LIVE TV StateNationalPoliticsInternationalCrimeEntertainmentSportsEducationFINANCE & TAXATION
Articles | Articles Agriculture

ಭಾರತ ದೇಶದಲ್ಲಿ ರೈತರ ಮಹತ್ವ

ಅನುಷಾ ಜೋಶಿ

ಭಾರತ ಒಂದು ಹಳ್ಳಿಗಳ ರಾಷ್ಟ್ರ, ಮತ್ತು ಇಲ್ಲಿಯ ಮೂಲ ಉತ್ಪಾದನೆ ಕೃಷಿ ಹಾಗೂ ಪ್ರತಿಯೊಂದು ವಸ್ತುಗಳು ತಯಾರಿಕೆಗೆ ಅವಶ್ಯವಿರುವ ಕಚ್ಚಾ ವಸ್ತುಗಳನ್ನು ಉತ್ಪಾದಿಸುವುದು , ಕೃಷಿಯ ಮೇಲೆ ಅವಲಂಬಿತವಾಗಿದೆ ಆದ್ದರಿಂದ ರೈತರನ್ನು ಭಾರತ ದೇಶದ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ಅವರು ಕೇವಲ ಕೃಷಿಕರಲ್ಲದೆ ದೇಶದ ಆರ್ಥಿಕತೆಯ ಆಧಾರ ಸ್ತಂಭ ಹಾಗಾಗಿ ಕೃಷಿ ಕೇವಲ ವೃತ್ತಿಯಲ್ಲ ಜೀವನ ಮಾರ್ಗ ರೈತರ ಬೆವರು ಹರಿದರೆ ದೇಶದ ಬದುಕು ಹಸಿರಾಗಿರುತ್ತದೆ.

 

 ರೈತರ ಪ್ರಾಮುಖ್ಯತೆ:-

1. ಆಹಾರ ಉತ್ಪಾದನೆ : ದೇಶದ ಒಟ್ಟು ಜನಸಂಖ್ಯೆಯ ಹಸಿವನ್ನು ನೀಗಿಸುವ ಜವಾಬ್ದಾರಿ ರೈತರ ಮೇಲಿದೆ. ಪ್ರತಿನಿತ್ಯ ನಾವು ಸೇವಿಸುವ ಆಹಾರ ಧಾನ್ಯಗಳು, ಹಣ್ಣುಗಳು, ತರಕಾರಿಗಳು ಎಲ್ಲವನ್ನು ರೈತರು ಬೆಳೆಯುತ್ತಾರೆ. ಹಾಗಾಗಿ ದೇಶದ ಮೊಟ್ಟ ಮೊದಲ ಆದ್ಯತೆ ರೈತರಿಗೆ ಸಲ್ಲುವುದು.

2. ಆರ್ಥಿಕ ಬೆಳವಣಿಗೆ : ಕೃಷಿಯಿಂದ ಬರುವ ಆದಾಯವು ಒಟ್ಟು ದೇಶಿಯ ಉತ್ಪಾದನೆಯ ಒಂದು ದೊಡ್ಡ ಭಾಗವಾಗಿರುತ್ತದೆ. ಸಾಂಕೇತಿಕವಾಗಿ ತಿಳಿಸುವುದಾದರೆ 70 ಪ್ರತಿಶತ ಒಟ್ಟು ದೇಶೀಯ ಉತ್ಪಾದನೆಯಲ್ಲಿ ಕೃಷಿಯಿಂದ ಬರುವ ಆದಾಯವು ಇರುತ್ತದೆ. ಅಲ್ಲದೆ ಕೈಗಾರಿಕೆಗಳಿಗೆ ಅಗತ್ಯವಾದ ಕಚ್ಚಾ ವಸ್ತುಗಳನ್ನು ಒದಗಿಸುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ.

3. ಸರಬರಾಜು ಶೃಂಖಲೆ: ರೈತರು ಬೆಳೆದ ಉತ್ಪನ್ನಗಳು ಮಾರುಕಟ್ಟೆ ತಲುಪಲು ಸಾರಿಗೆ ವ್ಯವಸ್ಥೆಯನ್ನು ಹುಟ್ಟುಹಾಕುತ್ತವೆ ಇದರಿಂದ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ ಮತ್ತು ಕೃಷಿ ಉತ್ಪನ್ನಗಳ ಸಾಗಾಣಿಕೆಯಿಂದ ಅವುಗಳ ಮೌಲ್ಯ ಹೆಚ್ಚಾಗುತ್ತದೆ.

4. ಮೌಲ್ಯ ವೃದ್ಧೀಕರಣ: ರೈತರು ಬೆಳೆದ ಬೆಳೆಯನ್ನು ಹಾಗೆ ಮಾರುಕಟ್ಟೆಗೆ ಕೊಡುವುದರ ಬದಲಾಗಿ ಅದರಿಂದ ಪದಾರ್ಥಗಳನ್ನು ತಯಾರಿಸಿ ಕೊಟ್ಟರೆ ಅವುಗಳ ಬೆಲೆ ಹೆಚ್ಚಾಗಿ ಸಿಗುತ್ತದೆ ಹೊಸ ಮಾರುಕಟ್ಟೆಯು ಸೃಷ್ಟಿಯಾಗುತ್ತದೆ.

5. ವಿದೇಶಿ ವಿನಿಮಯ : ಭಾರತವು ಈಗ ಪ್ರಪಂಚದಲ್ಲಿ ಅತ್ಯಂತ ಶ್ರೀಮಂತರ ರಾಷ್ಟ್ರದಲ್ಲಿ ಹೇಗೆ ಒಂದಾಗಿದೆಯೋ ಅದಕ್ಕೆ ಮೂಲ ಕಾರಣ ಕೃಷಿ ಉತ್ಪನ್ನಗಳ ವಿದೇಶಿ ವಿನಿಮಯ ಅಂದರೆ ಕೃಷಿ ಉತ್ಪನ್ನಗಳನ್ನು ಹಾಗೂ ಮೌಲ್ಯವರ್ದಿತ ವಸ್ತುಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುತ್ತಿರುವುದು. ಇದರಿಂದ ದೇಶದ ಆದಾಯವು ಹೆಚ್ಚಾಗುತ್ತದೆ.

6. ವಿಶೇಷ ತಂತ್ರಜ್ಞಾನ: ಕೃಷಿಯಲ್ಲಿ ವಿಶೇಷ ತಂತ್ರಜ್ಞಾನ ದಿಂದ ತಯಾರಾದ ಡ್ರೋನ್ ಸಹಾಯದಿಂದ ಬೆಳೆ ನಾಶವನ್ನು ತಪ್ಪಿಸಬಹುದು. ಹಾಗೆಯೇ ತಂತ್ರಜ್ಞಾನ ಬಳಸಿ ಕೊಯ್ಲು ಮತ್ತು ಕಟಾವು ಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಬಹುದು ಮತ್ತು ಶೀಘ್ರದಲ್ಲಿ ಕೆಲಸ ಶ್ರಮ ಮತ್ತು ಸಮಯ ಉಳಿತಾಯ ಮಾಡಬಹುದು ಅಲ್ಲದೆ ಇದರಿಂದ ಬೇಕಾದ ಮಾಹಿತಿಯನ್ನು ಪಡೆಯಬಹುದು ಅದು ಹಣಕಾಸಿನ ವ್ಯವಸ್ಥೆ ಆಗಿರಬಹುದು ಮೂಲ ಸೌಕರ್ಯಗಳನ್ನು ಒದಗಿಸುವದಾಗಿರಬಹುದು.

7. ಉದ್ಯೋಗ ಸೃಷ್ಟಿ:  ಕೃಷಿಯಿಂದ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಬಹುದು ಏಕೆಂದರೆ ಹೆಚ್ಚಿನ ಉದ್ಯೋಗ ಸೃಷ್ಟಿ ಕೃಷಿ ಉತ್ಪಾದನೆಯ ಮೌಲ್ಯವರ್ದಿತ ಒಂದು ಸಣ್ಣ ಉದ್ಯೋಗ ಶೇರುಗಳ ಮೂಲಕ ತಮ್ಮದೇ ಆದ ಕಂಪನಿಯಿಂದ ಆದಾಯವನ್ನು ಪಡೆಯಬಹುದಾಗಿದೆ. ಹಾಗೂ ಹೆಚ್ಚಿನ ಪ್ರಮಾಣದ ಕೌಶಲ್ಯ ಕೇಂದ್ರಕ್ಕಾಗಿ ಎನ್‌ಜಿಓಗಳು ನಿರ್ಮಾಣಗೊಂಡಿರುತ್ತವೆ.

8. ಬಂಡವಾಳ ಶಾಹಿ ಮತ್ತು ಹೂಡಿಕೆ: ನಮ್ಮ ದೇಶದ ಹೆಮ್ಮೆಯ ಕೃಷಿಯ ಮೌಲ್ಯ ವರ್ದಿತ ಅಮುಲ್ ಕಂಪನಿ ಉತ್ಕೃಷ್ಟ ಮಟ್ಟದಲ್ಲಿ ವಿದೇಶಿ ಬಂಡವಾಳ ಶಾಹಿಯನ್ನು ಆಕರ್ಷಿಸುತ್ತಿದೆ ಮತ್ತು ಬಂಡವಾಳವನ್ನು ಸದುಪಯೋಗ ಪಡೆದುಕೊಳ್ಳುತ್ತಿದೆ ಇದೆಲ್ಲವೂ ನಮ್ಮ ದೇಶದ ಕೃಷಿ ಪದ್ಧತಿಯಿಂದ ಸಾಧ್ಯವಾಗುತ್ತಿದೆ.

 ರೈತರು ಎದುರಿಸುತ್ತಿರುವ ಸವಾಲುಗಳು:-

 ಮೊದಲನೆಯದಾಗಿ ಹಣದ ವ್ಯವಸ್ಥೆ

 ಎರಡನೇದಾಗಿ ಜ್ಞಾನದ ಕೊರತೆ

 ಕಡೆದಾಗಿ ಹವಾಮಾನ ವೈಪರಿತ್ಯ

 ಮೇಲಿನ ಸಮಸ್ಯೆಗಳಿಗೆ ಪರಿಹಾರಗಳು

 ಮೊದಲನೆಯದಾಗಿ ಹಣದ ವ್ಯವಸ್ಥೆಯನ್ನು ಸಾಲ ಸೌಲಭ್ಯವನ್ನು ತುಂಬಾ ಸುಲಭವಾಗಿ ಕೈಗೆಟಿಕುವ ರೀತಿಯಲ್ಲಿ ನಮ್ಮ ಸರ್ಕಾರವು ಒದಗಿಸುತ್ತಿವೆ ಇದನ್ನು ಸರಿಯಾದ ರೀತಿಯಲ್ಲಿ ರೈತರೇ ಬಳಸಿಕೊಳ್ಳಬೇಕು ಇದಲ್ಲದೆ ಒಳ್ಳೆಯ ಬೀಜಗಳನ್ನು ಕೂಡ ಉಚಿತವಾಗಿ ನಮ್ಮ ಸರ್ಕಾರ ನೀಡುತ್ತಿದೆ.

 ಎರಡನೆಯದಾಗಿ ಜ್ಞಾನದ ಕೊರತೆ:- ಜಾಗತಿಕ ಮತ್ತು ತಂತ್ರಜ್ಞಾನದ ಶಿಕ್ಷಣ ಈಗ ಕೆಲವೊಂದು ಆಪ್ ಗಳ ಮೂಲಕ ಮೊಬೈಲ್ ನಲ್ಲಿಯೇ ದೊರಕುತ್ತಿದೆ. ಆದರೆ ಶಿಕ್ಷಣದ ಕೊರತೆಯಿಂದ ಜ್ಞಾನದ ಕೊರತೆಯಿಂದ ಅದರ ಬಗ್ಗೆ ಪಾರವೇ ಇಲ್ಲದಂತಾಗಿದೆ ಇದಕ್ಕಾಗಿ ನಮ್ಮ ಸರ್ಕಾರವು ಇನ್ನೊಂದು ಹೆಜ್ಜೆ ಇಡಬೇಕಾಗಿದೆ ಏನೆಂದರೆ ಪಠ್ಯದಲ್ಲಿ ಕೃಷಿಯ ಬಗ್ಗೆ ಅದರ ಶಿಕ್ಷಣದ ಬಗ್ಗೆ ಪಾಠವೊಂದನ್ನು ದೃಢೀಕರಿಸಬೇಕಾಗಿದೆ.

 ಕೊನೆಯದಾಗಿ ಹವಾಮಾನ ವೈಪರಿತ್ಯವನ್ನು ಮುಂಗಡವಾಗಿ ಕಂಡುಹಿಡಿದು ಬಳೆನಾಶ ತಡೆಯುವ ತಂತ್ರಜ್ಞಾನ ಈಗಾಗಲೇ ಇದೆ ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಇದರಿಂದ ಕೃಷಿಯ ಉತ್ಪನ್ನಗಳಿಗೆ ಯಾವುದೇ ಬೆಲೆಕುಸಿತ ಹವಾಮಾನ ವೈಪರೀತ್ಯದಿಂದ ಉಂಟಾಗುವ ನಾಶ ಆಗುವುದಿಲ್ಲ. ಆದರೂ ಸಹ ನಷ್ಟವನ್ನು ಸರ್ಕಾರ ಭರಿಸುತ್ತದೆ.

ಈಗಿನ ಕಾಲದಲ್ಲಿ ಒಬ್ಬ ರೈತನು ಸಾಮಾನ್ಯ ರೈತನಲ್ಲ ಅವನು ದೇಶಕ್ಕೆ ಒಂದು ದೀಪವಿದ್ದಂತೆ, ಸಮಾಜಕ್ಕೆ ಮತ್ತು ದೇಶಕ್ಕೆ ಅವನು ಬೆಳಕನ್ನು ಚೆಲ್ಲುತ್ತಾನೆ ಮನುಷ್ಯನಿಗೆ ಹೇಗೆ ಬೆನ್ನುಮೂಳೆ ಪ್ರಮುಖವೋ ಹಾಗೆ ರೈತರು ಕೂಡ ದೇಶಕ್ಕೆ ಬೆನ್ನೆಲುಬು ಎಂಬೋ ನಾಣ್ನುಡಿ ಸುಳ್ಳಲ್ಲ. ಇದರೊಂದಿಗೆ ರೈತರು ಎದುರಿಸುತ್ತಿರುವ ಸವಾಲುಗಳನ್ನು ಸರ್ಕಾರದ ಜೊತೆ ಜೊತೆಯಾಗಿ ರೈತರಿಗೆ ಎಫ್ಪಿಓಗಳ ಮೂಲಕ ಮುಂದೆ ಬರಲು ಎಲ್ಲರೂ ಸಹಕರಿಸೋಣ. ಮತ್ತು ದೇಶದ ಪ್ರಗತಿಯಲ್ಲಿ ನಾವು ಕೂಡ ಭಾಗಿಯಾಗೋಣ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
“ಅಮೋಘ” ಚಲನಚಿತ್ರದ ಹಾಡು ಬಿಡುಗಡೆಬಳ್ಳಾರಿ ಜಿಲ್ಲೆಯ ಎಸ್ಐಆರ್ ಕರಡು ಮತದಾರರ ಪಟ್ಟಿ ಪ್ರಕಟನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳ ದರ್ಶನ ಪಡೆದ ಮಾಜಿ ಶಾಸಕ ಸುರೇಶ್ ಬಾಬುಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ, ಅದೊಂದು ವಿಚಾರಧಾರೆ: ಪ್ರೊ. ಎನ್.ಎಂ. ಸಾಲಿಸಾಂಸಾರಿಕ ಜೀವನ ಪ್ರವೇಶಿಸಿದ ಸ್ಪೈಡರ್ ಮ್ಯಾನ್ನಾಗೇಂದ್ರಗೆ ಮತ್ತೊಂದು ಮಹತ್ವದ ಹೊಣೆ: ಕಲ್ಯಾಣ ಕರ್ನಾಟಕ ಸಚಿವಾಲಯದ ಜವಾಬ್ದಾರಿಸಂಸ್ಕೃತ ವಿಶ್ವವ್ಯಾಪಿ ಜ್ಞಾನಭಾಷೆ, ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಲಿಕಲ್ಲೂರು- ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ. ಹೊನ್ನಳ್ಳಿ ತಾಂಡಾದಲ್ಲಿ ಶ್ರೀಗುರು ಅಜ್ಜಯ್ಯನ ದ್ವಿತೀಯ ದಶಮಾನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ