LIVE TV StateNationalPoliticsCrimeEntertainmentSportsEducationFINANCE & TAXATION
Districts Koppal

ಮಕ್ಕಳನ್ನು ಮೊಬೈಲ್ನಿಂದ ದೂರವಿಟ್ಟು ಕ್ರೀಡೆಗಳಲ್ಲಿ ತೊಡಗಿಸಿ: ಬಸವರಾಜ್ ಶೀಲವಂತರ್ ಕರೆ

ಕೊಪ್ಪಳ: ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಗೀಳಿಗೆ ಬಿದ್ದು ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹದಗೆಡುತ್ತಿದ್ದು, ಪಾಲಕರು ಮಕ್ಕಳನ್ನು ಮೊಬೈಲ್‌ನಿಂದ ದೂರವಿಟ್ಟು ಸ್ಕೇಟಿಂಗ್‌ನಂತಹ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್ ಕಿವಿಮಾತು ಹೇಳಿದರು.

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಕೊಪ್ಪಳ ಜಿಲ್ಲಾ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮುಂದುವರೆದು ಮಾತನಾಡಿ ಸಾಂಪ್ರದಾಯಿಕತೆಯಿಂದ ಆಧುನಿಕತೆಯೆಡೆಗೆ: ಹಿಂದಿನ ಕಾಲದಲ್ಲಿ ನಾವು ಆಡಿದ ಲಗೋರಿ, ಗೋಲಿಗುಂಡು ಹಾಗೂ ಚಿಣಿಪಣಿಯಂತಹ ಸಾಂಪ್ರದಾಯಿಕ ಆಟಗಳು ಜನಪ್ರಿಯವಾಗಿದ್ದವು. ಆದರೆ, ಬದಲಾದ ಕಾಲಘಟ್ಟದಲ್ಲಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸ್ಕೇಟಿಂಗ್‌ನಂತಹ ಆಧುನಿಕ ಕ್ರೀಡೆಗಳು ಅತಿ ಅವಶ್ಯಕವಾಗಿದ್ದು, ಸರ್ಕಾರವೂ ಶಾಲಾ ಮಕ್ಕಳಿಗೆ ಸ್ಕೇಟಿಂಗ್ ಕಲಿಯಲು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎ.ಗಫಾರ್ ಮಾತನಾಡಿ, ಸ್ಪರ್ಧೆಗಿಂತ ನಿರಂತರ ಅಭ್ಯಾಸ ಬಹಳ ಮುಖ್ಯ. ಸ್ಕೇಟಿಂಗ್ ರೂಢಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯದ ಜತೆಗೆ ದೈಹಿಕ ಸಮತೋಲನ ಮತ್ತು ಏಕಾಗ್ರತೆ ವೃದ್ಧಿಯಾಗುತ್ತದೆ. ಇದು ಕ್ರೀಡೆಗೆ ಮಾತ್ರವಲ್ಲದೆ, ಶೈಕ್ಷಣಿಕ ಅಭಿವೃದ್ಧಿಗೂ ಅತ್ಯಂತ ಸಹಕಾರಿಯಾಗಿದೆ ಎಂದರು.

ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೆಬೂಬ್ ಹುಸೇನ್ ಮಾತನಾಡಿ, 1998ರಲ್ಲಿ ಗಂಗಾವತಿಯಲ್ಲಿ ಕೆಲವೇ ಯುವಕರೊಂದಿಗೆ ಆರಂಭವಾದ ಸ್ಕೇಟಿಂಗ್ ತರಬೇತಿ ಇಂದು ಹೆಮ್ಮರವಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ. ರಿಯಾಯಿತಿ ಶುಲ್ಕದಲ್ಲಿ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.

 news_1793679016_5_575.webp

 

ವಿಶೇಷ ಸನ್ಮಾನಗಳು:

ಕಾರ್ಯಕ್ರಮದಲ್ಲಿ ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಕರಾಟೆ, ವುಶು ಮತ್ತು ಜೂಡೋ ಸ್ಪರ್ಧೆಗಳಲ್ಲಿ ವಿಜೇತರಾದ ಮಹಿಳಾ ಕ್ರೀಡಾಪಟುಗಳಾದ ಉಷಾ ಗೋಪಾಲ್, ಮಹಾಲಕ್ಷ್ಮಿ ಬಸವರಾಜ್, ಲಿಖಿತಾ ಹಾಗೂ ರಂಗಮ್ಮ ಷಣ್ಮುಖಪ್ಪ ಶ್ಯಾವಂತಗೇರಿ ಅವರನ್ನು ಗೌರವಿಸಲಾಯಿತು. ಅಲ್ಲದೆ, ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದ ಕಿಷ್ಕಿಂದಾ ಯುವ ಚಾರಣ ಬಳಗ ಮತ್ತು ಅಮರ್ ಆಸ್ಪತ್ರೆಯ ಡಾ. ಅಮರೇಶ್ ಪಾಟೀಲ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

 

 ವೇದಿಕೆ ಮೇಲೆ ಬೆಂಗಳೂರಿನ ಸ್ಕೇಟಿಂಗ್ ತರಬೇತುದಾರರಾದ ಚಿರಂಜೀವಿ.ಕೊಪ್ಪಳದ ಶಿವಾನಂದ ಹಾದಿಮನಿ.ಲಿಂಗರಾಜ ಮತ್ತು ಸಮೃದ್ಧಿ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ಪ್ರವೀಣ್ ಕುಮಾರ್. ಮೌಲಾ ಸಾಬ್ ಮುಂತಾದವರು ಉಪಸ್ಥಿತರಿದ್ದರು.

ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ಜಿಲ್ಲಾ ಸಹ ಕಾರ್ಯದರ್ಶಿ ಷಣ್ಮುಖಪ್ಪ ಶ್ಯಾವಂತಗೇರಿ ಸ್ವಾಗತಿಸಿ ನಿರೂಪಿಸಿದರೆ, ಜಿಲ್ಲಾ ಖಜಾಂಚಿ ಹಾಗೂ ಕರಾಟೆ ತರಬೇತುದಾರ ಅನ್ವರ್ ಪಾಷಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ಸ್ಕೇಟಿಂಗ್ ತರಬೇತುದಾರ ಸೈಯ್ಯದ್ ಬಿಲಾಲ್ ವಂದನಾರ್ಪಣೆಗೈದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀಪಗಳ ಹಬ್ಬದ ಮಹತ್ವ, ಆಚರಣೆಯ ವಿಧಿ ವಿಧಾನ ಇಲ್ಲಿದೆಕೋಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಇಟಲಿಯ ಹೈಡ್ರೋನಿಕ್' ಸಂಸ್ಥೆ ಹಾಗೂ 'ಲಿಫ್ಟ್ ಎಕ್ಸ್ಪೋಗೆ' ಡಾ. ಬಿ.ಎಂ. ಉಮೇಶ್ ಕುಮಾರ್ ಭೇಟಿಮಕ್ಕಳನ್ನು ಮೊಬೈಲ್ನಿಂದ ದೂರವಿಟ್ಟು ಕ್ರೀಡೆಗಳಲ್ಲಿ ತೊಡಗಿಸಿ: ಬಸವರಾಜ್ ಶೀಲವಂತರ್ ಕರೆನಕಲಿ ಮತದಾರರಿಗೆ ರಕ್ಷಣೆ ನೀಡುವುದೇ ಎಸ್ಐಆರ್ ವಿರೋಧಿಗಳ ಅಜೆಂಡಾ ಅಲ್ಲವೇ?” – ಪ್ರಭಾಕರ್ ರಾಗಿ ಅಂಗಡಿಗೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆಹಳ್ಳಿ-ಹಳ್ಳಿಗೆ ತೆರಳಿ ಕಾಂಗ್ರೆಸ್ ಭದ್ರಕೋಟೆ ನಿರ್ಮಿಸುತ್ತಿರುವ ಡಾ. ಯೋಗೇಶ್ ಬಾಬುವಾಲ್ಮೀಕಿನಾಯಕ ಸಮಾಜದವರು ಖಡ್ಗದ ಬದಲಾಗಿ ಶಿಕ್ಷಣದ ಅಸ್ತ್ರಹಿಡಿಯಿರಿಚಲನಚಿತ್ರ ನಟ, ನಿರ್ದೇಶಕ ಚಂದ್ರಹಾಸ ಆಳ್ವರಿಗೆ ಸನ್ಮಾನಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ