ಹಾಸನ: ಕಲೆಗೆ ತವರೂರಾದ ಹಾಸನದಲ್ಲಿ ಹಲವಾರು ರೀತಿಯ ಕಲೆಯನ್ನು ಬೆಳೆಸುತ್ತಾ ಪೋಷಿಸುತ್ತಾ ಬಂದಿರುವಲ್ಲಿ ಚಿತ್ರಕಲೆಯೂ ಒಂದು. ತಮ್ಮ ವ್ಯಾಸಂಗಕ್ಕೆ ಚಿತ್ರಕಲೆಯನ್ನು ಆಯ್ಕೆ ಮಾಡಿಕೊಂಡ ಮಂಜುಳಾ ಅವರು ಹಾಸನದ ಅರಳಿಕಟ್ಟೆ ಸರ್ಕಲ್ ಬಳಿಯ ಸಂಸ್ಕೃತ ಭವನದಲ್ಲಿ ತಮ್ಮ ಕಲಾ ಸಂಸ್ಕೃತಿಯನ್ನು ಪ್ರದರ್ಶಿಸಿದರು.

ರಾಜಘಟ್ಟದ ರಂಗೇಗೌಡ ಹನುಮಮ್ಮ ಅವರ ಮಗಳು ಮಂಜುಳಾ ಅವರಿಗೆ ಚಿತ್ರಕಲೆಯಲ್ಲಿ ಬಾಲ್ಯದಿಂದಲೂ ಆಸಕ್ತಿ. ಪಿಯುಸಿ ನಂತರ ಹಾಸನದ ಶಾಂತಲಾ ಚಿತ್ರಕಲಾ ಶಾಲೆಯಲ್ಲಿ 5 ವರ್ಷ ಚಿತ್ರಕಲಾ ಶಿಕ್ಷಣ ಮುಗಿಸಿ ಕುವೆಂಪು
ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ಪ್ರಥಮವಾಗಿ ಸೇರಿ ನಂತರ ಹಾಸನದ ಪ್ರತಿಷ್ಠಿತ ಶಾಲೆ ಯುರೋ ಸ್ಕೂಲ್ ನಂತರ ಹಾಸನದ ಸಗೆಶಿಯಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 10 ವರ್ಷ ಚಿತ್ರಕಲಾ ಶಿಕ್ಷಕಿಯಾಗಿ ಮುಂದುವರಿದಿದ್ದಾರೆ. ಬಿಡುವಿನ ವೇಳೆ ಚಿತ್ರಕಲೆಯಲ್ಲಿ ಆಸಕ್ತಿಯುಳ್ಳ ಮಕ್ಕಳಿಗೆ ಚಿತ್ರಕಲೆ ಕಲಿಸುತ್ತಿದ್ದಾರೆ. ಈವರೆಗೆ ಹಲವಾರು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಗೆದ್ದಿದ್ದಾರೆ.

ಇವರು ಕ್ಯಾನ್ವಾಸ್ ಪೇಂಟಿಂಗ್ ಅಕ್ರಾಲಿಕ್ ಪೇಯಿಂಟ್ ಬಳಸಿ ಕಲಾಕೃತಿ ರಚಿಸುವ, ಗಂಜಿಪ ಚಿತ್ರಗಳನ್ನು ಚಿತ್ರಿಸುವ ಕೌಶಲ್ಯ ಹೊಂದಿದ್ದಾರೆ. ಎಲ್ಲಾ ರೀತಿಯ ಪಕ್ಷಿಗಳು ಇವರ ಕುಂಚ ಕಲೆಯಲ್ಲಿ ಜೀವ ತಳೆದು ಹಾರಾಡಿವೆ. ಹೂವುಗಳು ಅರಳಿವೆ. ಹಾಗೆಂದು ಪರಿಮಳ ಬೀರುವುದೇ ಎಂದು ಕೇಳಬೇಡಿ. ಹಲವು ಗ್ರೂಪ್ ಷೋ ಗಳಲ್ಲಿ ಭಾಗವಹಿಸಿರುವ ಮಂಜುಳಾ ಅವರು ಇಂದು ತಮ್ಮ ಏಕವ್ಯಕ್ತಿ ಕಲಾ ಪ್ರದರ್ಶನದಲ್ಲಿ ತಮ್ಮ ಕಲೆಗಾರಿಕೆಯನ್ನು ಅಭಿವ್ಯಕ್ತಿಸಿದರು.

ಅವರ ಕಲಾಕೃತಿಗಳನ್ನು ವೀಕ್ಷಿಸುತ್ತಾ, ಮಂಜುಳಾ ಮೇಡಂ, ನಿಮ್ಮ ಕಲಾಕೃತಿಗಳ ಬಗ್ಗೆ ನೀವೇ ವಿವರಿಸಿ ಎಂದೆ. ಹೋ ಶೂರ್ ಸರ್ ಎಂದು ಒಂದೊಂದೇ ಕಲಾಕೃತಿಗಳ ಬಗ್ಗೆಯೂ ವಿವರಿಸುತ್ತಾ ಸಾಗಿದಂತೆ ನಾನು ಬರೆದುಕೊಳ್ಳುತ್ತಾ ಹಿಂಬಾಲಿಸಿದೆ.
- ಗೊರೂರು ಅನಂತರಾಜು,
ಹಾಸನ.
ಮೊಬೈಲ್: 9449462879