LIVE TV StateNationalPoliticsInternationalCrimeEntertainmentSportsEducationFINANCE & TAXATION
Entertainment News

‘ಸಾಕ್ಷಿ ‘ ಕಿರುಚಿತ್ರ ಚಿತ್ರೀಕರಣ ಮುಕ್ತಾಯ

ಬೆಂಗಳೂರು : ಕಲಾಪೋಷಕರ ಮಠ ಸುಕ್ಷೇತ್ರ ಸಿದ್ಧನಕೊಳ್ಳದ ಪೂಜ್ಯ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಕೀರ್ತನ ಮೂವಿ ಮೇಕರ್ಸ್ ಅವರಿಂದ ನಿರ್ಮಾಣವಾಗುತ್ತಿರುವ ‘ಸಾಕ್ಷಿ ‘ ಕಿರುಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಸಂಕಲನ ಕಾರ್ಯ ಆರಂಭವಾಗಿದೆ.

ಕೊಲೆ ರಹಸ್ಯ ಭೇದಿಸುವ ರೋಚಕ ಕಥೆಯುಳ್ಳ ಕಿರು ಚಿತ್ರ ಐದು ದಿನಗಳ ಕಾಲ ಬೆಂಗಳೂರಿನ ವಿವಿಧ ಕಡೆ ಚಿತ್ರೀಕರಣ ನಡೆಸಲಾಯಿತು. ಈ ಮೊದಲು ‘ಒಬ್ಬಟ್ಟು’ ಸಸ್ಪೆನ್ಸ್,ಥ್ರಿಲ್ಲರ್ ಹಾಸ್ಯಕಥೆಯ ಚಿತ್ರ ನಿರ್ದೇಶಿಸಿ,ನಿರ್ಮಿಸಿ ಬಿಡುಗಡೆ ಮಾಡಿದ್ದೆ. ಸಧ್ಯದಲ್ಲೇ ನನ್ನ ನಿರ್ದೇಶನದ ಎರಡನೇ ಸಿನೇಮಾ ‘ಹೂಗಾರ’ ಚಲನಚಿತ್ರ ಸೆನ್ಸಾರ್‌ಗೆ ಹೋಗಲು ಅಂತಿಮ ಸಿದ್ಧತೆ ನಡೆಸಿದ್ದೇನೆ. ಮತ್ತು ಈಗಾಗಲೇ ಮೂರನೆಯ ಹೊಸ ಸಸ್ಪೆನ್ಸ್  ,ಥ್ರಿಲ್ಲರ್ ಹಿನ್ನೆಲೆಯ ಸಿನೇಮಾದ ಸ್ಕ್ರಿಪ್ಟ್ ಸಿದ್ಧವಾಗುತ್ತಿದೆ. ಕಲಾವಿದರ ಆಯ್ಕೆ ಕೂಡ ನಡೆಸಿದ್ದೇನೆ. ಬಿಡುವಿನ ನಡುವೆ ತಂಡ ಸಕ್ರಿಯವಾಗಿರಲು ಕಿರುಚಿತ್ರ ನಿರ್ಮಿಸೋಣ ಎಂದು ತಂಡದ ಸದಸ್ಯರೆಲ್ಲರೂ ನಿರ್ಧರಿಸಿ ‘ಸಾಕ್ಷಿ’ ನಿರ್ಮಿಸಿದ್ದೇವೆ. ಮುಂದಿನ ತಿಂಗಳು ಓ ಟಿ ಟಿ ಹಾಗೂ ಯೂಟ್ಯೂಬ್ ಗೆ ರಿಲೀಸ್ ಮಾಡಲಾಗುತ್ತದೆ. ಚಿತ್ರ ಪ್ರೇಮಿಗಳು ತಂಡಕ್ಕೆ ಪ್ರೋತ್ಸಾಹ ನೀಡಬೇಕು ಎಂದು ನಿರ್ದೇಶಕ ಲೋಕೇಶ್ ವಿದ್ಯಾಧರ್ ತಿಳಿಸಿದರು.

ಮುಖ್ಯ ಪಾತ್ರದಲ್ಲಿ ಲೋಕೇಶ್ ವಿದ್ಯಾಧರ , ವಿದ್ಯಾಶ್ರೀ, ಹುನಗುಂದದ ಮಹಾಂತೇಶ್ ಹಳ್ಳೂರ, ಸತೀಶ್ ಶೆಟ್ಟಿ ಮುತ್ತುರಾಜ್ ಬುದ್ನಿ, ಜೀವನ ಗೌಡ, ಗೀತಾ ರೋಹಿತ್, ಸುರೇಶ್ ಗ್ಲೋರಿ ಮೊದಲಾದವರು ಅಭಿನಯಿಸಿದ್ದಾರೆ. ಕ್ಯಾಮೆರಾ ಬೆಟ್ಟೆಗೌಡ ಕಿಲಾರ, ಗೋವರ್ಧನ್ ಮೇಕಪ್, ಶಿವು ಹೇರ್ ಸ್ಟೈಲ್, ಪಲ್ಲವಿ, ಸಂಕಲನ ಶಿವರಾಜ್, ಡಿಐ ಜೀವನ್, ನೃತ್ಯ ರಾಜು ಮಾಸ್ಟರ್, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್  ಹಂಡಗಿ ಪತ್ರಿಕಾ ಸಂಪರ್ಕ, ಕಥೆ-ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನ ಹೊಣೆ ಲೋಕೇಶ್ ವಿದ್ಯಾಧರ ವಹಿಸಿಕೊಂಡಿದ್ದಾರೆ. ನಿರ್ಮಾಣ ಕೀರ್ತನ ಮೂವಿ ಮೇಕರ್ಸ್ ಹಾಗೂ ಚಿತ್ರತಂಡದ ಬಳಗ ಹೊತ್ತು ಕೊಂಡಿದೆ. .

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿಜೆಪಿ ಬೃಹತ್ ಸಾರ್ವಜನಿಕ ಸಮಾವೇಶಕ್ಕೆ ಅನುಮತಿ : ಭರದ ಸಿದ್ದತೆವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿಸತತ ಪುನರ್ವಸತಿ ಮತ್ತು ಫಿಸಿಯೋಥೆರಪಿಯ ಮೂಲಕ ರೋಗಿ ಸಂಪೂರ್ಣ ಗುಣಮುಖಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯ. ಕಾಡಿನ ಜ್ಞಾನ ನಾಡಿಗೆ ಹಂಚಿದ ಕಾಡಿನ ಸಂತ ತೇಜಸ್ವಿ: ಗೊರೂರು ಶಿವೇಶ್ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ -2026 ಪಾದಯಾತ್ರೆ ಕೇವಲ ರಾಜಕೀಯ ಹೋರಾಟವಲ್ಲ; ಜನರ ಬದುಕಿನ ಪ್ರಶ್ನೆಗಳಿಗಾಗಿ ನಡೆಯುತ್ತಿರುವ ಜನಾಂದೋಲನ ವಿಜಯೇಂದ್ರ‘ಸಾಕ್ಷಿ ‘ ಕಿರುಚಿತ್ರ ಚಿತ್ರೀಕರಣ ಮುಕ್ತಾಯಮಲೆ ಮಾದೇಶ್ವರ ಬೆಟ್ಟದ ದೇವರ ದರ್ಶನ ಪಡೆದ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿ. ನರೇಂದ್ರಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ