LIVE TV StateNationalPoliticsInternationalCrimeEntertainmentSportsEducationFINANCE & TAXATION
Articles | Articles Drama

ಪತ್ರಿಕೋದ್ಯಮ, ರಂಗಭೂಮಿ, ಸಾಂಸ್ಕೃತಿಕ ಸಾಧನೆಗೆ – 50

ರಮೇಶ ಸುರ್ವೆಯವರಿಗೆ “ಸುವರ್ಣ ಮಹೋತ್ಸವ” ಅಭಿನಂದನಾ ಸಮಾರಂಭ

ಬಹುಮುಖಿ ವ್ಯಕ್ತಿತ್ವದ ರಮೇಶ ಸುರ್ವೆ ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯ ಪ್ರತಿಭಾವಂತ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ವಿವಿಧ ಕ್ಷೇತ್ರಗಳಲ್ಲಿ ಅಕೆಡೆಮಿಕ್ ಸಾಧನೆ ಮಾಡಿದವರು. ಹತ್ತಾರು ಕ್ಷೇತ್ರಗಳಲ್ಲಿ 50 ವರ್ಷದ ಸಾಧಕರು. ಚಿತ್ರನಟರಾಗಲು ಬೆಂಗಳೂರಿಗೆ ಬಂದು, ಆದರ್ಶ ಫಿಲಂ ಇನ್ಸಟಿಟ್ಯೂಟ್‌ನಲ್ಲಿ ತರಭೇತಿಗೆ ಸೇರಿದಾಗ, ರಾಷ್ಟç ಪ್ರಶಸ್ತಿ ಪುರಸ್ಕೃತರಾದ ಬಿ.ವಿ. ಕಾರಂತ ಹಾಗೂ ಗಿರೀಶ್ ಕಾಸರವಳ್ಳಿ ಗರಡಿಯಲ್ಲಿ ಆಶ್ರಯ ಪಡೆದವರು. ಇಲ್ಲಿ ಲಂಕೇಶ್, ಗಿರೀಶ್ ಕಾರ್ನಾಡ್ ಶಿಷ್ಯರಾಗಿ ಗುರುತಿಸಿಕೊಂಡವರು.

 news_1786640263_1_271.webp

 

ಸಿಂಧನೂರು, ಯಲಬುರ್ಗಾ, ಮಸ್ಕಿಗಳಲ್ಲಿ ಓದುವಾಗಲೇ ಸಾಂಸ್ಕೃತಿಕ ತುಡಿತ, ನಾಟಕ, ಸಿನೆಮಾ, ಖಯಾಲಿ ಅಂಟಿಸಿಕೊಂಡು ಮನೆಯಿಂದ ಓಡಿ ಹೋಗಿ, ಅಂದಿನ ಕುಕನೂರಿನ ರಹಮಾನವ್ವ ಕಂಪನಿ, ಗದಗಿನ ಶ್ರೀ ಮಹಾಂತೇಶ ಶಾಸ್ತ್ರಿ ನಾಟಕ ಕಂಪನಿ, ಹಾಲಾಪೂರ ರಾಮರಾವ್ ದೇಸಾಯಿ ನಾಟಕ ಕಂಪನಿ, ಬೀದರಿನ ಬನಶಂಕರಿ ನಾಟಕ ಸಂಘದಲ್ಲಿ, ನಟರಾಗಿ, ರಂಗಕರ್ಮಿಯಾಗಿ ದುಡಿದವರು. ಸಿನಿಮಾ ಸೆಳೆತಕ್ಕೊಳಗಾಗಿ ಬೆಂಗಳೂರು ಸೇರಿದ ರಮೇಶ ಸುರ್ವೆ ಪ್ರಾರಂಭದಲ್ಲಿ, ಸಾದ್ಯವಾಗದೆ ಬದುಕು ಕಟ್ಟಿಕೊಳ್ಳಲು ಹೆಣಗಿದರು. ಚಿತ್ರರಂಗ ಕೈಗೆಟುಕದ ಗಗನ ಕುಸುಮವಾದಾಗ, ಪತ್ರಕರ್ತರಾಗಿ, ಸಾಂಸ್ಕೃತಿಕ ಸಂಘಟಕರಾಗಿ, ಸಾಮಾಜಿಕ ಹೋರಾಟಗಾರರಾಗಿ, ಕನ್ನಡ ಪರ ಹೋರಾಟ, ಸಾಹಿತ್ಯ ಕೃತಿ ರಚನೆಯಲ್ಲಿ ತಮ್ಮ ವಿಚಾರ ಧಾರೆ ಹರಿಬಿಟ್ಟರು.

 news_1786640265_3_392.webp

 

ಸುರ್ವೆ ಪತ್ರಿಕೆ, ಇಂಜಿನಿರ‍್ಸ್ ಡೈರಿ, ಸುರ್ವೆ ನ್ಯೂಸ್ ಸರ‍್ಸ ಸುದ್ಧಿ ಸಂಸ್ಥೆ, ಸುರ್ವೆ ನ್ಯೂಸ್ ಯು ಟ್ಯೂಬ್‌ಗಗಳಿಗೆ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿದರು. ವಿಶ್ವೇಶ್ವರಯ್ಯ ಪ್ರತಿಷ್ಠಾನ, ಸುರ್ವೆ ಕಲ್ಚರಲ್ ಅಕಾಡೆಮಿ ಮೂಲಕ, ಸುರ್ವೆಯವರು ಕರ್ನಾಟಕದ 1.50 ಲಕ್ಷ ಪ್ರತಿಭೆಗಳಿಗೆ ರಾಜಧಾನಿಯಲ್ಲಿ ವೇದಿಕೆ ಹಾಗೂ ವಿಶ್ವೇಶ್ವರಯ್ಯ ಪ್ರಶಸ್ತಿ ನೀಡಿ ಬೆನ್ನು ತಟ್ಟಿದವರು. ಇದುವರೆಗೆ 500ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳಿಗೆ ವಿಶ್ವೇಶ್ವರಯ್ಯ ಪ್ರಶಸ್ತಿ 10 ಲಕ್ಷ ನಗದು ಬಹುಮಾನ ನೀಡಿದ ಹೆಗ್ಗಳಿಕೆ ಇವರದು. 12 ಮಕ್ಕಳ ಸಾಹಿತ್ಯ ಸಮ್ಮೇಳನ, 12 ಕವಿ ಸಮ್ಮೇಳನ, 12 ರಾಷ್ಟಿçಯ ನಾಟ್ಯ ಮೇಳ, 73 ಕ್ಕೂ ಹೆಚ್ಚು ಕಲಾ ಪ್ರತಿಭೋತ್ಸವ, 150 ಕ್ಕೂ ಹೆಚ್ಚು ವಿಚಾರ ಸಂಕಿರಣ ಮತ್ತು ಪ್ರಶಸ್ತಿ ಪ್ರದಾನದ ರೂವಾರಿಗಳು. 250 ನಾಟಕ, ತಲಾ 4 ನಾಟಕಗಳ 18 ನಾಟಕೋತ್ಸವಗಳು, ರಾಷ್ಟçಮಟ್ಟದ ರಂಗಭೂಮಿ ಕಲಾವಿದರ ಸಮಾವೇಶದ ಸಂಘಟಿತರು.

 

ರಾಷ್ಟç ಮಟ್ಟದ ವಿಚಾರ ಸಂಕಿರಣ ಮತ್ತು ಉಪನ್ಯಾಸ, ಪ್ರವಾಸ ಕ್ಯಾಂಪೆನ್, ಚುನಾವಣಾ ಕ್ಯಾಂಪೆನ್ ಮಾಡಿದವರು. ತಾಜ್‌ಮಹಲ್ ಮುಂದೆ ಕವಿಗೋಷ್ಠಿ ನಡೆಯಿಸಿದ ಸಾಹಸಿ. ಇದುವರೆಗೆ ವೇದಿಕೆಯಲ್ಲಿ ನಡೆದ ಕವಿಗೋಷ್ಠಿಗಳ ಕವಿಗಳ ಕವನಗಳನ್ನು ಸಂಗ್ರಹಿಸಿ “ಕವಿಗಳ ಕಣ್ಣಲ್ಲಿ ವಿಶ್ವೇಶ್ವರಯ್ಯ” ಹಾಗೂ “ಬಹುಜನರ ಕವಿತೆಗಳು” ಸಂಕಲನ ಹೊರತಂದಿದ್ದಾರೆ. ಇವರ ಸರ್ವಾಧ್ಯಕ್ಷತೆಯಲ್ಲಿ ಬಹುಭಾಷಾ ಕವಿ ಸಮ್ಮೇಳನ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ, ಕಲ್ಯಾಣ ಕರ್ನಾಟಕ ಪ್ರವಾಸಿ ಉತ್ಸವ ಜರುಗಿವೆ.

 news_1786640265_2_850.webp

 

 

ಸ್ವತಃ 16ಕ್ಕೂ ಕೃತಿ ಬರೆದಿದ್ದಾರೆ. ಅವರದೇ ಸಾಹಿತ್ಯದ ಮೋಹದ ಬಲೆಯಲ್ಲಿ, ಬಯಕೆಯ ಭಾವದುಂಬಿ, ಶ್ರೀ ಕನ್ನಿಕಾ ಪರಮೇಶ್ವರಿ ಅಲ್ಬಮ್ ಗುಚ್ಚದಲ್ಲಿ 30 ಹಾಡುಗಳನ್ನು ರೂಪಿದ್ದಾರೆ. 27 ವರ್ಷಗಳ ಕನಸಿನ ಸಿನಿಮಾ ಮಂದಾಕಿನಿ ಚಿತ್ರ ನನಸಾಗಿ, 2008ರಲ್ಲಿ ರಾಜ್ಯ ಚಲನಚಿತ್ರ ಹಿನ್ನಲೆ ಗಾಯನಕ್ಕೆ ಪ್ರಶಸ್ತಿ ಬರುವಂತೆ ಸಾಹಿತ್ಯ ರಚಿಸಿದವರು. ಮಂದಾಕಿನಿ ಇವರ ನಿರ್ದೇಶನದ ಪ್ರಥಮ ಚಿತ್ರ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದಾರೆ. ಪ್ರಸ್ತುತ ವಿಕ್ರಮ್ ಐ.ಎ.ಎಸ್. ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ, ಗೀತೆಗಳು ಮತ್ತು ನಿರ್ಮಾಣದಲ್ಲಿ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಚಿತ್ರ ಕೊಪ್ಪಳ ಜಿಲ್ಲೆಯಲ್ಲಿ ಚಿತ್ರೀಕರಣ ನಡೆಯುತ್ತಿರುವುದು ವಿಶೇಷ.

 

ಪತ್ರಿಕೆ, ಸಂಘಟನೆ ಮೂಲಕ ಸಮಾಜದ ವಿವಿಧ ವರ್ಗಗಳಿಗೆ ಗುರುತಿಸಿದ ಕೀರ್ತಿ ಇವರದು. ಇದುವರೆಗೆ 52 ರಾಜ್ಯಮಟ್ಟದ ಪ್ರಶಸ್ತಿಗಳು, 8 ರಾಷ್ಟçಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. 120ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಸನ್ಮಾನಿಸಿವೆ.

 news_1786640265_4_443.webp

 

ಪ್ರಸ್ತುತ ಅವರನ್ನು ವಿಶ್ವಬಂಧು ಬಸವಣ್ಣ ಶಿಕ್ಷಣ ಮತ್ತು ಸಾಂಸ್ಕೃತಿಕ ಚಾರಿಟೇಬಲ್ ಟ್ರಸ್ಟ್ (ರಿ) ಕೊಪ್ಪಳ. ಇವರು ರಮೇಶ ಸುರ್ವೆಯವರ ಪತ್ರಿಕೋದ್ಯಮ, ಸಾಂಸ್ಕ್ಕೃತಿಕ ಹಾಗೂ ರಂಗಭೂಮಿ ಕ್ಷೇತ್ರದ ಸಾಧನೆಯ ಸುವರ್ಣ ಮಹೋತ್ಸವ-1975-2026 ವಿಚಾರ ಸಂಕಿರಣ ಮತ್ತು ಅಭಿನಂದನಾ ಸಮಾರಂಭ ಹಾಗೂ ವಿಶ್ವಬಂಧು ಬಸವಣ್ಣ ಟ್ರಸ್ಟ್ ಉದ್ಘಾಟನೆಯನ್ನು ದಿನಾಂಕ 16-08-2026, ಬೆಳಿಗ್ಗೆ 10 ರಿಂದ 2.30 ರವರೆಗೆ, ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದಾರೆ.

 

ಕಾರ್ಯಕ್ರದಲ್ಲಿ ಶ್ರೀ ಮ.ನಿ.ಪ್ರ. ಶಿವಶಾಂತವೀರ ಮಹಾಸ್ವಾಮಿಗಳು ಶ್ರೀ ಗವಿಸಿದ್ಧೇಶ್ವರ ಶಾಖಾಮಠ, ಬಿಸರಳ್ಳಿ ದಿವ್ಯಸಾನಿಧ್ಯ ವಹಿಸಲಿದ್ದಾರೆ. ಮಾಜಿ ತೋಟಗಾರಿಕೆ ಸಚಿವರಾದ ಶ್ರೀ ಶಶಿಕಾಂತ ಅಕ್ಕಪ್ಪನಾಯಕ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಡಾ. ಮಹಾಂತೇಶ ಮಲ್ಲನಗೌಡರ್ ಕೊಪ್ಪಳ ವಹಿಸಲಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಡಾ. ಮಲ್ಲಿಕಾ ಎಸ್. ಘಂಟಿ ಇವರು ರಮೇಶ ಸುರ್ವೆಯವರನ್ನು ಅಭಿನಂದಿಸಲಿದ್ದಾರೆ.

 

ಅಭಿನಂದನಾ ಭಾಷಣವನ್ನು ಡಾ. ವಿಠಲರಾವ್ ಟಿ. ಗಾಯಕ್ವಾಡ್ ನಿವೃತ್ತ ಪ್ರಾಧ್ಯಾಪಕರು, ಸಂಸ್ಕೃತಿ ಚಿಂತಕರು ಕನ್ನಡ ವಿಶ್ವವಿದ್ಯಾಲಯ ಹಂಪಿ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಮಹಾಂತೇಶ ಪಾಟೀಲ್ ಮೈನಳ್ಳಿ ಮಾಜಿ ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ ಕೊಪ್ಪಳ, ಡಾ. ಕೆ.ಎಂ. ಸೈಯ್ಯದ್ ಸಂಸ್ಥಾಪಕರು ಸೈಯ್ಯದ್ ಫೌಂಡೇಶನ್ ಕೊಪ್ಪಳ, ಶ್ರೀ ವೆಂಕಟೇಶ ಬಾರಕೇರ ಸಮಾಜ ಸೇವಕರು ಗಿಣಿಗೇರಾ, ಡಾ. ದೇವೇಂದ್ರಪ್ಪ ಬಳೂಟಗಿ ಕೃಷಿ ವಿಜ್ಞಾನಿಗಳು ಕುಷ್ಟಗಿ, ಶ್ರೀ ಶರಣಪ್ಪ ಬ. ಹ್ಯಾಟಿ ಸಹಕಾರಿ ಧುರಿಣರು ಗಿಣಿಗೇರಾ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದು, ಪರಿಚಯ ಭಾಷಣವನ್ನು ಶ್ರೀ ಮಂಜುನಾಥ ಜಿ. ಗೊಂಡಬಾಳ ಸಂಪಾದಕರು, ಬದಲಾವಣೆ ಪ್ರಾದೇಶಿಕ ದಿನ ಪತ್ರಿಕೆ, ಆಶಯ ಭಾಷಣವನ್ನು ಪ್ರೊ. ಶರಣಬಸಪ್ಪ ಬಿಳಿಎಲಿ ಸಹ-ಪ್ರಾಧ್ಯಾಪಕರು ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜ್ ಕೊಪ್ಪಳ ಇವರು ಮಾಡಲಿದ್ದು, ವಿಚಾರ ಸಂಕಿರಣದಲ್ಲಿ ಪತ್ರಿಕೋದ್ಯಮ ಕ್ಷೇತ್ರ ಕುರಿತು ಶ್ರೀಮತಿ ಸಾವಿತ್ರಿ ಮುಜಮದಾರ ಸದಸ್ಯರು ಕರ್ನಾಟಕ ಚಲನಚಿತ್ರ ಅಕಾಡೆಮಿ, ಸಾಂಸ್ಕೃತಿಕ ಕ್ಷೇತ್ರ ಕುರಿತು ಡಾ. ರಾಜೇಂದ್ರ ಎಸ್. ಗಡಾದ ಹಿರಿಯ ಸಾಹಿತಿಗಳು-ಚಿಂತಕರು ಗದಗ, ರಂಗಭೂಮಿ ಕ್ಷೇತ್ರ ಕುರಿತು ಡಾ. ಜೀವನ್‌ಸಾಬ್ ವಾಲಿಕಾರ ಬಿನ್ನಾಳ ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ ವಿಷಯ ಮಂಡಿಸಲಿದ್ದಾರೆ.

 

ನಿರೂಪಣೆ-ನಿರ್ವಹಣೆಯನ್ನು ಡಾ. ಮಹಾಂತೇಶ ಬ. ನೆಲಾಗಣಿ ಅಧ್ಯಕ್ಷರು ವಿಶ್ವಬಂಧು ಬಸವಣ್ಣ ಟ್ರಸ್ಟ್ (ರಿ) ಇವರು ಮಾಡಲಿದ್ದು, ಸಮಾರಂಭದಲ್ಲಿ ಡಾ. ಶಿವಬಸಪ್ಪ ಚ. ಮಸ್ಕಿ ಪ್ರಧಾನ ಕಾರ್ಯದರ್ಶಿ,  ಗೀತಾ ಎಸ್. ಗೋಗೇರಿ ಉಪಾಧ್ಯಕ್ಷರು,  ಸಂಗೀತಾ ಮಸ್ಕಿ ಖಜಾಂಚಿ  ನವ್ಯ ಎಂ. ನೆಲಾಗಣಿ ಸಂಘಟನಾ ಕಾರ್ಯದರ್ಶಿ, ಬಸವಂತಪ್ಪ ವಿ. ಮತ್ತೂರು ಸದಸ್ಯರು,  ಮಾಲತೇಶ ಎಸ್. ಶಾಂತಗಿರಿ ಸದಸ್ಯರು ಮತ್ತು ರಮೇಶ ಸುರ್ವೆಯವರ ಅಭಿಮಾನ ಬಳಗವು ಉಪಸ್ಥಿತರಿರುತ್ತಾರೆಂದು ಸಂಸ್ಥೆಯ ಅಧ್ಯಕ್ಷ ಡಾ. ಮಹಾಂತೇಶ ಬ. ನೆಲಾಗಣಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗೇಂದ್ರಗೆ ಮತ್ತೊಂದು ಮಹತ್ವದ ಹೊಣೆ: ಕಲ್ಯಾಣ ಕರ್ನಾಟಕ ಸಚಿವಾಲಯದ ಜವಾಬ್ದಾರಿಸಂಸ್ಕೃತ ವಿಶ್ವವ್ಯಾಪಿ ಜ್ಞಾನಭಾಷೆ, ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಲಿಕಲ್ಲೂರು- ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ. ಹೊನ್ನಳ್ಳಿ ತಾಂಡಾದಲ್ಲಿ ಶ್ರೀಗುರು ಅಜ್ಜಯ್ಯನ ದ್ವಿತೀಯ ದಶಮಾನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆಬಳ್ಳಾರಿಯಲ್ಲಿ ದಿವಂಗತ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಪರಿಷತ್ ಸಭೆ ಹಾಗೂ ನಶಾಮುಕ್ತ ಭಾರತ ಅಭಿಯಾನಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ನ್ಯಾಯಯುತ ಅನುದಾನ ನೀಡಿ: ಸಿಎಂ ಡಿ ಕೆ ಶಿವಕುಮಾರ್ ಒತ್ತಾಯಯಾರಿಗೆ ಒಲೆಯುತ್ತೆ ಬಿಜೆಪಿ ಟಿಕೆಟ್ ರಾಜೀವ್ ಗಾಂಧಿ ಹಾದಿಯಲ್ಲಿ ರಾಹುಲ್ ಗಾಂಧಿ