LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Bagalkot | Entertainment News

ಬಾದಾಮಿಯಲ್ಲಿ "ಮಂದಾರ ಹೂವು" ಚಲನಚಿತ್ರ ಚಿತ್ರೀಕರಣ ಆರಂಭ

ಬಾದಾಮಿ: ವಸಂತ ಬಸವ ಪ್ರೊಡಕ್ಷನ್ಸ್ ಮೂಡಬಿ-ಬಸವಕಲ್ಯಾಣ ಬ್ಯಾನರ್ ಅಡಿಯಲ್ಲಿ "ಮಂದಾರ ಹೂವು"  ‘ಇವಳು ನಮ್ಮ ಮನೆ ಮಗಳು’ ಉಪ ಶೀರ್ಷಿಕೆಯ ಕನ್ನಡ ಚಲನಚಿತ್ರದ ಚಿತ್ರೀಕರಣದ ಮುಹೂರ್ತ ಸಮಾರಂಭ ಚಾಲುಕ್ಯರ ನಾಡು ಐತಿಹಾಸಿಕ ಸ್ಥಳ ಬಾದಾಮಿಯಲ್ಲಿ ನೆರವೇರಿತು.

    ಬಾದಾಮಿಯ ಹೃದಯಭಾಗದಲ್ಲಿರುವ ಚೌಡಿಯ ದೊಡ್ಡ ಆಂಜನೇಯ ದೇವಸ್ಥಾನದಲ್ಲಿ   ದೇವಸ್ಥಾನದ ಪೂಜಾರ ಮನೆತನದವರಿಂದ ಆಂಜನೇಯನಿಗೆ ವಿಶೇಷ ಪೂಜೆ ನೆರವೇರಿಸಿ ನಂತರ ಕ್ಯಾಮರಾ ಚಾಲನೆ ಮಾಡಿ ದೇವಸ್ಥಾನದಲ್ಲಿಯೇ ಮೊದಲ ದೃಶ್ಯವನ್ನು ಚಿತ್ರೀಕರಿಸಲಾಯಿತು.

    ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಸಾರತ್ಯದ ಅವರ  ಶಿಷ್ಯರಾದ ಶಾಂತಕುಮಾರ್ ಪಾಟೀಲ್ ಕಥೆ-ಚಿತ್ರಕಥೆ -ನಿರ್ದೇಶನದಲ್ಲಿ ‘ಮಂದಾರ ಹೂವು’ ಚಿತ್ರ ನಿರ್ಮಾಣವಾಗುತ್ತಿದ್ದು, ಚಿತ್ರದಲ್ಲಿ ಮೂರು ಹಾಡುಗಳಿದ್ದು ಶಾಂತಕುಮಾರ ಅವರೆ ರಚಿಸಿದ್ದಾರೆ. ಬಾದಾಮಿ, ಮುತ್ತಲಗೇರಿ, ಬನಶಂಕರಿ ಸುತ್ತಮುತ್ತ ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಶಾಂತಕುಮಾರ ತಿಳಿಸಿದ್ದಾರೆ.

     ಗಿರೀಶ್ ಶಿರಗನಹಳ್ಳಿ ಛಾಯಾಗ್ರಹಣ , ಕಲಾ ನಿರ್ದೇಶಕರಾದ ಪತ್ರಕರ್ತ ರಾಜೇಶ್. ಎಸ್. ದೇಸಾಯಿ, ಹರ್ಷ ಕಾಗೋಡು ಸಂಗೀತ,  ಸುನೈ ಎಸ್ ಜೈನ್ ಸಂಕಲನ , ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ ,ಡಾ.ವೀರೇಶ ಹಂಡಿಗಿ, ಸಹಾಯಕ ನಿರ್ದೇಶನ   ಸುನಿಲ್. ಎಸ್. ಭಜಂತ್ರಿ, ತುಳಸಪ್ಪ ಪಾಟ್ರೋಟಿ ರವಿ. ಎಚ್. ದೇಸಾಯಿ, ಸುಜಲ್ ರಾಠೋಡ ನವೀನ್ ರೋಡ್ಕರ್, ಮುಖ್ಯ ಮೇಲ್ವಿಚಾರಕಣೆ ಹಾಗೂ ಸಂಚಾಲಕರು ಪ್ರಭುರಾಜ್ ಹೂಲಗೇರಿ ಮಾಡುತ್ತಿದ್ದಾರೆ.

     ತಾರಾಗಣದಲ್ಲಿ ಅಕ್ಷಯ್ ಪತ್ತಾರ, ನಾಯಕಿ ಸ್ವಾತಿ ತೋಟರ, ಖಳನಟ  ಆನಂದ್ ದೇವಾಡಿಗ, ರವಿ, ಎಚ್. ದೇಸಾಯಿ, ವಸಂತ ಬಡಿಗೇರ ನವೀನ್ ರೋಡ್ಕರ್,  ವಸಂತ ಬಡಿಗೇರ, ಮಂಜು ಬೆಳ್ಳಿಗುಂಡಿ, ಸಂಜನಾ (ತೇಜಸ್ವಿನಿ),ಕಾವೇರಿ, ಚಂದ್ರಿಕಾ, ಪ್ರೇಮಾ ತುಡಬಿನ್, ಸ್ವಾತಿ ರಾಠೋಡ, ಶೈಲಾ ರಾಠೋಡ, ಮಂಜು ಎಚ್ ದೇಸಾಯಿ, ತುಳಸಪ್ಪ ಪಾತ್ರೋಟಿ, ಪ್ರಕಾಶ್ ಗದ್ದಿಗೌಡ್ರ ಸೇರಿದಂತೆ ಉತ್ತರ ಕರ್ನಾಟಕದ  ಅನೇಕ ಕಲಾವಿದರು ಅಭಿನಯಿಸಲಿದ್ದಾರೆ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
“ಅಮೋಘ” ಚಲನಚಿತ್ರದ ಹಾಡು ಬಿಡುಗಡೆಬಳ್ಳಾರಿ ಜಿಲ್ಲೆಯ ಎಸ್ಐಆರ್ ಕರಡು ಮತದಾರರ ಪಟ್ಟಿ ಪ್ರಕಟನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳ ದರ್ಶನ ಪಡೆದ ಮಾಜಿ ಶಾಸಕ ಸುರೇಶ್ ಬಾಬುಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ, ಅದೊಂದು ವಿಚಾರಧಾರೆ: ಪ್ರೊ. ಎನ್.ಎಂ. ಸಾಲಿಸಾಂಸಾರಿಕ ಜೀವನ ಪ್ರವೇಶಿಸಿದ ಸ್ಪೈಡರ್ ಮ್ಯಾನ್ನಾಗೇಂದ್ರಗೆ ಮತ್ತೊಂದು ಮಹತ್ವದ ಹೊಣೆ: ಕಲ್ಯಾಣ ಕರ್ನಾಟಕ ಸಚಿವಾಲಯದ ಜವಾಬ್ದಾರಿಸಂಸ್ಕೃತ ವಿಶ್ವವ್ಯಾಪಿ ಜ್ಞಾನಭಾಷೆ, ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಲಿಕಲ್ಲೂರು- ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ. ಹೊನ್ನಳ್ಳಿ ತಾಂಡಾದಲ್ಲಿ ಶ್ರೀಗುರು ಅಜ್ಜಯ್ಯನ ದ್ವಿತೀಯ ದಶಮಾನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ