ಮರಿಯಮ್ಮನಹಳ್ಳಿ: ಹಿಂದೂಧರ್ಮದ ಉಳುವಿಗಾಗಿ ಸಾಮ್ರಾಜ್ಯಕಟ್ಟಿದ ವಾಲ್ಮೀಕಿನಾಯಕ ಸಮಾಜದವರು ಖಡ್ಗದ ಬದಲಾಗಿ ಶಿಕ್ಷಣದ ಅಸ್ತ್ರಹಿಡಿದು ಸಮಾಜದಲ್ಲಿ ಮುಂದುವರೆಯಿರಿ ಎಂದು ಜಿ.ನಾಗಲಾಪುರದ ಶ್ರೀಗುರು ಒಪ್ಪತ್ತೇಶ್ವರ ಮಠದ ನಿರಂಜಮಪ್ರಭುಮಹಾಸ್ವಾಮಿಗಳು ಕರೆನೀಡಿದರು.
ಅವರು ಸಮೀಪದ ಐತಿಹಾಸಿಕ ತಿಮ್ಮಲಾಪುರಗ್ರಾಮದಲ್ಲಿ ಭಾನುವಾರ ಅಖಿಲಕರ್ನಾಟಕ ವಾಲ್ಮೀಕಿನಾಯಕ ಮಹಾಸಭಾ ತಿಮ್ಮಲಾಪುರ ಗ್ರಾಮಘಟಕದಿಂದ ಮರಿಯಮ್ಮನಹಳ್ಳಿ ಹೋಬಳಿಮಟ್ಟದ ಶ್ರೀ ಮಹರ್ಷಿವಾಲ್ಮೀಕಿಜಯಂತಿ,ಪ್ರತಿಭಾಪುರಸ್ಕಾರ,ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ಭವಿಷ್ಯಕ್ಕಾಗಿ ಶಿಕ್ಷಣಪಡೆಯಿರಿ,ಶಿಕ್ಷಣದಿಂದ ಸರ್ರ್ವತ್ತೋಮುಖ ಅಭಿವೃದ್ದಿಯಾಗಲಿದೆ.ಇದರೊಂದಿಗೆ ಕಾಯಕವು ಮುಖ್ಯವಾಗಿದ್ದು ಅದರೊಂದಿಗೆ ಬದುಕು ಕಟ್ಟಿಕೊಳ್ಳಿ ಎಂದರು.
ಶಾಸಕ ನೇಮಿರಾಜನಾಯ್ಕ್ ಮಾತನಾಡಿ,ವಾಲ್ಮೀಕಿ ಸಮಾಜವು ಇತ್ತೀಚೆಗೆ ಮೀಸಲಾತಿಯಿಂದ ವಂಚಿತವಾಗಿದೆ.ಸಮಾಜದ ಮೀಸಲಾತಿ ಹೋರಾಟಕ್ಕೆ ಸದಾ ಜೊತೆಗಿರುತ್ತೇನೆಂದರು.ಸರ್ಕಾರದ ನಿರ್ಲಕ್ಷ್ಯದಿಂದ ಈ ಸಮಾಜದ ಮೀಸಲಾತಿ ತಪ್ಪಿದೆ ಎಂದುದೂರಿದರು.ಈಗ್ರಾಮದಲ್ಲಿ ಸಮುದಾಯಭವನ ನಿರ್ಮಿಸಲು ಅನುದಾನ ನೀಡುವೆ ಎಂದು ಭರವಸೆ ನೀಡಿ,ಇದೇ ಗ್ರಾಮದಲ್ಲಿ ಕೆ.ಪಿ.ಎಸ್.ಸಿ.ಶಾಲೆ ನಿರ್ಮಾಣಕ್ಕೆ 7ಕೋಟಿರೂ.ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ವಾಲ್ಮೀಕಿಪೀಠದ ವಾಲ್ಮೀಕಿಪ್ರಸನ್ನಾನಂದ ಮಹಾಸ್ವಾಮಿ ದಿವ್ಯಸಾನಿಧ್ಯವಹಿಸಿ ಮಾತನಾಡಿ,ಸರ್ಕಾರಗಳ ವಿಳಂಬನೀತಿಯಿಂದ ವಾಲ್ಮೀಕಿಸಮಾಜಕ್ಕೆ ಮೀಸಲಾತಿಸಿಗುತ್ತಿಲ್ಲ.ಮೀಸಲಾತಿಗಾಗಿ ವಾಲ್ಮೀಕಿಸಮಾಜವು ಸಂಘಟಿತವಾಗಿ ಹೋರಾಟ ನಡೆಸಬೇಕಿದೆ.
ಪ.ಜಾ,ಪ.ಪಂ.ಗಳ ಮೀಸಲಾತಿ ಹೋರಾಟಕ್ಕೆ ನಾಡಿನ ಈ ಸಮುದಾಯಗಳ ಶಾಸಕರು ಬೆಂಬಲಿಸಬೇಕೆಂದು ಕರೆನೀಡಿದರು.ವಾಲ್ಮೀಕಿಜಯಂತಿಗಳ ಮೂಲಕ ಮೀಸಲಾತಿ ಹೋರಾಟದ ಜಾಗೃತಿ ಮೂಡಿಸ ಬೇಕೆಂದರು.
ಇದಕ್ಕೂ ಮುನ್ಮ ರಾಷ್ಟ್ರೀಯಹೆದ್ದಾರಿಯಿಂದ ರಾಜವೀರಮದಕರಿನಾಯಕ ವೇದಿಕೆಯವರೆಗೆ ವಾಲ್ಮೀಕಿಭಾವಚಿತ್ರ ಹಾಗು ಪೂಜ್ಯರ ಮೆರವಣಿಗೆ ನಡೆಯಿತು.
ಈ ಸಂಧರ್ಭದಲ್ಲಿ ವಾಲ್ಮೀಕಿಪೀಠದ ಧರ್ಮದರ್ಶಿ ಜಂಬಯ್ಯನಾಯಕ,ಮಾಜಿಜಿ.ಪಂ.ಸದಸ್ಯ ಗೋವಿಂದರಪರಶುರಾಮ,ಮುಖಂಡರಾದ ಎಸ್.ಕೃಷ್ಣನಾಯ್ಕ್,ಎಸ್.ಎಂ.ವೀರೇಶ್ವರಸ್ವಾಮ,ಪಿ.ಓಬಪ್ಪ,ರಾಜಪ್ಪ,ಗರಗಪ್ರಕಾಶಪೂಜಾರ್,ಸಣ್ಣಬೋಸಪ್ಪ,ಮರಡಿಹನುಮಂತ,ರೋಗಣ್ಣವರ ಮಂಜುನಾಥ,ಎಂ.ಪ್ರಕಾಶತಿಮ್ಮಲಾಪುರ,ಗ್ರಾಮ ಘಟಕದ ಅಧ್ಯಕ್ಷ ಎಂ.ನಾರಾಯಣ,ಸ್ಥಳಿಯಮುಖಂಡ ಮುರಾರಿ ಸೇರಿದಂತೆ ಇತರರಿದ್ದರು.ಶಿಕ್ಷಕ ಬಿ.ಪರಶುರಾಮ ನಿರ್ವಹಿಸಿದರು.