LIVE TV StateNationalPoliticsCrimeEntertainmentSportsEducationFINANCE & TAXATION
Districts Chitradurga

ಕೋಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಚಳ್ಳಕೆರೆ : ‎ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 71 ನೆ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಮಾಡಲಾಯಿತು. ಕನ್ನಡಾಂಬೆ ತಾಯಿ ಭುವನೇಶ್ವರಿಯನ್ನು ಪೂಜಿಸಿ ಪ್ರಾರ್ಥಿಸಿ ಗೌರವ ಸಲ್ಲಿಸಿ ಪುಷ್ಪ ನಮನ ಸಲ್ಲಿಸಲಾಯಿತು.

‎

‎ಶಾಲಾ ಮುಖ್ಯ ಶಿಕ್ಷಕರಾದ ರೇವಣ್ಣರವರು ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ಏಕೀಕರಣ ಚಳುವಳಿಯ ಬಗ್ಗೆ ಮಾಹಿತಿ ನೀಡಿದರು,ಕನ್ನಡ ಭಾಷೆ 2000 ವರ್ಷಗಳ ಇತಿಹಾಸ ಇರುವ ಭಾಷೆ ಕನ್ನಡ ಭಾಷೆ ಸಾಹಿತ್ಯ 8 ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ನಾಡು ನಮ್ಮ ಕನ್ನಡ ನಾಡು  ಎಂದು ಹೇಳಿದರು.

‎ ಸಹ ಶಿಕ್ಷಕಿಯಾದ ‎ಆರ್. ಆಶಾ ಮಾತನಾಡಿ ನಮ್ಮ ಮಾತೃ ಭಾಷೆ ಕನ್ನಡದ ಮಹತ್ವ ವಿವರಿಸಿದರು. ಸಹ ಶಿಕ್ಷಕಿಯಾದ ಎಸ್ ಸುಶೀಲಮ್ಮ ಮಾತನಾಡಿ ಕನ್ನಡ ಭಾಷೆ ಬೆಳೆದು ಬಂದ ಹಾದಿ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ನಾಡಿನ ಮೇಲೆ ಹೇಗೆ ಬೆಳಕು ಚೆಲ್ಲಿತು ಎಂಬುದರ ಬಗ್ಗೆ ತಿಳಿಸಿಕೊಟ್ಟರು

‎news_1793679800_0_847.webp

 

‎ನಂತರ ಶಾಲಾ ಮಕ್ಕಳಿಂದ ನಮ್ಮ ನಾಡು ನುಡಿ ಸಂಸ್ಕೃತಿಯ ಸಂದೇಶ ನೀಡುವ ದೇಶ ಭಕ್ತಿ ಗೀತೆಗಳು, ಕನ್ನಡ ಗೀತೆಗಳು ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

‎ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನ ಎಸ್ ಡಿ ಎಂ ಸಿ ಅಧ್ಯಕ್ಷರಾದ ದಾಸಯ್ಯ ಎನ್ ವಹಿಸಿದ್ದರು ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ದೀಪ ಜಯಣ್ಣ ಉಪಸ್ಥಿತಿ ವಹಿಸಿದ್ದರು, ಸದಸ್ಯರಾದ ಶಿಲ್ಪಾ ಎಸ್, ಅನಿತಮ್ಮ ಮೋಹನರೇಡ್ಡಿ, ಎ .ಟಿ ನಾಗರಾಜ್, ಮೋಹನ್ ಡಿ ಹಾಗೂ ಶಾಲಾ ಮಕ್ಕಳು ಮತ್ತು ಊರಿನ ಗ್ರಾಮಸ್ಥರು, ಮುಖಂಡರು ಯುವಕರು,ಮಹಿಳೆಯರು, ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

‎

‎ಕಾರ್ಯಕ್ರಮದಲ್ಲಿ  6 ನೆಯ ತರಗತಿ ವಿದ್ಯಾರ್ಥಿನಿ ವಿನುತ ಎಮ್ ಪ್ರಾರ್ಥಿಸಿದರು, ಸಹ ಶಿಕ್ಷಕಿಯಾದ ಎಸ್.

‎ಸುಶೀಲಮ್ಮ ರವರು  ವೇದಿಕೆಯಲ್ಲಿ ಇರುವ ಎಲ್ಲ ಗಣ್ಯಮಾನ್ಯರನ್ನು ಸ್ವಾಗತಿಸಿದರು, ಶಾಲೆಯ ಸಹ ಶಿಕ್ಷಕರಾದ ಬಸವರಾಜ ಜಿ.ಟಿ ರವರು ಕಾರ್ಯಕ್ರಮವನ್ನು ನಿರೂಪಿಸಿದರು, ಶಿಕ್ಷಕಿಯಾದ ಸುಪ್ರಿಯಾ ಜೆ ವಂದನಾರ್ಪಣೆ ಸಲ್ಲಿಸಿದರು. ಒಟ್ಟಾರೆಯಾಗಿ ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು..

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀಪಗಳ ಹಬ್ಬದ ಮಹತ್ವ, ಆಚರಣೆಯ ವಿಧಿ ವಿಧಾನ ಇಲ್ಲಿದೆಕೋಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಇಟಲಿಯ ಹೈಡ್ರೋನಿಕ್' ಸಂಸ್ಥೆ ಹಾಗೂ 'ಲಿಫ್ಟ್ ಎಕ್ಸ್ಪೋಗೆ' ಡಾ. ಬಿ.ಎಂ. ಉಮೇಶ್ ಕುಮಾರ್ ಭೇಟಿಮಕ್ಕಳನ್ನು ಮೊಬೈಲ್ನಿಂದ ದೂರವಿಟ್ಟು ಕ್ರೀಡೆಗಳಲ್ಲಿ ತೊಡಗಿಸಿ: ಬಸವರಾಜ್ ಶೀಲವಂತರ್ ಕರೆನಕಲಿ ಮತದಾರರಿಗೆ ರಕ್ಷಣೆ ನೀಡುವುದೇ ಎಸ್ಐಆರ್ ವಿರೋಧಿಗಳ ಅಜೆಂಡಾ ಅಲ್ಲವೇ?” – ಪ್ರಭಾಕರ್ ರಾಗಿ ಅಂಗಡಿಗೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆಹಳ್ಳಿ-ಹಳ್ಳಿಗೆ ತೆರಳಿ ಕಾಂಗ್ರೆಸ್ ಭದ್ರಕೋಟೆ ನಿರ್ಮಿಸುತ್ತಿರುವ ಡಾ. ಯೋಗೇಶ್ ಬಾಬುವಾಲ್ಮೀಕಿನಾಯಕ ಸಮಾಜದವರು ಖಡ್ಗದ ಬದಲಾಗಿ ಶಿಕ್ಷಣದ ಅಸ್ತ್ರಹಿಡಿಯಿರಿಚಲನಚಿತ್ರ ನಟ, ನಿರ್ದೇಶಕ ಚಂದ್ರಹಾಸ ಆಳ್ವರಿಗೆ ಸನ್ಮಾನಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ