LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Chitradurga

ಯಾರಿಗೆ ಒಲೆಯುತ್ತೆ ಬಿಜೆಪಿ ಟಿಕೆಟ್

ಟಿ ಟಿ.ಹರೀಶ್ ತಿಮ್ಮಪ್ಪಯನಹಳ್ಳಿ

ಮೊಳಕಾಲ್ಮೂರು : ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಭದ್ರಕೋಟೆಯನ್ನು ಕೆಡವಲು ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿ.ಜೆ.ಪಿ.ಯ ಟಿಕೆಟ್ ಆಕಾಂಕ್ಷಿಗಳು ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಸಚಿವ ಟಿ.ರಘುಮೂರ್ತಿ ವಿರುದ್ಧ ಸ್ಪರ್ಧಿಸಿ ಸೋಲುಕಂಡಿದ್ದ ಅನಿಲ್‌ಕುಮಾರ್  ,ಕಂಪ್ಲಿ ಸುರೇಶ್, ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ, ಶಿವಕುಮಾರ್‌ಮಾಲೂರು,  ಪ್ರಭಾಕರ್  ಮ್ಯಾಸ ನಾಯಕ  ಇನ್ನು ಹಲವಾರು  ಜೆಡಿಎಸ್  ವೀರಭದ್ರಪ್ಪ  ,ಕಾಂಗ್ರೆಸ್‌ನ್ನು ಸೋಲಿಸಲು ಬಿ.ಜೆ.ಪಿ. ಟಿಕೆಟ್ ಅಕಾಂಕ್ಷಿಗಳು ಸಜ್ಜಾಗಿದ್ದಾರೆ.

 news_1787226574_0_981.webp

 

ಕೆಲವು ಆಕಾಂಕ್ಷಿಗಳು ಸಕ್ರಿಯವಾಗಿ ಮತದಾರರನ್ನು ಸಂಪರ್ಕಿಸುತ್ತಿದ್ದಾರೆ. ಟಿಕೆಟ್ ಕೈತಪ್ಪಿದರೆ ಪಕ್ಷೇತರರಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಮಾಜಿ ಸಚಿವ ಬಿ.ಶ್ರೀರಾಮುಲುರವರು ಕಳೆದ ಬಾರಿ ವಿಧಾನಸಭೆಯಲ್ಲಿ ವಿಜಯಸಾಧಿಸಿ ಮತ್ತೊಮ್ಮೆ ಈ ಕ್ಷೇತ್ರಕ್ಕೆ ಬರುತ್ತಾರೋ ಎಂದು ಕಾದುನೋಡಬೇಕಾಗಿದೆ. ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಕಳೆದ ರಾಜ್ಯ ವಿಧಾನಸಬಾ ಚುನಾವಣೆಯಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ ಇವರ ವಿರುದ್ಧ ಸೋಲು ಅನುಭವಿಸಿದ್ದರು ಮತ್ತೊಮ್ಮೆ ಈ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನಿಲ್ಲುವ ಸಾಧ್ಯತೆ ಇದೆ ಎಂದು ಕ್ಷೇತ್ರದ ಜನರ ಮುಂದೆ ಪ್ರಚಾರ ಮಾಡುತ್ತಿದ್ದಾರೆ. ಎನ್ ರಘುಮೂರ್ತಿ ಈ ಹಿಂದೆ ಚಳ್ಳಕೆರೆ ತಹಶಿಲ್ದಾರ್  ಆಗಿ ಕೆಲಸ ನಿರ್ವಹಿಸಿದ್ದು ತಳಕು ನಾಯಕನಹಟ್ಟಿ ಮತ್ತು ಮೊಳಕಾಲ್ಮೂರು  ಕಸಬಾ ಹೋಬಳಿಯ ಪ್ರತಿ ಮನೆ ಮತ್ತು ಮನೆಯಲ್ಲಿರುವ ಪ್ರತಿಯೊಬ್ಬರ ಪರಿಚಯವಿದೆ

 news_1787226574_1_366.webp

 

 ಇವರು ಆ ಸಮಯದಲ್ಲಿ ಹೊಸ ಕಲ್ಪನೆಯ ಸಮಸ್ಯೆ ಮುಕ್ತ ಗ್ರಾಮ ಎನ್ನುವ ಕಾರ್ಯಕ್ರಮಗಳನ್ನು ರೂಪಿಸಿ ಅದರ ಮುಖಾಂತರ ಕಂದಾಯ ಇಲಾಖೆಯ ಎಲ್ಲ ಕೆಲಸಕಾರ್ಯಗಳನ್ನು ಜನರ ಬಳಿಗೆ ಕೊಂಡೊಯ್ದಿದ್ದಾರೆ

 

 ಇನ್ನು ಇಪ್ಪತ್ತಕ್ಕೂ ಹೆಚ್ಚು ಸರ್ಕಾರಿಶಾಲೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಸ್ಮಾರ್ಟ್  ಕ್ಲಾಸ್ ಗಳನ್ನಾಗಿ ಮಾಡಿ ಅದರ ಮುಖಾಂತರ ತಾಲೂಕಿನ ಎಸ್.ಎಸ್.ಎಲ್. ಸಿ. ಫಲಿತಾಂಶ ಕರ್ನಾಟಕಕ್ಕೆ ನಂಬರ್ ಒನ್ ಬರುವ ಹಾಗೆ ಶ್ರಮವಹಿಸಿ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಕೆಲಸ ಮಾಡಿದ್ದಾರೆ

 

 ಇನ್ನೂ ಕ್ಷೇತ್ರದ ಮೂರು ಸಾವಿರಕ್ಕೂ ಹೆಚ್ಚಿನ ಪದವೀಧರ ಯುವಕರಿಗೆ ದೆಹಲಿ ಮೂಲದ ಸಂಸ್ಥೆಯೊoದರಿoದ ಪ್ರಜಾವಾಣಿ ಸಹಯೋಗದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಆನ್ಲೈನ್ ಪಠ್ಯ ಒದಗಿಸಿ ಸಾವಿರಕ್ಕೂ ಹೆಚ್ಚು ನಿರುದ್ಯೋಗಿ ಪದವಿದಾರರಿಗೆ ಜೀವನದ ನೆಲೆ ಕಲ್ಪಿಸಿ ಕೊಟ್ಟಿದ್ದಾರೆ

 

 ಇದರ ಜೊತೆಗೆ ತಹಶೀಲ್ದಾರ್  ರಘುಮೂರ್ತಿ ಇವರು ಅಭ್ಯರ್ಥಿಯಾದಲ್ಲಿ ಬಿಜೆಪಿ ಪಕ್ಷದ ಜೊತೆಗೆ ತಟಸ್ಥ ಗುಂಪಿನ ನಾಯಕರುಗಳು ಮತ್ತು ಕಾಂಗ್ರೆಸ್‌ನ್ನು ಶೇಕಡ 35 ರಷ್ಟು ಕಾರ್ಯಕರ್ತರು ತಹಶಿಲ್ದಾರ್ ರಘು ಮೂರ್ತಿ ಅವರ ಬೆನ್ನಿಗೆ ನಿಲ್ಲುವ ಮಾತನ್ನು ಕೂಡ ಅಲ್ಲಲ್ಲಿ ಸಾರ್ವಜನಿಕರು ಮಾತಾಡುತ್ತಿದ್ದಾರೆ

 

 ಇನ್ನು ತಹಶೀಲ್ದಾರ್ ರಘುಮೂರ್ತಿ ಅವರು ಇದೇ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೊಂಡಜ್ಜಿ ಗ್ರಾಮದವರಾಗಿದ್ದು ಹೊರಗಿನ ಅಭ್ಯರ್ಥಿಗಳೆಂಬ ಭಾವನೆಯು ಕೂಡ ಜನಗಳಲ್ಲಿ ಇಲ್ಲದೆ ಇರುವುದರಿಂದ ಪ್ರತಿಯೊಂದು ಮನೆ ಮತ್ತು ಮನಗಳಲ್ಲಿ  ಮನೆ ಮಾಡಿದ್ದಾರೆ  ಆದ್ದರಿಂದ ಕ್ಷೇತ್ರದ ಹೆಚ್ಚಿನ ಜನಗಳ ಒಲವು ಇವರಿಗೆ ಇದ್ದಂತಿರುವುದು ಕಂಡುಬರುತ್ತದೆ

 

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗೇಂದ್ರಗೆ ಮತ್ತೊಂದು ಮಹತ್ವದ ಹೊಣೆ: ಕಲ್ಯಾಣ ಕರ್ನಾಟಕ ಸಚಿವಾಲಯದ ಜವಾಬ್ದಾರಿಸಂಸ್ಕೃತ ವಿಶ್ವವ್ಯಾಪಿ ಜ್ಞಾನಭಾಷೆ, ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಲಿಕಲ್ಲೂರು- ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ. ಹೊನ್ನಳ್ಳಿ ತಾಂಡಾದಲ್ಲಿ ಶ್ರೀಗುರು ಅಜ್ಜಯ್ಯನ ದ್ವಿತೀಯ ದಶಮಾನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆಬಳ್ಳಾರಿಯಲ್ಲಿ ದಿವಂಗತ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಪರಿಷತ್ ಸಭೆ ಹಾಗೂ ನಶಾಮುಕ್ತ ಭಾರತ ಅಭಿಯಾನಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ನ್ಯಾಯಯುತ ಅನುದಾನ ನೀಡಿ: ಸಿಎಂ ಡಿ ಕೆ ಶಿವಕುಮಾರ್ ಒತ್ತಾಯಯಾರಿಗೆ ಒಲೆಯುತ್ತೆ ಬಿಜೆಪಿ ಟಿಕೆಟ್ ರಾಜೀವ್ ಗಾಂಧಿ ಹಾದಿಯಲ್ಲಿ ರಾಹುಲ್ ಗಾಂಧಿ