ಕೊಪ್ಪಳ : ಬಿಜೆಪಿಗರಿಗೆ ದಲಿತರನ್ನು ಕಂಡರೆ ಹಾಗೇ ಆಗೋದು. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಮುಂದೆ ಬಂದರೆ ಅವರಿಗೆ ಸಹಿಸಲು ಆಗೋದಿಲ್ಲ, ಅದು ಅವರಿಗೆ ರೂಢಿಗತವಾಗಿ ಬಂದಿದೆ ಎಂದು ಸಚಿವ ನಾಗೇಂದ್ರ ಹೇಳಿದರು
ತಾಲೂಕಿನ ಮುನಿರಾಬಾದ್ ನ ಕಾಡಾ ಕಚೇರಿ ಆವರಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತ್ನಾಡಿ, ದಲಿತರನ್ನು ತುಳಿಯಬೇಕು. ಅವರು ಮೇಲೆ ಬರಬಾರದು ಎಂಬುದು ಬಿಜೆಪಿಗರ ಉದ್ದೇಶ. ಅವರು ಸದನದಲ್ಲಿ ಹೋರಾಡಲಿ. ನಾನು, ನಮ್ಮ ಸಿಎಂ ದಿಟ್ಟ ಉತ್ತರ ಕೊಡಲು ಸಿದ್ಧ ಎಂದರು.
ಈಗಾಗಲೇ ನನ್ನ ವಿಷಯದಲ್ಲಿ ಸಿಎಂ ಹಲವು ಬಾರಿ ಉತ್ತರ ಕೊಟ್ಟಿದ್ದಾರೆ. ಹೋರಾಟ ಮಾಡುವುದು ವಿರೋಧ ಪಕ್ಷದ ನಾಯಕರ ಕರ್ತವ್ಯ, ನಾವೂ ಅದಕ್ಕೆ ರೆಡಿ ಇದ್ದೇವೆ. ಆರೋಪ ಮಾಡುವುದು, ಇಕ್ಕಟ್ಟಿಗೆ ಸಿಲುಕಿಸುವುದು ಹಿಂದಿನಿಂದಲೂ ನಡೆದಿದೆ ಎಂದರು.
ನಮ್ಮ ಸಿಎಂ, ಸಂಪುಟ ನಾಯಕರೆಲ್ಲರೂ ತಕ್ಕ ಉತ್ತರ ಕೊಡುತ್ತಾರೆ. ಬಳ್ಳಾರಿಯಲ್ಲಿ ನಮ್ಮ ಸಿದ್ಧಾಂತ ಇಟ್ಟುಕೊಂಡು ಹೋರಾಟ ಮಾಡ್ತಾ ಇದೀವಿ, ಅಲ್ಪಸಂಖ್ಯಾತ, ದಲಿತ, ಹಿಂದುಳಿದವರನ್ನು ಒಗ್ಗೂಡಿಸಿಕೊಂಡು ಹೋಗುತ್ತೇವೆ. ದೇಶದಾದ್ಯಂತ ಇದೇ ರೀತಿಯಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎಂದರು
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದುರುಪಯೋಗ ಆದ ಹಣ ಮರಳಿ ಪಡೆದಿದ್ದೇವೆ, ಈ ಪ್ರಕರಣ ನ್ಯಾಯಾಲಯದಲ್ಲಿ ಇದೆ. ನಾನೂ ಇದರ ವಿರುದ್ದ ಹೋರಾಟ ಮಾಡುತ್ತಿರುವೆ. ಎಲ್ಲಿ ಹೋದ್ರು ನಾನು ಅನುಮತಿ ಪಡೆದೇ ಹೋಗುತ್ತೇನೆ ಅದು ದೆಹಲಿ, ಮತ್ತೊಂದು ಕಡೆ ಹೋಗುತ್ತೇನೆ. ನಾನು ಆರೋಪಿ ಅಷ್ಟೇ. ಅಪರಾಧಿ ಅಲ್ಲ ಎಂದರು.
ನ್ಯಾಯಾಲಯ ದೇವರ ಮೇಲೆ ನನಗೆ ನಂಬಿಕೆ ಇದೆ.ಬಸಚಿವರ ಬದಲಾವಣೆ ಮಾಡುವ ವಿಷಯ ನನಗೆ ಗೊತ್ತಿಲ್ಲ. ಈಗಾಗಲೇ ನಾನು ಪೆಟ್ಟು ತಿಂದ ಹುಲಿ, ಮುಂದೆ ನೋಡಿ ನನ್ನ ಕೆಲಸ ಹೇಗಿರುತ್ತೆ ಎಂದು,
ಹೀಗಾಗಿ ಯಾವುದೇ ಖಾತೆ ಕೊಟ್ಟರೂ ಸರಿಯಾಗಿ ನಿಭಾಯಿಸುವೆ. ಸಿಎಂ, ಮಾಜಿ ಸಿಎಂ, ಹೈಕಮಾಂಡ್ ಸೂಚಿಸುವ ಖಾತೆ ಪಡೆಯುವೆ ಎಂದರು.