ದಾವಣಗೆರೆ : ಎಲ್ಲ ದಾನಗಳಿಗಿಂತ ಸಮಾಜದಲ್ಲಿ ರಕ್ತದಾನ ಮಹಾ ಶ್ರೇಷ್ಠದಾನವಾಗಿದೆ. ಅಮೂಲ್ಯ ಜೀವ ಉಳಿಸಲು ಆರೋಗ್ಯವಂತ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆಯಿಂದ ಬಳಲುವ ಅಮೂಲ್ಯ ಜೀವ ಉಳಿಸಲು ಮುಂದಾಗಬೇಕು’ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಇನ್ಶೂರೆನ್ಸ್ ಆಫೀಸರ್ (ಆರೋಗ್ಯ/ವಿಮಾ ಅಧಿಕಾರಿ) ಡಿ. ನಾಗರಾಜಪ್ಪ ಹೇಳಿದರು.
ಪಿಬಿ ರಸ್ತೆಯಲ್ಲಿ ಇರುವ ದಾವಣಗೆರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ವಿಜಿಲೆನ್ಸ್ ಅವೇರ್ನೆಸ್ ವೀಕ್ ಅಂಗವಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಿಬ್ಬಂದಿಗಳು ರಕ್ತದಾನ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.
ವಿಜಿಲೆನ್ಸ್ ಎಂದರೆ ಕೇವಲ ಭ್ರಷ್ಟಾಚಾರ ತಡೆಗಟ್ಟುವುದಷ್ಟೇ ಅಲ್ಲ, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಪಾಲಿಸುವುದೂ ಆಗಿದೆ. ರಕ್ತದಾನವು ಮಹಾದಾನವಾಗಿದ್ದು, ನಾವು ನೀಡುವ ರಕ್ತವು ಮತ್ತೊಬ್ಬರ ಜೀವ ಉಳಿಸಲು ಸಹಾಯ ಮಾಡುತ್ತದೆ. ಈ ಮೂಲಕ ಸಮಾಜದಲ್ಲಿ ಮಾನವೀಯತೆ ಮತ್ತು ಸೇವಾ ಮನೋಭಾವವನ್ನು ಬೆಳೆಸುವುದು ನಮ್ಮ ಉದ್ದೇಶವಾಗಿದೆ ಎಂದರು.
ರಕ್ತದಾನವು ಮಹಾದಾನ. ತುರ್ತು ಸಂದರ್ಭದಲ್ಲಿ ಒಬ್ಬರ ಪ್ರಾಣ ಉಳಿಸಲು ರಕ್ತದಾನ ಅತ್ಯಂತ ಅಗತ್ಯ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ವರ್ಷಕ್ಕೆ ಕನಿಷ್ಠ ಎರಡು ಬಾರಿ ರಕ್ತದಾನ ಮಾಡಬಹುದು ಎಂದು ಹೇಳಿದರು.
ಪಿಬಿ ರಸ್ತೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಶಾಖಾ ಮುಖ್ಯಸ್ಥರಾದ ಅನಿಲ್ ಕಯಮಾರ್ ಕೆ. ,ಮಂಡಿಪೇಟೆ ಶಾಖಾ ಮುಖ್ಯಸ್ಥರಾದ ಶ್ವೇತಾ ಟಿ. ಪಿ. ,ಕೊಂಡಜ್ಜಿ ರಸ್ತೆಯ ಮುಖ್ಯಸ್ಥರಾದ ಮೀರಾ ಗಿರೀಶ್, ಸೇರಿದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಸಿಬ್ಬಂದಿ ಹಾಗೂ ಶಾಖಾ ಮುಖ್ಯಸ್ಥರು ಎಲ್ಲಾ ಸಿಬ್ಬಂದಿವರ್ಗದವರು ಇದ್ದರು.
ರಕ್ತದಾನ ಮಾಡಿದ ದಾನಿಗಳು ಅನಿಲ್ ಕುಮಾರ್ ಕೆ,ಹರೀಶ್ ಕೆ, ಬಾಲ ಮೂರಳಿ,ಮಹೆಶ್ ಸಂದ್ರ,ಡಿ. ನಾಗರಾಜಪ್ಪ ಸೇರಿದಂತೆ ಅನೇಕರು ರಕ್ತದಾನ ಮಾಡಿದರು.