LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Chamarajanagara

ಮಲೆ ಮಾದೇಶ್ವರ ಬೆಟ್ಟದ ದೇವರ ದರ್ಶನ ಪಡೆದ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿ. ನರೇಂದ್ರ

ಶ್ರೀ ಮಲೆ ಮಾದೇಶ್ವರ ಬೆಟ್ಟದ ಹೊರಗುತ್ತಿಗೆ ನೌಕರರ ಮನವಿಗೆ ಸ್ಪಂದಿಸಿದ ನಿಗಮದ ಅಧ್ಯಕ್ಷ ಸಿ. ನರೇಂದ್ರ

ಚಾಮರಾಜನಗರ : ಕರ್ನಾಟಕ ಸರ್ಕಾರದ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸಿ. ನರೇಂದ್ರ ರವರು ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿದ್ದಾಗ ಇಂದು ಹನ್ನೂರು ತಾಲೂಕು ವ್ಯಾಪ್ತಿಯ ಶ್ರೀ ಮಲೆ ಮಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು. ‌ಇದೇ ಸಮಯದಲ್ಲಿ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಂಬೇಡ್ಕರ್ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಥ್ ನೀಡಿದ್ದು ವಿಶೇಷವಾಗಿತ್ತು.

 

ನಂತರ ವರದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀ ಮಲೆ ಮಾದೇಶ್ವರ ಬೆಟ್ಟದ ಪ್ರವಾಸಿ ಮಂದಿರದಲ್ಲಿ ನಿಗಮದ ಅಧ್ಯಕ್ಷರನ್ನು ಭೇಟಿ ಮಾಡಿದ ಅಲ್ಲಿನ ಹೊರಗುತ್ತಿಗೆ ನೌಕರರು ತಾವು ಕಳೆದ ಒಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಕೂಡ ನಮಗೆ ಯಾವುದೇ ರೀತಿಯ ಸರ್ಕಾರವು ಸಂಬಳ ನೀಡದಿರುವುದು ಬಗ್ಗೆ ಹೇಳಿದಾಗ ಈ ಮನವಿಗೆ ಸ್ಪಂದಿಸಿದ, ನಿಗಮದ ಅಧ್ಯಕ್ಷರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದರು.

 news_1788801801_0_829.webp

 

ಪ್ರಮುಖವಾಗಿ ಹೊರಗುತ್ತಿಗೆ ನೌಕರರ ಮನವಿಗೆ ಸ್ಪಂದಿಸಿದ ಅವರು, ಸರ್ಕಾರದ ಕಡೆಯಿಂದ ಸಿಗಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ತಕ್ಷಣವೇ ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

 

ಕೊನೆಯಲ್ಲಿ ಶ್ರೀ ಮಾದೇಶ್ವರ ಬೆಟ್ಟ ಮತ್ತು ಕೊಳ್ಳೇಗಾಲ ರಸ್ತೆ ಮಾರ್ಗದ ಮಧ್ಯದಲ್ಲಿ ಬರುವ ಮಂಗಲ ಮತ್ತು ಕಾಮಗೆರೆಯಲ್ಲಿ ಸಿ. ನರೇಂದ್ರ ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನಿಸಿದರು. ಇದೇ ವೇಳೆ ಹೊಸದಾಗಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನಕ್ಕೆ ಭೇಟಿ ಮಾಡಿ ಕೆಲಸ ಕಾರ್ಯದ  ಪರಿಶೀಲನೆ ಮಾಡಿದರು.

news_1788801801_2_429.webp

 

ಹೊರಗುತ್ತಿಗೆ ನೌಕರರ ಮನವಿಗಳನ್ನು ಅಲಿಸಿ, ಸರ್ಕಾರದ ಕಡೆಯಿಂದ ಸಿಗಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ತಕ್ಷಣವೇ ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು.

- ಸಿ. ನರೇಂದ್ರ, ಅಧ್ಯಕ್ಷರು, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ, ಬೆಂಗಳೂರು

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿಜೆಪಿ ಬೃಹತ್ ಸಾರ್ವಜನಿಕ ಸಮಾವೇಶಕ್ಕೆ ಅನುಮತಿ : ಭರದ ಸಿದ್ದತೆವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿಸತತ ಪುನರ್ವಸತಿ ಮತ್ತು ಫಿಸಿಯೋಥೆರಪಿಯ ಮೂಲಕ ರೋಗಿ ಸಂಪೂರ್ಣ ಗುಣಮುಖಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯ. ಕಾಡಿನ ಜ್ಞಾನ ನಾಡಿಗೆ ಹಂಚಿದ ಕಾಡಿನ ಸಂತ ತೇಜಸ್ವಿ: ಗೊರೂರು ಶಿವೇಶ್ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ -2026 ಪಾದಯಾತ್ರೆ ಕೇವಲ ರಾಜಕೀಯ ಹೋರಾಟವಲ್ಲ; ಜನರ ಬದುಕಿನ ಪ್ರಶ್ನೆಗಳಿಗಾಗಿ ನಡೆಯುತ್ತಿರುವ ಜನಾಂದೋಲನ ವಿಜಯೇಂದ್ರ‘ಸಾಕ್ಷಿ ‘ ಕಿರುಚಿತ್ರ ಚಿತ್ರೀಕರಣ ಮುಕ್ತಾಯಮಲೆ ಮಾದೇಶ್ವರ ಬೆಟ್ಟದ ದೇವರ ದರ್ಶನ ಪಡೆದ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿ. ನರೇಂದ್ರಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ