ಕಲಬುರಗಿ: ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ (ಪ್ರಾಥಮಿಕ, ಪ್ರೌಢ & ಪದವಿ ಪೂರ್ವ) ಇಲಾಖೆ, ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ-1098/112, ಪೊಲೀಸ್ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ. ವಿರಮ್ಮ ಗಂಗಸಿರಿ ಪದವಿ ಪೂರ್ವ ಮಹಾವಿದ್ಯಾಲಯ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ವಿ. ಜಿ. ಮಹಿಳಾ ಕಾಲೆಜಿನಲ್ಲಿ ಪೋಕ್ಸೋ ಕಾಯ್ದೆ ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಮಾನ್ಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ್ ನವಲೆ, ಮುಖ್ಯ ಅತಿಥಿಗಳಾಗಿ ಮಂಜುಳಾ ವಿ. ಪಾಟೀಲ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಲಬುರಗಿ, ಭರತೇಶ ಶೀಲವಂತರ ಕಾನೂನು ಮತ್ತು ಪರಿವಿಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಲಬುರಗಿ, ಬಸವರಾಜ್ ರಕ್ಷಣಾಧಿಕಾರಿಗಳು ಅಸಾಂಸ್ಥಿಕ ಸೇವೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಲಬುರಗಿ, ಬಸವರಾಜ್ ತೆಂಗಳಿ ಕಾರ್ಯಕ್ರಮ ಸಂಯೋಜಕರು ಮಕ್ಕಳ ಸಹಾಯವಾಣಿ-1098/112 ಕಲಬುರಗಿ, ಕಾರ್ಯಕ್ರಮದ ಅಧ್ಯಕ್ಷತೆ ಡಾll. ಮೋಹನರಾಜ್ ಪತ್ತಾರ ಪ್ರಾಂಶುಪಾಲರಾದ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಕಾಲೇಜು, ಭಾಗವಹಿಸಿದ್ದರು.
ಸಸಿಗೆ ನಿರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಭರತೇಶ ಶೀಲವಂತರ್ ಕಾನೂನು ಮತ್ತು ಪರಿವಿಕ್ಷಣಾಧಿಕಾರಿಗಳು ಇವರು, "ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹಾಗೂ ಕಲ್ಲೆಗಳು ಹೆಚ್ಚುತ್ತಿವೆ. ಮಕ್ಕಳು ಯುವ ವಯಸ್ಸಿನಲ್ಲಿ ಪ್ರೀತಿ ಪ್ರೇಮವೆಂದು ಮೋಹಕ್ಕೆ ಸಿಲುಕಿ ತಮ್ಮ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ. ಈ ವಯಸ್ಸಿನಲ್ಲಿ ಚೆನ್ನಾಗಿ ಓದಿ ದೊಡ್ಡ ವ್ಯಕ್ತಿಗಳಾಗಿ" ಎಂದು ತಿಳಿಹೇಳಿದರು.
ಕಾರ್ಯಕ್ರಮದ ಉದ್ಘಾಟಕರು ಕಾರ್ಯಕ್ರಮ ಉದ್ದೇಶಿಸಿ, "ಪೋಕ್ಸೋ ಕಾಯ್ದೆಯು ಮಕ್ಕಳ ಮೇಲಿನ ದೌರ್ಜನ್ಯ, ಕಿರುಕುಳ ಮತ್ತು ಹಲ್ಲೆ ಯಿಂದ ರಕ್ಷಣೆ ಪಡೆಯಲು ಈ ಕಾಯ್ದೆ ಬಂದಿದೆ. ಪ್ರೀತಿ ಪ್ರೇಮವೆಂಬ ಜಾಲಕ್ಕೆ ಸಿಲುಕಿ, ದೌರ್ಜನ್ಯವೆಸಗಿ 22 ರಿಂದ 25 ವಯಸ್ಸಿನ ಹೆಚ್ಚಿನ ಯುವಕರು ಕನಿಷ್ಠ 25ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಜೈಲುವಾಸ ಅನುಭವಿಸುತ್ತಿದ್ದಾರೆ. ಹಾಗಾಗಿ ಮಕ್ಕಳೇ ನೀವು ಓದಿನಲ್ಲಿ ಗಮನಕೊಡಿ ಮುಂದೆ ಸಮಾಜಕ್ಕೆ ಒಳ್ಳೆ ವ್ಯಕ್ತಿಗಳಾಗಿ" ಎಂದು ತಿಳಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಂಜುಳಾ ವಿ. ಪಾಟೀಲ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಇವರು ಕಾರ್ಯಕ್ರಮ ಉದ್ದೇಶಿಸಿ, "ಇತ್ತೀಚಿನ ದಿನಗಳಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚುತಿದ್ದು ಅದಕ್ಕೆ ಕಾರಣವೇ ಹುಡುಗ-ಹುಡುಗಿಯರ ಪ್ರೀತಿ-ಪ್ರೇಮ. ಹೀಗೆ ಪ್ರೀತಿ ಪ್ರೇಮವೆಂದು ಮನೆಬಿಟ್ಟು ಹೋಗಿ ಮದುವೆಯಾಗಿ ಒಂದು ಮಗುವನ್ನು ಹೆತ್ತು ಗಂಡ ಅಕಾಲೀಕ ಮರಣವಾದರೆ ಇತ್ತ ಅತ್ತೆ-ಮಾವ ಅಥವಾ ತಂದೆ-ತಾಯಿ ಯಾರೂ ನಿಮನ್ನು ಮನೆಯೊಳಗೇ ಸೇರಿಸೋಲ್ಲ. ಆಗ ನಿಮ್ಮ ಜೀವನ ನಿಮಗೆ ಹುಟ್ಟಿದ ಮಗುವಿನ ಬದುಕು ಚಿಂತಾಜನಕವಾಗುತ್ತೆ. ಹಾಗಾಗಿ ಹೆಣ್ಣು ಮಕ್ಕಳು ಈ ವಯಸ್ಸಿನಲ್ಲಿ ಯಾವುದಕ್ಕೂ ಲಕ್ಷಕೊಡದೆ ಚೆನ್ನಾಗಿ ಓದಿ ವಿದ್ಯಾವಂತರಾಗಿ ದೊಡ್ಡ IAS/KAS ಅಧಿಕಾರಿಗಳಾಗಿ" ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾll ಮೋಹನರಾಜ್ ಪತ್ತಾರ ಪ್ರಾಂಶುಪಾಲರು ಶ್ರೀಮತಿ. ವಿರಮ್ಮ ಗಂಗಸಿರಿ ಪದವಿ ಪೂರ್ವ ಕಾಲೇಜು ಇವರು ಅಧ್ಯಕ್ಷಿಯ ಮಾತನಾಡಿ, "ಇತ್ತೀಚಿನ ದಿನಗಳಲ್ಲಿ ಮಕ್ಕಳ ಕೈಯಲ್ಲಿ ಮೊಬೈಲ್ ಇರುವುದರಿಂದ ಭವಿಷ್ಯ ಇಂತಹ ಘಟನೆಗಳು ಸಂಭವಿಸುತ್ತಿರಬಹುದು ಎಂದು ನನ್ನ ಅನಿಸಿಕೆ. ಆದರೆ ನಮ್ಮ ಕಾಲೇಜಿನ ಮೊಬೈಲ್ ಬಳಕೆ ಸಂಪೂರ್ಣ ನಿಷೇಧಸಲಾಗಿದೆ ಹಾಗೆಂದು ಮಕ್ಕಳಿಂದ & ಪಾಲಕರಿಂದ ಮುಚ್ಚಳಿಕೆ ಪತ್ರ ಪಡೆದು ದಾಖಲಾತಿ ಮಾಡಿಕೊಳ್ಳುತ್ತಿದ್ದೇವೆ. ಹಾಗಾಗಿ ಭಾವಿಷ್ಯ ನಮ್ಮ ಕಾಲೇಜಿನ ಮಕ್ಕಳು ಯಾವುದೇ ಪ್ರೀತಿ ಪ್ರೇಮಕ್ಕೆ ಸಿಲುಕಿಕೊಂಡಿಲ್ಲ ಎಂದು ನನ್ನ ಭಾವನೆ" ಎಂದು ತಮ್ಮ ಕಾಲೆಜೀನ್ ನಿಯಮ ಕುರಿತು ವಿಶ್ಲೇಸಿದರು. ಕಾರ್ಯಕ್ರಮದ ನಿರೂಪಣೆ & ಸ್ವಾಗತ ಬಸವರಾಜ್ ವಿ. ಜಿ. ಮಹಿಳಾ ಪದವಿ ಪೂರ್ವ ಕಾಲೇಜು ಕೋರಿದರು. ಕಾರ್ಯಕ್ರಮದ ವಂದನಾರ್ಪಣೆ ಕಾಲೇಜಿನ ಪ್ರದ್ಯಾಪಾಕಿ ನಡೆಸಿಕೊಟರು. ಒಟ್ಟು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು & ಕಾಲೇಜಿನ ಪ್ರಧ್ಯಾಪಕರುಗಳು ಭಾಗವಹಿಸಿದರು.