LIVE TV StateNationalPoliticsCrimeEntertainmentSportsEducationFINANCE & TAXATION
Districts Dharwad | Entertainment News

ನಾಯಕ ಮನ್ವಿತ್ಗೆ ‘ಅತ್ಯುತ್ತಮ ನಟ’ ಪ್ರಶಸ್ತಿ

ಧಾರವಾಡ : ಕನ್ನಡ ಚಿತ್ರರಂಗದ ನಾಯಕ ನಟರಾಗಿ ಭರವಸೆಯನ್ನು ಹುಟ್ಟುಹಾಕಿರುವ ಯುವ ನಾಯಕಮನ್ವಿತ್ಗೆ  ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ.

ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ರಿ)ವತಿಯಿಂದ ಧಾರವಾಡದ  ಆಲೂರ ವೆಂಕಟರಾಯರ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-೨೦೨೬ರಲ್ಲಿ ಮಹಾಂತೇಶ ಹಳ್ಳೂರ ಅವರ ಕಥೆ ಆಧಾರಿತ ಗುರುದತ್ ಮುಸುರಿ ನಿರ್ದೇಶನದಡೆತ್ ಸರ್ಟಿಫಿಕೆಟ್ಚಿತ್ರದಲ್ಲಿನ ನಾಯಕ ಪಾತ್ರದ ಅಭಿನಯಕ್ಕಾಗಿಅತ್ಯುತ್ತಮ ನಟಪ್ರಶಸ್ತಿ ದೊರೆತಿದೆ. ಹಿರಿಯ ನಟ, ಪರಿಸರವಾದಿ, ಜೀವಮಾನ ಸಾಧನೆ ಪುರಸ್ಕೃತ ಸುರೇಶ ಹೆಬ್ಳೀಕರ, ನಿರ್ದೇಶಕ ನಟ ಅನಿರುದ್ಧ ಜತ್ಕರ್, ಗ್ಯಾರಂಟಿ ನ್ಯೂಜ್ ರಾಧಾ ಹಿರೇಗೌಡರ, ನ್ಯೂಜೋ ನ್ಯೂಜ್ ಹರೀಶ ನಾಗರಾಜು ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಹಿರಿಯ ಚಲನಚಿತ್ರ ನಟಿ ಭವ್ಯ, ಹ್ಯಾಟ್ರಿಕ್ ನಿರ್ದೇಶಕ ನಾಗೇಂದ್ರ ಮಾಗಡಿ ಪ್ರಶಸ್ತಿ ಪತ್ರದೊಂದಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ .. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಮಂಜುನಾಥ ಹಗೇದಾರ, ಕಾರ್ಯಾಧ್ಯಕ್ಷ ಡಾ.ಕಲ್ಮೇಶ ಹಾವೇರಿಪೇಟ, ಪ್ರಧಾನ ಕಾರ್ಯದರ್ಶಿ ರಾಹುಲ್ ದತ್ತಪ್ರಸಾದ, ಉಪಾಧ್ಯಕ್ಷ ಪ್ರಭು  ಹಂಚಿನಾಳ, ಸಲಹಾ ಸಮಿತಿ ಸದಸ್ಯ, ಚಲನಚಿತ್ರ ಪತ್ರಕರ್ತ ಡಾ.ಪ್ರಭು ಗಂಜಿಹಾಳ ಮತ್ತು ಮಂಡಳಿಯ ಪದಾಧಿಕಾರಿಗಳು,  ಡೆತ್ ಸರ್ಟಿಫಿಕೇಟ್ಚಿತ್ರದ ಕಥೆಗಾರ ಮಹಾಂತೇಶ ಹಳ್ಳೂರ,

ನಿರ್ದೇಶಕ ಗುರುದತ್ ಮುಸುರಿ, ಹಿರಿಯ ಹೋರಾಟಗಾರರು,  ನ್ಯಾಯವಾದಿ ಬಿ.ಡಿ.ಹಿರೇಮಠ ಉಪಸ್ಥಿತರಿದ್ದರು. ಇದೀಗ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ  ಚಿತ್ರೀಕರಣವಾದ "ಡೆತ್ ಸರ್ಟಿಫಿಕೇಟ್" ಚಲನಚಿತ್ರಕ್ಕೆಅತ್ಯುತ್ತಮ  ನಟಪ್ರಶಸ್ತಿ ದೊರೆತಿದ್ದಕ್ಕೆ ಮನ್ವಿತ್ ಖುಷಿಯಾಗಿದ್ದಾರೆ.

ಸಧ್ಯದಲ್ಲೆ "ಧ್ರುವನಕ್ಷತ್ರ" ಕನ್ನಡ ಚಲನಚಿತ್ರ ಮತ್ತು  "ಕೊಪ್ಪಂ" ಎಂಬ ತಮಿಳು ಚಲನಚಿತ್ರದಲ್ಲಿಯೂ ನಾಯಕ ನಟನಾಗಿ  ನಟಿಸಿದ್ದು ಅವೆರಡೂ ಕೂಡಾ ಬಿಡುಗಡೆಗೆ ಸಿದ್ಧವಾಗಿದ್ದು ಅವರಿಗೆ ತಮ್ಮ ಅಭಿನಯದಲ್ಲಿ ಹೆಚ್ಚಿನ ಭರವಸೆ ಹುಟ್ಟುಹಾಕಿದೆ.ಪ್ರಶಸ್ತಿ ಪಡೆದದ್ದಕ್ಕೆಡೆತ್ ಸರ್ಟಿಫಿಕೇಟ್ಚಿತ್ರ ತಂಡ ಇವರನ್ನು ಅಭಿನಂದಿಸಿದೆ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ