LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Raichur

ಕಲ್ಲೂರು- ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ.

ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳು ತಾಯಿ ಮಗುವಿನ ಅರೋಗ್ಯದ ದೃಷ್ಟಿಯಿಂದ ಮಹತ್ವಪೂರ್ಣವಾಗಿವೆ:

ಕಲ್ಲೂರು:  ಚಿಕ್ಕ ಕುಟುಂಬ ಹೊಂದಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಉಚಿತವಾಗಿ ಮಹಿಳೆಯರಿಗೆ ಲಭ್ಯವಿರುವ ಕಾಪರ್‌-ಟಿ, ಮಾಲಾ-ಎನ್‌, ಛಾಯಾ(ಮಾತ್ರೆಗಳು), ಪ್ರತಿ ಮೂರು ತಿಂಗಳಿಗೊಮ್ಮೆ ಪಡೆಯಬಹುದಾದ ಅಂತರ ಚುಚ್ಚುಮದ್ದು, ಹಾಗೂ ಪುರುಷರಿಗೆ ಲಭ್ಯವಿರುವ ಕಾಂಡೊಮ್‌ ಬಳಸುವಿಕೆಯಿಂದ  ಮಗುವಿನ ಜನನದ ಮಧ್ಯ ಕನಿಷ್ಟ ಮೂರು ವರ್ಷಗಳ ಅಂತರ ಕಾಪಾಡಲು ಸಹಕಾರಿ ಎಂದು ಕಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಸಂಗಮೇಶ್ ತಿಳಿಸಿದರು.

 news_1787315617_3_868.webp

 

ಕಲ್ಲೂರು ಗ್ರಾಮದಲ್ಲಿ ಗ್ರಾಮಪಂಚಾಯತ ಮೂಲಕ ವಿಬಿಜಿ ರಾಮ್‌ ಜಿ ಕೂಲಿಕಾರ್ಮಿಕರು ತಮ್ಮ 6 ತಿಂಗಳಿನಿಂದ 3 ವರ್ಷದ ಒಳಗಿನ ಮಕ್ಕಳ ದಿನದ ಅವಧಿಯಲ್ಲಿ ಪಾಲನೆಗಾಗಿ ಆರಂಭಿಸಿರುವ ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ ನೀಡಿ ಮಾತನಾಡುತ್ತಾ, ಸರಕಾರದ ಈ ಯೋಜನೆಯು ಮಹತ್ವಪೂರ್ಣವಾದುದು, ಕೇಂದ್ರದಲ್ಲಿ ತೆಗೆದುಕೊಳ್ಳುವ ಕಾಳಜಿಯ ಜೊತೆ ಜೊತೆಗೆ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಎರಡನೇ ಮಗುವಿನ ಜನನಕ್ಕೆ ಅಂತರವಿಡಲು ಇಲಾಖೆಯಲ್ಲಿ ಉಚಿತವಾದ ವಿಧಾನಗಳ ಅಳವಡಿಕೆ ಮಾಹಿತಿ ಪಡೆಯಲು ಹಾಗೂ ಮಕ್ಕಳು ಬೇಡವೆನಿಸಿದರೆ ಲ್ಯಾಪರ್‌ಸ್ಕೋಪ್‌,  ಟ್ಯುಬೆಕ್ಟೂಮಿ, ಶಸ್ತ್ರಚಿಕಿತ್ಸೆ ಲಭ್ಯವಿದೆ. ಪುರುಷರಿಗೆ ಎನ್‌ಎಸ್‌ವಿ ಶಸ್ತ್ರಚಿಕಿತ್ಸೆ ಲಭ್ಯವಿದೆ. ಎಂದು ತಿಳಿಸಿದರು.

 

ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ಮಾತನಾಡಿ, ಮಗುವು ಎರಡು ವರ್ಷ ತುಂಬುವವರೆಗೂ ಪೂರಕ ಆಹಾರದೊಂದಿಗೆ ತಾಯಿಯ ಎದೆಹಾಲುನಿಣಿಸಲು ಮರೆಯಬಾರದು. ಅಲ್ಲದೆ ಮಗುವಿನ ಬಾಲ್ಯದಲ್ಲಿ ಕಂಡುಬರುವ 12 ಮಾರಕ ರೋಗಗಳ ವಿರುದ್ಧದ ಲಸಿಕೆಗಳನ್ನು ತಪ್ಪದೆ ಆಯಾ ಅವಧಿಯಲ್ಲಿ ಹಾಕಿಸಬೇಕು ಎಂದು ತಿಳಿಸಿದರು.

 news_1787315617_4_317.webp

 

ಈ ಸಂದರ್ಭದಲ್ಲಿ ಡಾ ಬಿಆರ್‌ ಅಂಬೇಡ್ಕರ್‌ ಬಾಲಕರ ಮೇಟ್ರೀಕ್‌ ಪೂರ್ವ ವಸತಿ ನಿಲಯಕ್ಕೆ ಬೇಟಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಡುಗೆ ಸಿಬ್ಬಂದಿಯರಿಗೆ ತಿಳಿಸಲಾಯಿತು. ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಮಂಜುಳಾ ಶುಕ್ಲಾ, ಆರೋಗ್ಯ ನಿರೀಕ್ಷಣಾಧಿಕಾರಿ ಮಹಮ್ಮದ್, ಅಂಗನವಾಡಿ ಕಾರ್ಯಕರ್ತೆ ಚಂದ್ರನೀಲಾ, ಶಿಶು ಪಾಲನಾ ಕೇಂದ್ರದ ಕೆರ್‌ಟೇಕರ್ ಮಹಾದೇವಿ, ಪವಿತ್ರಾ, ಹಾಗೂ ಇತರರು ಉಪಸ್ಥಿತರಿದ್ದರು. ‌

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗೇಂದ್ರಗೆ ಮತ್ತೊಂದು ಮಹತ್ವದ ಹೊಣೆ: ಕಲ್ಯಾಣ ಕರ್ನಾಟಕ ಸಚಿವಾಲಯದ ಜವಾಬ್ದಾರಿಸಂಸ್ಕೃತ ವಿಶ್ವವ್ಯಾಪಿ ಜ್ಞಾನಭಾಷೆ, ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಲಿಕಲ್ಲೂರು- ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ. ಹೊನ್ನಳ್ಳಿ ತಾಂಡಾದಲ್ಲಿ ಶ್ರೀಗುರು ಅಜ್ಜಯ್ಯನ ದ್ವಿತೀಯ ದಶಮಾನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆಬಳ್ಳಾರಿಯಲ್ಲಿ ದಿವಂಗತ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಪರಿಷತ್ ಸಭೆ ಹಾಗೂ ನಶಾಮುಕ್ತ ಭಾರತ ಅಭಿಯಾನಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ನ್ಯಾಯಯುತ ಅನುದಾನ ನೀಡಿ: ಸಿಎಂ ಡಿ ಕೆ ಶಿವಕುಮಾರ್ ಒತ್ತಾಯಯಾರಿಗೆ ಒಲೆಯುತ್ತೆ ಬಿಜೆಪಿ ಟಿಕೆಟ್ ರಾಜೀವ್ ಗಾಂಧಿ ಹಾದಿಯಲ್ಲಿ ರಾಹುಲ್ ಗಾಂಧಿ