LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Bellary

ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ

ಬಳ್ಳಾರಿ: ಲಯನ್ಸ್ ಕ್ಲಬ್ ಆಫ್ ಬಳ್ಳಾರಿ ಸಂಸ್ಥೆ  ವತಿಯಿಂದ ನಗರದ ಲಯನ್ಸ್ ಸೇವಾ ಸದನದ  ಟಿ.ವಿ. ಬದ್ರಿ ಮೆಮೋರಿಯಲ್ ಹಾಲ್ ನಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಮರ್ಪಣಾ ಮನೋಭಾವ, ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಆಯ್ದ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಶಿಕ್ಷಕರು ಸಮಾಜದ ನಿರ್ಮಾತೃಗಳಾಗಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಧ್ಯಕ್ಷ ಲಯನ್ ಮಲ್ಲಿಕಾರ್ಜುನ ಎಸ್.ಬಿ. ತಿಳಿಸಿದರು.

ಲಯನ್ಸ್ ಕ್ಲಬ್ ಆಫ್ ಬಳ್ಳಾರಿಯು ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಜನಸೇವೆಯಲ್ಲಿ  ತೊಡಗಿಸಿಕೊಳ್ಳಲು, ಸಮಾಜದ ಹಿತೈಷಿಗಳು ಹಾಗೂ ಸೇವಾಭಿಮಾನಿಗಳು ತಮ್ಮ ಪ್ರೋತ್ಸಾಹ, ಸಹಕಾರ ಮತ್ತು ದೇಣಿಗೆಯ ಮೂಲಕ ಕೈಜೋಡಿಸಬೇಕೆಂದು ವಿನಂತಿಸಿದರು. ಅಲ್ಲದೇ ಸಮಾಜ ಸೇವಾ ಕಾರ್ಯಗಳಿಗೆ ದೇಣಿಗೆ ನೀಡಲು ಹಾಗೂ ಸಹಕಾರ ನೀಡಲು ಇಚ್ಛಿಸುವವರು ಲಯನ್ಸ್ ಕ್ಲಬ್ ಆಫ್ ಬಳ್ಳಾರಿಯನ್ನು ಸಂಪರ್ಕಿಸುವಂತೆ ಕೋರಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಲಯನ್ ಕಲ್ಯಾಣ ಚಕ್ರವರ್ತಿ ಎ., ಖಜಾಂಚಿ ಲಯನ್ ಅಕ್ಕಿ ಶರಣ ಬಸವ ಸೇರಿದಂತೆ  ಕ್ಲಬ್‌ನ ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿಜೆಪಿ ಬೃಹತ್ ಸಾರ್ವಜನಿಕ ಸಮಾವೇಶಕ್ಕೆ ಅನುಮತಿ : ಭರದ ಸಿದ್ದತೆವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿಸತತ ಪುನರ್ವಸತಿ ಮತ್ತು ಫಿಸಿಯೋಥೆರಪಿಯ ಮೂಲಕ ರೋಗಿ ಸಂಪೂರ್ಣ ಗುಣಮುಖಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯ. ಕಾಡಿನ ಜ್ಞಾನ ನಾಡಿಗೆ ಹಂಚಿದ ಕಾಡಿನ ಸಂತ ತೇಜಸ್ವಿ: ಗೊರೂರು ಶಿವೇಶ್ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ -2026 ಪಾದಯಾತ್ರೆ ಕೇವಲ ರಾಜಕೀಯ ಹೋರಾಟವಲ್ಲ; ಜನರ ಬದುಕಿನ ಪ್ರಶ್ನೆಗಳಿಗಾಗಿ ನಡೆಯುತ್ತಿರುವ ಜನಾಂದೋಲನ ವಿಜಯೇಂದ್ರ‘ಸಾಕ್ಷಿ ‘ ಕಿರುಚಿತ್ರ ಚಿತ್ರೀಕರಣ ಮುಕ್ತಾಯಮಲೆ ಮಾದೇಶ್ವರ ಬೆಟ್ಟದ ದೇವರ ದರ್ಶನ ಪಡೆದ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿ. ನರೇಂದ್ರಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ