LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Bellary

"ಸ್ಥಳ ದಾನಿಗಳಿಂದ ಸರ್ಕಾರಿ ಶಾಲೆಗೆ ಪೀಠೋಪಕರಣ, ಪುಸ್ತಕ-ಪೆನ್ನು ಕೊಡುಗೆ".

ಬಳ್ಳಾರಿ : ಮಾರುತಿಪುರ ಕ್ಯಾಂಪ್ ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ಥಳ ನೀಡಿರುವ ದಾನಿಗಳ ಕುಟುಂಬದ ವತಿಯಿಂದ ಶಾಲೆಗೆ ಪೀಠೋಪಕರಣಗಳು ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಪೆನ್ನುಗಳನ್ನು ಕೊಡುಗೆಯಾಗಿ ನೀಡಲಾಯಿತು.

 

ಶಾಲೆಗೆ ಸ್ಥಳ ನೀಡಿರುವ ಎಂ. ಸಾಂಬಶಿವ ರಾವ್ ಮತ್ತು ಎಂ. ನಾಗಮಲ್ಲೇಶ್ವರಿ ಅವರ ಪುತ್ರಿ ಜಿ. ನಾಗರಾಜಕುಮಾರಿ ಹಾಗೂ ಅಳಿಯ ಜಿ. ಹನುಮಂತ ರಾವ್ ಮತ್ತು ಮಗನಾದ ಎಂ ಗಣಪೂರ್ಣ ಚಂದ್ರ ರಾವ್ ಅವರು ಆ. 8ರಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಅಗತ್ಯವಾದ ಪೀಠೋಪಕರಣಗಳನ್ನು ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ನುಗಳನ್ನು ಕೊಡುಗೆಯಾಗಿ ನೀಡಿದರು.

 

ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಅಗತ್ಯವಾದ ಪೀಠೋಪಕರಣಗಳು ಮತ್ತು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವ ಶೈಕ್ಷಣಿಕ ಸಾಮಗ್ರಿಗಳನ್ನು ನೀಡಿದ ದಾನಿಗಳ ಕಾರ್ಯಕ್ಕೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

 

ನಂತರ ಶಾಲೆಯ ಶಿಕ್ಷಕರ ವತಿಯಿಂದ ಜಿ. ನಾಗರಾಜಕುಮಾರಿ ಹಾಗೂ ಜಿ. ಹನುಮಂತ ರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ದಾನಿಗಳ ಸೇವೆಯನ್ನು ಶಿಕ್ಷಕರು ಅಭಿನಂದಿಸಿದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
“ಅಮೋಘ” ಚಲನಚಿತ್ರದ ಹಾಡು ಬಿಡುಗಡೆಬಳ್ಳಾರಿ ಜಿಲ್ಲೆಯ ಎಸ್ಐಆರ್ ಕರಡು ಮತದಾರರ ಪಟ್ಟಿ ಪ್ರಕಟನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳ ದರ್ಶನ ಪಡೆದ ಮಾಜಿ ಶಾಸಕ ಸುರೇಶ್ ಬಾಬುಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ, ಅದೊಂದು ವಿಚಾರಧಾರೆ: ಪ್ರೊ. ಎನ್.ಎಂ. ಸಾಲಿಸಾಂಸಾರಿಕ ಜೀವನ ಪ್ರವೇಶಿಸಿದ ಸ್ಪೈಡರ್ ಮ್ಯಾನ್ನಾಗೇಂದ್ರಗೆ ಮತ್ತೊಂದು ಮಹತ್ವದ ಹೊಣೆ: ಕಲ್ಯಾಣ ಕರ್ನಾಟಕ ಸಚಿವಾಲಯದ ಜವಾಬ್ದಾರಿಸಂಸ್ಕೃತ ವಿಶ್ವವ್ಯಾಪಿ ಜ್ಞಾನಭಾಷೆ, ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಲಿಕಲ್ಲೂರು- ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ. ಹೊನ್ನಳ್ಳಿ ತಾಂಡಾದಲ್ಲಿ ಶ್ರೀಗುರು ಅಜ್ಜಯ್ಯನ ದ್ವಿತೀಯ ದಶಮಾನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ