಂಸ್ಥೆಯು, ಬೆಂಗಳೂರಿನಲ್ಲಿ ಆಯೋಜಿಸಿದ್ದ ನಗರ ಮಟ್ಟದ ಬೃಹತ್ ಟ್ರೆಷರ್ ಹಂಟ್ ಸ್ಪರ್ಧೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ. ಡಿಜಿಟಲ್ ಹುಡುಕಾಟ, ದೈಹಿಕ ಸವಾಲುಗಳು ಮತ್ತು ಸಾರ್ವಜನಿಕ ಪಾಲ್ಗೊಳ್ಳುವಿಕೆ ಒಳಗೊಂಡಿದ್ದ ಈ ವಿಶೇಷ ಮಾದರಿಯ ವಿಶಿಷ್ಟ ಸ್ಪರ್ಧೆಯಲ್ಲಿ 100ಕ್ಕೂ ಹೆಚ್ಚು ಉತ್ಸಾಹಿಗಳು ಭಾಗವಹಿಸಿದ್ದರು. ಅತ್ಯಂತ ರೋಮಾಂಚಕವಾಗಿ ನಡೆದ ಗ್ರಾಂಡ್ ಫಿನಾಲೆಯಲ್ಲಿ ತೀವ್ರ ಪೈಪೋಟಿ ನಡೆಸಿದ ರೋಚೆಲ್ ಮರಿಯಾ ಕ್ವಾಡ್ರೊಸ್ ಮತ್ತು ಮಿಚೆಲ್ ರೋಸ್ ಕ್ವಾಡ್ರೊಸ್ ಜೋಡಿಯು ₹2 ಲಕ್ಷ ಮೌಲ್ಯದ ಭವ್ಯವಾದ ಲಿವಿಂಗ್ ರೂಮ್ ಸೆಟಪ್ ಅನ್ನು ಬಂಪರ್ ಬಹುಮಾನವಾಗಿ ತಮ್ಮದಾಗಿಸಿಕೊಂಡಿತು.

 

ಈ ವಿನೂತನ ಯೋಜನೆಯು ಸಾಂಪ್ರದಾಯಿಕ ಬಿಲ್‌ ಬೋರ್ಡ್ ಜಾಹೀರಾತುಗಳ ಚೌಕಟ್ಟನ್ನು ಮೀರಿ, ಇಡೀ ಬೆಂಗಳೂರನ್ನು ಹುಡುಕಾಟ ಮತ್ತು ಸಂವಹನದ ಆಟದ ಮೈದಾನವನ್ನಾಗಿ ಪರಿವರ್ತಿಸುವ ಮೂಲಕ ಸಮುದಾಯ ಆಧಾರಿತ ಜಾಹೀರಾತು ಕ್ಷೇತ್ರದಲ್ಲಿ ಹೊಸದೊಂದು ಸಂಚಲನವನ್ನು ಸೃಷ್ಟಿಸಿದೆ.

 

ಸ್ಲೀಪಿಹೆಡ್ ಸಂಸ್ಥೆಯ ಇನ್‌ ಸ್ಟಾಗ್ರಾಮ್ ರೀಲ್‌ ನಲ್ಲಿ ಅಡಗಿಸಲಾಗಿದ್ದ ಮೊದಲ ಸುಳಿವಿನೊಂದಿಗೆ ಪ್ರಾರಂಭವಾದ ಈ ಸ್ಪರ್ಧೆಯಲ್ಲಿ, ಸ್ಪರ್ಧಾಳುಗಳು ಡಿಜಿಟಲ್ ಮತ್ತು ಭೌತಿಕ ಹಂತಗಳನ್ನು ದಾಟುತ್ತಾ ಸ್ಲೀಪಿಹೆಡ್ ಮಳಿಗೆಗಳನ್ನು ಒಳಗೊಂಡಂತೆ ಅತ್ಯುತ್ತಮ ಓಮ್ನಿಚಾನೆಲ್ ಅನುಭವವನ್ನು ಪಡೆದರು. ಈ ಅಭಿಯಾನವು ಬೆಂಗಳೂರು ಮೂಲದ ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಡಂಬೊ (hey.dumbo) ಅವರ ಕಂಟೆಂಟ್ ಅನ್ನು ಬಳಸಿಕೊಂಡು ಆರಂಭವಾಯಿತು. ಸವಾಲುಗಳಿಂದ ಕೂಡಿದ್ದ ಅವರ ಕಂಟೆಂಟ್ ಯುವ ವೀಕ್ಷಕರಲ್ಲಿ ಭಾರಿ ಕುತೂಹಲವನ್ನು ಹುಟ್ಟುಹಾಕಿತು. ಸ್ಪರ್ಧೆಯು ಅಂತಿಮ ಹಂತವನ್ನು ತಲುಪುತ್ತಿದ್ದಂತೆ, ಸ್ಪರ್ಧಾಳುಗಳು ತಮ್ಮ ಚುರುಕಾದ ಯೋಚನೆ, ಪರಸ್ಪರ ಸಹಕಾರ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಒರೆಗೆ ಹಚ್ಚುವ ಹಲವಾರು ರೋಮಾಂಚಕ ಸ್ಪರ್ಧೆಗಳನ್ನು ಎದುರಿಸಬೇಕಾಯಿತು.

 

ಈ ಯೋಜನೆಯ ಯಶಸ್ವಿ ಮುಕ್ತಾಯದ ಕುರಿತು ಮಾತನಾಡಿದ ಡ್ಯುರೋಫ್ಲೆಕ್ಸ್ ಗ್ರೂಪ್‌ ನ ಚೀಫ್ ಮಾರ್ಕೆಟಿಂಗ್ ಆಫೀಸರ್ ಉಲ್ಲಾಸ್ ವಿಜಯ್ ಅವರು, "ಸ್ಲೀಪಿಹೆಡ್ ಯಾವಾಗಲೂ ದೈನಂದಿನ ಕ್ಷಣಗಳಲ್ಲಿ ಆರಾಮದಾಯಕತೆ, ಸೃಜನಶೀಲತೆ ಮತ್ತು ಸಂತೋಷವನ್ನು ಒದಗಿಸುವುದರ ಮೇಲೆ ನಂಬಿಕೆ ಇಟ್ಟಿದೆ. ಈ ಟ್ರೆಷರ್ ಹಂಟ್ ಮೂಲಕ, ಜನರು ಸಕ್ರಿಯವಾಗಿ ಭಾಗವಹಿಸಿ ಆನಂದಿಸಬಹುದಾದ ಒಂದು ವಿಶಿಷ್ಟ ಅನುಭವವನ್ನು ಒದಗಿಸುವ ಮೂಲಕ ನಮ್ಮ ಡೋಪಮೈನ್ ಕಂಫರ್ಟ್ ತತ್ವವನ್ನು ಮತ್ತಷ್ಟು ಹೆಚ್ಚು ಜನರಿಗೆ ಪರಿಚಯಿಸಲು ನಾವು ಬಯಸಿದ್ದೆವು. ಯುವ, ಉತ್ಸಾಹಿ ಮತ್ತು ಹೊಸ ಅನುಭವಗಳನ್ನು ಇಷ್ಟಪಡುವ ಜನಸಮುದಾಯವನ್ನು ಹೊಂದಿರುವ ಬೆಂಗಳೂರು ಈ ಆಲೋಚನೆಗೆ ಜೀವ ತುಂಬಲು ಅತ್ಯಂತ ಸೂಕ್ತವಾದ ನಗರವಾಗಿತ್ತು. ನಗರದಾದ್ಯಂತ ಭಾಗವಹಿಸಿದವರ ಉತ್ಸಾಹವನ್ನು ನೋಡುವುದು ನಿಜಕ್ಕೂ ರೋಮಾಂಚನಕಾರಿಯಾಗಿತ್ತು. ಜನರು ಒಟ್ಟಾಗಿ ಸೇರಿ, ಸುಳಿವುಗಳನ್ನು ಪತ್ತೆಹಚ್ಚಿ, ಬ್ರಾಂಡ್‌ ನೊಂದಿಗೆ ತೊಡಗಿಸಿಕೊಂಡ ರೀತಿ ಈ ಇಡೀ ಅನುಭವವನ್ನು ವಿಶೇಷವಾಗಿಸಿದೆ. ಅಂತಿಮವಾಗಿ ನಿಧಿಯನ್ನು ಗೆದ್ದುಕೊಂಡ ರೋಚೆಲ್ ಮತ್ತು ಮಿಚೆಲ್ ಅವರಿಗೆ ಅಭಿನಂದನೆಗಳು. ಕುತೂಹಲವನ್ನು ಕೆರಳಿಸುವ, ಜನರನ್ನು ಒಟ್ಟುಗೂಡಿಸುವ ಮತ್ತು ಸ್ಲೀಪಿಹೆಡ್ ಅನ್ನು ದೈನಂದಿನ ಕ್ಷಣಗಳ ಭಾಗವಾಗಿಸುವ ಇಂತಹ ಇನ್ನೂ ಅನೇಕ ಅನುಭವಗಳನ್ನು ಸೃಷ್ಟಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ಹೇಳಿದರು.

 

ಮನರಂಜನೆ, ಅನ್ವೇಷಣೆ ಮತ್ತು ಬ್ರಾಂಡ್ ಜೊತೆಗಿನ ಒಡನಾಟವನ್ನು ಸಮ್ಮಿಶ್ರಗೊಳಿಸುವ ಅನುಭವ ಆಧಾರಿತ ಯೋಜನೆಗಳ ಮೂಲಕ ಗ್ರಾಹಕರೊಂದಿಗೆ ಮತ್ತಷ್ಟು ಬಲವಾದ ಸಂಬಂಧವನ್ನು ನಿರ್ಮಿಸುವ ಸ್ಲೀಪಿಹೆಡ್ ಸಂಸ್ಥೆಯ ಪ್ರಯತ್ನಗಳಿಗೆ ಈ ಬೆಂಗಳೂರು ಆವೃತ್ತಿಯು ಒಂದು ಯಶಸ್ವಿ ಆರಂಭ ಒದಗಿಸಿದೆ.

 

ಗೇಮಿಫಿಕೇಷನ್, ಕಂಟೆಂಟ್ ಕ್ರಿಯೇಟರ್‌ ಗಳ ಸ್ಟೋರಿ ಮತ್ತು ನೈಜ ಜಗತ್ತಿನ ಅನುಭವಗಳ ಮೂಲಕ ಇಡೀ ಬೆಂಗಳೂರು ನಗರವನ್ನು ಆಟದ ಮೈದಾನವಾಗಿ ಪರಿವರ್ತಿಸಿದ ಸ್ಲೀಪಿಹೆಡ್; ವಿಜೇತರು ₹2 ಲಕ್ಷ ಮೌಲ್ಯದ ಲಿವಿಂಗ್ ರೂಮ್ ಸೆಟಪ್ ಅನ್ನು ಬಹುಮಾನವಾಗಿ ಪಡೆದಿದ್ದಾರೆ

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST