LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ದೈನಂದಿನ ಒತ್ತಡ ಕಡಿಮೆ ಮಾಡಲು ಯೋಗ ಅವಶ್ಯಕ

ಬೆಂಗಳೂರು ವಿವಿ ಯೋಗ ಕೇಂದ್ರದಿಂದ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಡಾ. ಶಿವಣ್ಣ ಅಭಿಪ್ರಾಯ

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ಯೋಗ ಕೇಂದ್ರದಿಂದ ಆಯೋಜಿಸಿದ್ದ 12ನೇಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಅತ್ಯಂತ ಸಡಗರ ಮತ್ತು ಉತ್ಸಾಹದ ವಿಶೇಷ ಕಾರ್ಯಕ್ರಮವನ್ನು ಯೋಗ ಕೇಂದ್ರದ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಶಿವಣ್ಣ ಎಸ್, ಡಾ. ರಮೇಶ್ ಕಿತ್ತೂರ್, ಡಾ. ವೆಂಕಟರಮಣಪ್ಪ ಮತ್ತಿತರ ಗಣ್ಯರು ಸೇರಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 

ಪ್ರಾಸ್ತಾವಿಕವಾಗಿ ಮಾತನಾಡಿದ ಯೋಗ ಕೇಂದ್ರದ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಶಿವಣ್ಣ ಎಸ್ ಅವರು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಂದೆಡೆ ಸೇರಿ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡಾಗ ಮಾತ್ರ ನಮಗೆ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ, ದೈನಂದಿನ ಒತ್ತಡವನ್ನು ಕಡಿಮೆ ಮಾಡಿ, ಏಕಾಗ್ರತೆಯನ್ನು ಹೆಚ್ಚಿಸುವುದಕ್ಕೆ ಯೋಗ ಉಪಯುಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

 

ಯೋಗ ದಿನದ ಹಿನ್ನೆಲೆಯನ್ನು ನೋಡಿದರೆ ಜೂನ್ 21, ದಿನವು ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದ ದಿನವಾಗಿದ್ದು, ಇದೊಂದು ಯೋಗ ಸಂಪ್ರದಾಯದಲ್ಲಿ ವಿಶೇಷ ಆಧ್ಯಾತ್ಮಿಕ ಮಹತ್ವವು ಹೊಂದಿದೆ ಎಂದರು.

news_1782062212_1_967.webp

 

ಪ್ರಸ್ತುತ ಬಾರಿಯ ಯೋಗದ ಥೀಮ್ 'ಯೋಗ ಫಾರ್ ಹೆಲ್ದಿ ಏಜಿಂಗ್' (ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ) ಆಗಿದ್ದು, ಆರೋಗ್ಯ ಮತ್ತು ಯೋಗದ ಮಹತ್ವವನ್ನು ತಿಳಿಸುತ್ತದೆ ಎಂದರು.

 

ಮುಖ್ಯ ಅತಿಥಿಯಾಗಿ ಮಾತನಾಡಿದ ವಿವಿಯ ಎನ್ಎಸ್ಎಸ್ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ರಮೇಶ್ ಕಿತ್ತೂರ್ ಅವರು ನಾವು ಯೋಗವನ್ನು ಅದರ ಇತಿಹಾಸವನ್ನು ನೋಡಿದರೆ ಭಗವಾನ್ ಬುದ್ಧರ ಅವಧಿಯಲ್ಲಿ ಯೋಗವು ಪ್ರಾಚೀನ ಕಾಲದಲ್ಲಿ ಹುಟ್ಟಿಕೊಂಡ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 

ಇತ್ತೀಚಿನ ವರ್ಷದಲ್ಲಿ ಯೋಗದ ಇತಿಹಾಸವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸ್ತಾವನೆಯ ಮೇರೆಗೆ ವಿಶ್ವಸಂಸ್ಥೆಯು 2014ರಲ್ಲಿ ನಿರ್ಣಯವನ್ನು ಅಂಗೀಕರಿಸಿ, ಮೊದಲ ಬಾರಿಗೆ 2015 ಜೂನ್ 21ರಂದು ವಿಶ್ವದಾದ್ಯಂತ ಯೋಗ ದಿನವನ್ನು ಆಚರಿಸುತ್ತಿರುವುದು ವಿಶೇಷ ಎಂದರು.

 

ನಂತರದಲ್ಲಿ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ವೆಂಕಟರಮಣಪ್ಪ ಮಾತನಾಡಿ, ಯೋಗ ಎಂಬುದು ಕೇವಲ ಹಿರಿಯ ನಾಗರಿಕರಿಗೆ ಮಾತ್ರ ಸೀಮಿತವಲ್ಲ, ಬದಲಿಗೆ ಇಂದಿನ ಯುವ ಪೀಳಿಗೆಯು ಸುಸ್ಥಿರ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಅತ್ಯಗತ್ಯ ಎಂಬ ಸಂದೇಶ ನೀಡಿದರು.

ಇನ್ನು ಮುಖ್ಯವಾಗಿ ಪ್ರತಿಯೊಬ್ಬರೂ ಕೂಡ ಪ್ರತಿನಿತ್ಯ ಬೆಳಗ್ಗೆ  6  ರಿಂದ 7 ರವರೆಗೂ  ಯೋಗಭ್ಯಾಸ ಆರಂಭ ಮಾಡುವುದರಿಂದ ನಮ್ಮ ಪ್ರಯೋಗಿಕ ಕಾರ್ಯಗಳನ್ನು ಸದೃಢವಾಗುತ್ತದೆ ಎಂದರು.

 

ಕೊನೆಯಲ್ಲಿ ಅತಿಥಿ ಉಪನ್ಯಾಸಕಿ ಡಾ. ಪದ್ಮಾವತಿ ಅವರು ಮಾತನಾಡಿ, ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಇರುವ ಆಹಾರ ಮಾತ್ರ ತೆಗೆದುಕೊಳ್ಳಬೇಕು, ಬೇಗ ಮಲಗಬೇಕು ಬೇಗ ಹೇಳಬೇಕು ಹಾಗಾದರೆ ಮಾತ್ರ ಸರಿಯಾಗಿ ನಿದ್ರೆ ಸಾಧ್ಯವಿದೆ ಇಲ್ಲಾದರೆ ದಿನನಿತ್ಯದಲ್ಲಿ ಜೀವನಶೈಲಿ ಏರುಪೇರು ಕಂಡುಬರುವುದು ಸಾಧ್ಯತೆ ಎಂದರು.

news_1782062213_2_771.webp

 

ಸಮಾರಂಭದಲ್ಲಿ ಅತಿಥಿ ಉಪನ್ಯಾಸಕ ವೆಂಕಟಾಚಲಪತಿ ಮತ್ತು ಯೋಗ ಕೇಂದ್ರದ ವಿದ್ಯಾರ್ಥಿ ಶಾಲಿನಿ ಅವರು

ಸಾಮೂಹಿಕವಾಗಿ ಯೋಗಾಭ್ಯಾಸ ಪ್ರದರ್ಶನ, ಉಸಿರಾಟದ ನಿಯಂತ್ರಣ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ಯೋಗಾಸನವನ್ನು ಪ್ರದರ್ಶಿಸಿದರು. ಕೊನೆಯಲ್ಲಿ ಯೋಗ ಕೇಂದ್ರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

 

ಇದೇ ಸಂದರ್ಭದಲ್ಲಿ ಪ್ರದರ್ಶನ ಕಲಾ ವಿಭಾಗದ ಹಿರಿಯ ಪ್ರಾಧ್ಯಾಪಕರು ಮತ್ತು ಡಾ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಮೈಸೂರಿನ ನಿಕಟಪೂರ್ವ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ, ಯೋಗ ಕೇಂದ್ರದ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಶಿವಣ್ಣ ಎಸ್, ಡಾ. ರಮೇಶ್ ಕಿತ್ತೂರ್, ಡಾ. ವೆಂಕಟರಮಣಪ್ಪ, ಅತಿಥಿ ಉಪನ್ಯಾಸಕರಾದ ಶ್ರೀನಿವಾಸ್ ರಾವ್, ಡಾ. ಪದ್ಮಾವತಿ, ರಶ್ಮಿ ಎನ್, ಮಧು ಮೂರ್ತಿ, ವೆಂಕಟಾಚಲಪತಿ, ಸಂಶೋಧನಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಶರಣಪ್ಪ ಗೌಡರ್, ಸಚಿನ್ , ರಾಮಲಿಂಗ ಮಾಡಗೇರಿ, ಬಿ.ಎಸ್.ಪೂಜಾರಿ, ಅಂಬರೀಶ್, ನಾರಾಯಣಸ್ವಾಮಿ ಸಿ, ವೇಣುಗೋಪಾಲ್, ರಮೇಶ್ ಸೇರಿದಂತೆ ಯೋಗಾಸಕ್ತರು ಮತ್ತಿತರರು ಉಪಸ್ಥಿತರಿದ್ದರು.

 

ಯೋಗದಿಂದ ಮಾನಸಿಕ ಶಾಂತಿ, ಉತ್ತಮ ಆರೋಗ್ಯ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಸಹಾಯ ಮಾಡುವ ಸಮಗ್ರ ಜೀವನ ವಿಧಾನ.

ಡಾ. ಶಿವಣ್ಣ ಎಸ್, ಯೋಗ ಕೇಂದ್ರದ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರು

 

ಇತ್ತೀಚೆಗೆ ದಿನಗಳಲ್ಲಿ ಅತಿ ಹೆಚ್ಚಾಗಿ ಯುವ ಜನತೆಯು ಡ್ರಗ್ ಸೇವನೆಯಿಂದಾಗಿ ದೈಹಿಕ ಶಕ್ತಿಯನ್ನು ದುರ್ಬಲಗೊಳಿಸುತ್ತಿರುವುದು ದುರಂತ, ಆದಷ್ಟು ಬೇಗನೆ ಸರ್ಕಾರಗಳು ಹೆಚ್ಚಾಗಿ ಜಾಗೃತಿ ಮೂಡಿಸಬೇಕಾಗಿದೆ.

 ಡಾ. ರಮೇಶ್ ಕಿತ್ತೂರ್, ಎನ್ಎಸ್ಎಸ್ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರು

 

ಯೋಗ ಎಂಬುದು ಕೇವಲ ಹಿರಿಯ ನಾಗರಿಕರಿಗೆ ಮಾತ್ರ ಸೀಮಿತವಲ್ಲ, ಬದಲಿಗೆ ಪ್ರಸ್ತುತ ಯುವ ಪೀಳಿಗೆಯು ಸುಸ್ಥಿರ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಅತ್ಯಗತ್ಯ.

ಡಾ. ವೆಂಕಟರಮಣಪ್ಪ, ಸಹಾಯಕ ಪ್ರಾಧ್ಯಾಪಕರು

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST