LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Koppal

ಶಹಪುರ ಸವುಳು ಹಳ್ಳದ ಕೆರೆ ಅಭಿವೃದ್ಧಿಗೆ ಚಾಲನೆ

ಕೊಪ್ಪಳ: ತಾಲೂಕಿನ ಶಹಪುರ ಗ್ರಾಮದ ಸವುಳು ಹಳ್ಳದ ಕೆರೆಗೆ ಕಾಯಕಲ್ಪ ನೀಡಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮುಂದೆ ಬಂದಿದ್ದು, ಕಳೆದ ಒಂದು ತಿಂಗಳಿAದಲೂ ಕಾಮಗಾರಿ ಪ್ರಗತಿಯಲ್ಲಿದೆ.

 

ಶ್ರೀ ಧರ್ಮಸ್ಥಳದ ಪರಮಪೂಜ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವೀರೇಂದ್ರ ಹೆಗ್ಗಡೆ ಇವರ ಆಶೀರ್ವಾದದ ಆಶಯದಂತೆ ಈ ಭಾಗದ ಜನ, ಜಾನುವಾರುಗಳಿಗೆ ನೆರವಾಗುವ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆ "ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ" ಅಭಿಯಾನದಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

 news_1786641373_4_899.webp

 

ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಶಹಪುರ ಗ್ರಾಮದ ಗೋಮಾಳ ಜಾಗದಲ್ಲಿ ಸಾವಿರಾರು ಕುರಿ, ಆಡು ಮತ್ತು ದನಗಳಿವೆ. ಶತಮಾನಗಳಿಂದಲೂ ಈ ಗ್ರಾಮದ ಕುರಿ ಮತ್ತು ದನಗಾಹಿಗಳಿಗೆ ನೆರವಾಗುವ ಮತ್ತು ಅಂತರ್ಜಲ ವೃದ್ಧಿಯಾಗುವ ನಿಟ್ಟಿನಲ್ಲಿ ಕೆರೆ ಅಭಿವೃದ್ಧಿಪಡಿಸುವುದು ತುಂಬಾ ಅಗತ್ಯವೆಂದು ಪರಿಗಣಿಸಿ ಶಹಪುರ ಗ್ರಾಮದ ಪ್ರಜ್ಞಾವಂತ ಯುವ ಧುರೀಣರಾದ ಮಂಜುನಾಥ ರಾಟಿ, ನಿಂಗಜ್ಜ ಚೌಧರಿ, ಗಿರೀಶ್ ಹಿರೇಮಠ, ರಾಘವೇಂದ್ರ ಕಿನ್ನಾಳ ಇನ್ನಿತರರು `ಸವುಳು ಹಳ್ಳದ ಕೆರೆ ಅಭಿವೃದ್ಧಿ' ಸಮಿತಿಯನ್ನು ರಚಿಸಿಕೊಂಡಿದ್ದು ಇವರೆಲ್ಲರ ಸಹಭಾಗಿತ್ವದಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ.

 

ಇದೇ ೨೦೨೬ರ ಜುಲೈ ೧೩ ರಂದು ಶಹಪುರ ಗ್ರಾಮದ ಸವುಳು ಹಳ್ಳದ ಕೆರೆ ಒಡಲಿನಲ್ಲಿ ಭೂಮಿ ಪೂಜೆ ನೆರವೇರಿಸಿದ್ದು ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ ರಾಜಶೇಖರ ಹಿಟ್ನಾಳ ಅವರು ಕೆರೆ ಕಾಮಗಾರಿ ಪೂಜೆಗೆ ಚಾಲನೆ ನೀಡಿ ಶುಭ ಹಾರೈಸಿದ್ದಾರೆ. ಶಹಪುರ ಗ್ರಾಮಸ್ಥರ ಸಹಭಾಗಿತ್ವದೊಂದಿಗೆ ಕೆರೆ ಕಾಮಗಾರಿ ಇದೀಗ ಪ್ರಗತಿಪಥದಲ್ಲಿ ಮುಂದುವರಿದಿದೆ.

 news_1786641373_3_637.webp

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ವಿಠ್ಠಲ್ ಪೂಜಾರಿ ಮತ್ತು ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳಾದ ರಾಜೇಶ್, ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾ, ಸಮಿತಿಯ ಪದಾಧಿಕಾರಿಗಳಾದ ಕಂಪ್ಲಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಹಾಲಪ್ಪ ತೋಟದ, ನಾಗರಾಜ ದೊಡ್ಡಮನಿ, ಹನುಮಂತ ಗೊಲ್ಲರ, ಗ್ರಾಮದ ಹಿರಿಯರಾದ ನಿಂಗಯ್ಯ ಹಿರೇಮಠ, ಧುರೀಣರಾದ ಕರಿಯಪ್ಪ ಕುರಿ, ಸುರೇಶ್ ಪಾಟೀಲ್, ಬಸವರಾಜ ಹೊನ್ನುಂಚಿ, ನಿಂಗಪ್ಪ ನಾಗಲಾಪುರ, ಹುಲ್ಲೇಶ್ ಸಿಂದೋಗಿ, ವೀರಣ್ಣ ಕೋಮಲಾಪುರ, ಮಲ್ಲಿಕಾರ್ಜುನ ಎನ್.ಕುರಿ, ರಾಮಾಲೆಪ್ಪ ಕುರಿ, ಸೇರಿದಂತೆ ಕೆರೆಯ ಸಮಿತಿ ಸದಸ್ಯರು, ಮುಖಂಡರು ಮಾಜಿ ಗ್ರಾಮ ಪಂಚಾಯತಿ ಸದಸ್ಯರುಗಳು, ಒಕ್ಕೂಟದ ಪದಾಧಿಕಾರಿಗಳು, ಸಹಾಯ ಸಂಘದ ಸದಸ್ಯರು, ವಲಯದ ಮೇಲ್ವಿಚಾರಕರು, ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳು ಹಾಗೂ ಶಹಪುರ ಗ್ರಾಮದ ಸಮಸ್ತ ದೈವದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆದಿದೆ.

 

ಕಾಮಗಾರಿ ಕಳೆದ ೩೨ ದಿನಗಳಿಂದ ಪ್ರಗತಿಯಲ್ಲಿದ್ದು ಇದಕ್ಕಾಗಿ ಸುಮಾರು ರೂ. ೧೩.೪೦ ಲಕ್ಷ ವ್ಯಯಿಸಲಾಗುತ್ತಿದೆ. ಸವುಳು ಹಳ್ಳದ ಕೆರೆಯ ೧೦ ಎಕರೆಗೂ ಹೆಚ್ಚಿನ ವಿಸ್ತೀರ್ಣದಲ್ಲಿ ಕಾಮಗಾರಿ ನಡೆ ಪ್ರಗತಿಯಲ್ಲಿದೆ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
“ಅಮೋಘ” ಚಲನಚಿತ್ರದ ಹಾಡು ಬಿಡುಗಡೆಬಳ್ಳಾರಿ ಜಿಲ್ಲೆಯ ಎಸ್ಐಆರ್ ಕರಡು ಮತದಾರರ ಪಟ್ಟಿ ಪ್ರಕಟನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳ ದರ್ಶನ ಪಡೆದ ಮಾಜಿ ಶಾಸಕ ಸುರೇಶ್ ಬಾಬುಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ, ಅದೊಂದು ವಿಚಾರಧಾರೆ: ಪ್ರೊ. ಎನ್.ಎಂ. ಸಾಲಿಸಾಂಸಾರಿಕ ಜೀವನ ಪ್ರವೇಶಿಸಿದ ಸ್ಪೈಡರ್ ಮ್ಯಾನ್ನಾಗೇಂದ್ರಗೆ ಮತ್ತೊಂದು ಮಹತ್ವದ ಹೊಣೆ: ಕಲ್ಯಾಣ ಕರ್ನಾಟಕ ಸಚಿವಾಲಯದ ಜವಾಬ್ದಾರಿಸಂಸ್ಕೃತ ವಿಶ್ವವ್ಯಾಪಿ ಜ್ಞಾನಭಾಷೆ, ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಲಿಕಲ್ಲೂರು- ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ. ಹೊನ್ನಳ್ಳಿ ತಾಂಡಾದಲ್ಲಿ ಶ್ರೀಗುರು ಅಜ್ಜಯ್ಯನ ದ್ವಿತೀಯ ದಶಮಾನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ