LIVE TV StateNationalPoliticsCrimeEntertainmentSportsEducationFINANCE & TAXATION
Entertainment News

ಹಾಡಿನ ಚಿತ್ರೀಕರಣದೊಂದಿಗೆ ‘ಚಂದ್ರಗಿರಿ’ ಚಿತ್ರೀಕರಣ ಮುಕ್ತಾಯ

ಬೆಂಗಳೂರು: ಸ್ನೇಹಾಲಯಂ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೆ.ಎಸ್. ಪಂಚಾಕ್ಷರಯ್ಯ, ಯಶಸ್, ಚಿದಾನಂದಪ್ಪ ಕನಕಗಿರಿ, ಮರಿಸ್ವಾಮಿ ಹಾಗೂ ಅಹಿನಾ ಮನೋ ಜಂಟಿಯಾಗಿ ನಿರ್ಮಿಸುತ್ತಿರುವ ಬಹುನಿರೀಕ್ಷಿತ ‘ಚಂದ್ರಗಿರಿ’ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ.

news_1792384736_0_588.webp

 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದ ಶ್ರೀ ಗಡದಮ್ಮ ತಾಯಿ ಸನ್ನಿಧಾನದಲ್ಲಿ ಈ ಹಿಂದೆ ‘ಮಾಯಾವಿ’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ನಟ ರಘುರಾಮ್ ಅಭಿನಯದಲ್ಲಿ ಮೂಡಿಬಂದ ‘ನನ್ನದು ನಮ್ಮದು ಎಲ್ಲಾ ಸುಳ್ಳು, ಅರಿಯೋ ನೀ ಮೊದಲು...’ ಎಂಬ ವಿಶೇಷ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರತಂಡ ಕುಂಬಳಕಾಯಿ ಒಡೆದು ಚಿತ್ರೀಕರಣಕ್ಕೆ ಅಧಿಕೃತವಾಗಿ ತೆರೆ ಎಳೆದಿದೆ. ಚಿತ್ರದ ನಿರ್ದೇಶಕ ರಾಜೀವ್ ಕೃಷ್ಣ ಅವರೇ ಸಂಗೀತ ಸಂಯೋಜಿಸಿ, ನೃತ್ಯ ನಿರ್ದೇಶನವನ್ನೂ ಮಾಡಿದ್ದು, ವಿಭಿನ್ನ ಕಥಾ ಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿರುವ ‘ಚಂದ್ರಗಿರಿ’ ಚಿತ್ರವು ಭಯಾನಕ ಸನ್ನಿವೇಶಗಳು, ಕುತೂಹಲಕಾರಿ ತಿರುವುಗಳು, ರೋಚಕ ಘಟನಾವಳಿಗಳನ್ನೊಳಗೊಂಡ ಹಾರರ್, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಚಿತ್ರವಾಗಿದೆ.

news_1792384737_1_436.webp

 

ಚಿತ್ರದಲ್ಲಿ ಹಿರಿಯ ನಟ ಶೋಭರಾಜ್, ಪಂಚಾಕ್ಷರಯ್ಯ, ಯಶಸ್, ಮರಿಸ್ವಾಮಿ, ಶಿಲ್ಪಾ ಶ್ರೀನಿವಾಸ್, ಉಗ್ರಂ ರವಿ, ಬಲರಾಮ್ ಪಾಂಚಾಳ್, ಕಿಶೋರ್ ಕಾಸರಗೋಡು, ರಘುರಾಮ್, ರೂಪಶ್ರೀ, ನಂದಿನಿ ಕಮ್ಮಯ್ಯ, ಶಶಿರೇಖ, ಮಾಸ್ಟರ್ ವೀರಧನುಷ್ ಸೇರಿದಂತೆ ಪ್ರಮುಖ ಕಲಾವಿದರಿದ್ದಾರೆ. ಬಹುಮುಖ ಪ್ರತಿಭೆ ರಾಜೀವ್ ಕೃಷ್ಣ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದಲ್ಲದೆ, ಸಂಗೀತ ಸಂಯೋಜನೆ, ನೃತ್ಯ ನಿರ್ದೇಶನ ಕೂಡ ಮಾಡಿದ್ದಾರೆ. ಗುರುದತ್ ಮುಸರಿ ಛಾಯಾಗ್ರಹಣ, ಯುವರಾಜ್ ಬಿ. ಸಂಕಲನ, ವೈಲೆಂಟ್ ವೇಲು ಸಾಹಸ ನಿರ್ದೇಶನ, ದೇವು ಕೆ.ಅಂಬಿಗ ಗೀತಸಾಹಿತ್ಯ,ಎಂ.ಜಿ.ಕ್ಲೇಶ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ವಿ.ಎಂ.ಎಸ್.ಗೋಪಿ ಪಿಆರ್ ಓ ಆಗಿದ್ದು, ಮಲ್ಲಿ ಕೆ. ವಡ್ಡರಹಟ್ಟಿ ಸಹ ನಿರ್ದೇಶನವಿದೆ. ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಚಿತ್ರತಂಡ ಇದೀಗ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಸಿದ್ದು, ಇದೆ ಡಿಸೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ತೆರೆಗೆ ತರಲು ಯೋಜನೆ ರೂಪಿಸಿದೆ. ವಿಭಿನ್ನ ಕಥಾವಸ್ತು, ಅನುಭವಿ ಕಲಾವಿದರ ಅಭಿನಯ, ತಾಂತ್ರಿಕ ಶ್ರೀಮಂತಿಕೆಯೊಂದಿಗೆ ಮೂಡಿಬರುತ್ತಿರುವ ‘ಚಂದ್ರಗಿರಿ’ ಚಿತ್ರವು ಕನ್ನಡ ಸಿನಿಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವ ನಿರೀಕ್ಷೆಯನ್ನು ಚಿತ್ರತಂಡ ಹೊಂದಿದೆ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯ ದಶಮಿಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದಸರಾ ಹಾಗೂ ಆಯುಧ ಪೂಜೆಜಾತಿಭೇದವಿಲ್ಲದೆ ದಲಿತರ ಮನೆಯಲ್ಲಿ ಊಟ ಸವಿದ ಡಾ. ಬಿ. ಯೋಗೇಶ್ ಡಿಸ್ಕವರಿ ವಾಹಿನಿಯಲ್ಲಿ ಕೆಐಐಟಿ ಸಾಧನೆ ಬಣ್ಣನೆ ಕನ್ನಡಿಗರು ವಿಶಾಲತೆ, ಸಾಮರಸ್ಯ ಉಳ್ಳವರಾಗಿರುವುದರಿಂದಲೇ ಕನ್ನಡಕ್ಕೆ ಕಂಟಕ!ಹಾಡಿನ ಚಿತ್ರೀಕರಣದೊಂದಿಗೆ ‘ಚಂದ್ರಗಿರಿ’ ಚಿತ್ರೀಕರಣ ಮುಕ್ತಾಯಸರ್ವೋದಯ ಮಹಾವಿದ್ಯಾಲಯದ ಸೌಕರ್ಯ, ಶೈಕ್ಷಣಿಕ ಸಾಧನೆಗೆ ದಾವಣಗೆರೆ ವಿವಿ ಉಪಕುಲಪತಿ ಮೆಚ್ಚುಗೆಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ