LIVE TV StateNationalPoliticsInternationalCrimeEntertainmentSportsEducationFINANCE & TAXATION
Entertainment News

‘ಚಂದ್ರಿ’ ಚಲನಚಿತ್ರದ ಚಿತ್ರೀಕರಣ ಮುಕ್ತಾಯ

ಬೆಂಗಳೂರು: ಓ ಜೆ ಎಸ್ ಮೂವಿ ಮೇಕರ್ಸ್ ಅರ್ಪಿಸುವ “ಚಂದ್ರಿ” ಕನ್ನಡ ಚಲನಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಇದೀಗ  ಪೋಸ್ಟ್ ಪ್ರೊಡಕ್ಷನ್  ಕಾರ್ಯ ಭರದಿಂದ ಸಾಗಿದೆ.

ಡಾ. ಪ್ರವೀಣ್ ಚೌತಿ ಅವರ ‘ಬಯಲು’ ಕಥಾ ಸಂಕಲನದ ಕಥೆ ಆಧರಿಸಿ,  ವಿಜಯನಗರ ಜಿಲ್ಲೆಯ ಕೊಟ್ಟೂರಿನ ಯುವ ಪ್ರತಿಭೆ ಎಸ್.ವೆಂಕಟೇಶ್ ಕೊಟ್ಟೂರ್ ಅವರ ನಿರ್ದೇಶನದ ಎರಡನೇ ಚಿತ್ರ ಇದಾಗಿದೆ. ಪ್ರಿಯಕರನ  ಮೋಸಕ್ಕೆ ಬಲಿಯಾದ ಗ್ರಾಮೀಣ ಹೆಣ್ಣೊಬ್ಬಳು ಅಸಹಾಯಕಳಾಗಿ ಸಾವಿನ ಮನೆಯ ಕದ ಬಡಿಯುವಾಗ ಸೈದಪ್ಪ ಆಕೆಗೆ ಹೊಸ ಬದುಕು ಕಟ್ಟಿಕೊಡುತ್ತಾನೆ. ತುತ್ತಿನಚೀಲ ತುಂಬಿಸಿಕೊಳ್ಳಲು ಎರಡು ಜೀವಗಳ ಹೋರಾಟವೇ ಇಲ್ಲಿದೆ. ರಾಯಚೂರು ನಗರ, ಶಕ್ತಿನಗರ, ಕೊಟ್ಟೂರು, ಹೂವಿನ ಹಡಗಲಿ, ಮದಲಘಟ್ಟ ಮತ್ತು ಮರಳವಾಡಿಯ ಸುತ್ತಮುತ್ತ 18 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ

news_1788495317_0_797.webp

 

 ಚಿತ್ರದ ಪ್ರಮುಖ ಪಾತ್ರದಲ್ಲಿ ಸೈದಪ್ಪನಾಗಿ ಕೆಜಿಎಫ್,ಪೈಲ್ವಾನ್, ಐರಾವತ, ರುಸ್ತುಂ, ಜಗ್ಗು ದಾದ, ಬಘೀರ, ಭೈರತಿ ರಣಗಲ್ ಮೊದಲಾದ ಚಿತ್ರಗಳಲ್ಲೂ ನಟಿಸಿ ಜನಪ್ರಿಯರಾದ ಹಿರಿಯ ಕಲಾವಿದ ರಾಮರಾವ್. ಜಿ ಅವರು ನಟಿಸಿದ್ದಾರೆ. ಚಂದ್ರಿ ಆಗಿ ವ್ಯೋಮಿ ಸಾಕೆಲ್ ಅಭಿನಯಿಸಿದ್ದಾರೆ. ಪ್ರಗತಿ ಪ್ರಭು, ಚಕ್ರವರ್ತಿ ದಾವಣಗೆರೆ, ಶಿವಮೊಗ್ಗ ರಾಮಣ್ಣ, ಉಗ್ರಂ ಸುರೇಶ್, ಶಶಿಧರ್, ಡಾ .ಪ್ರವೀಣ್ ಚೌತಿ, ಎಸ್ ಕೆ ಬಾಬು ಬೆಳಗೊಳ, ಸುರೇಶ್ ದೇವರಮನಿ, ಶಾರದಾ ಕಲ್ಲೂರ್, ಮಂಜೇಶ್ ತಾರಾಗಣದಲ್ಲಿದ್ದಾರೆ.

news_1788495317_2_269.webp

 

ಸಿಂಕ್ ಸೌಂಡ್ ನೊಂದಿಗೆ ಚಿತ್ರೀಕರಣ ನಡೆದಿರುವುದು ಈ ಚಿತ್ರದ ವಿಶೇಷ. ಚಿತ್ರದಲ್ಲಿ ೨ ಹಾಡುಗಳಿದ್ದು ವೆಂಕಟೇಶ್ ಕೊಟ್ಟೂರು ಅವರೇ ಬರೆದಿದ್ದಾರೆ. ಛಾಯಾಗ್ರಹಣ ಸುನಿಲ್ ಕೆ ಆರ್ ಎಸ್, ಸಂಭಾಷಣೆ ಮಹಾಂತೇಶ್ ನವಲಕಾರ್, ಸಂಗೀತ ಎಸ್ ಕೆ ಸಹಿಶ್ಯಾಮ್, ಸಂಕಲನ ಮುತ್ತುರಾಜ್ ಟಿ, ಸಿಂಕ್ ಸೌಂಡ್ ಮೋಹನ್ - ಅಜಿತ್ ಯಳಿವಾಳ , 5.1 ಮಿಕ್ಸಿಂಗ್ ರಾಜ ಭಾಸ್ಕರ್, ಡಿ.ಐ ವರುಣ್ ಗೌಡ, ಕಲೆ ಬಸವರಾಜ್ ಆಚಾರ್, ಪಿ.ಆರ್.ಓ ಡಾ. ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಿಗಿ, ಕಾರ್ಯಕಾರಿ ನಿರ್ಮಾಪಕರು ಎಚ್. ಶಶಿಧರ್-ಆರ್ಮುಗಂ, ಚಿತ್ರ ಕಥೆ, ನಿರ್ದೇಶನ ಎಸ್.ವೆಂಕಟೇಶ ಕೊಟ್ಟೂರು  ಮಾಡಿದ್ದಾರೆ. ಶ್ರೀಮತಿ ಅನುಷಾ ಸುಪ್ರೀತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.  

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿಜೆಪಿ ಬೃಹತ್ ಸಾರ್ವಜನಿಕ ಸಮಾವೇಶಕ್ಕೆ ಅನುಮತಿ : ಭರದ ಸಿದ್ದತೆವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿಸತತ ಪುನರ್ವಸತಿ ಮತ್ತು ಫಿಸಿಯೋಥೆರಪಿಯ ಮೂಲಕ ರೋಗಿ ಸಂಪೂರ್ಣ ಗುಣಮುಖಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯ. ಕಾಡಿನ ಜ್ಞಾನ ನಾಡಿಗೆ ಹಂಚಿದ ಕಾಡಿನ ಸಂತ ತೇಜಸ್ವಿ: ಗೊರೂರು ಶಿವೇಶ್ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ -2026 ಪಾದಯಾತ್ರೆ ಕೇವಲ ರಾಜಕೀಯ ಹೋರಾಟವಲ್ಲ; ಜನರ ಬದುಕಿನ ಪ್ರಶ್ನೆಗಳಿಗಾಗಿ ನಡೆಯುತ್ತಿರುವ ಜನಾಂದೋಲನ ವಿಜಯೇಂದ್ರ‘ಸಾಕ್ಷಿ ‘ ಕಿರುಚಿತ್ರ ಚಿತ್ರೀಕರಣ ಮುಕ್ತಾಯಮಲೆ ಮಾದೇಶ್ವರ ಬೆಟ್ಟದ ದೇವರ ದರ್ಶನ ಪಡೆದ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿ. ನರೇಂದ್ರಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ