LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಕೈಜೋಡಿಸಿ

ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಿಗೆ ಸಿಎಂ ಡಿ ಕೆ ಶಿವಕುಮಾರ್ ಕರೆ

ಯೋಜನೆ ಅನುಷ್ಠಾನದಲ್ಲಿ ದೆಹಲಿ, ಕರ್ನಾಟಕದ ನಡುವೆ ಕೊಂಡಿಯಾಗಿ

ನಿಮ್ಮ ಜ್ಞಾನ, ಪ್ರತಿಭೆ, ಸಾಮರ್ಥ್ಯವನ್ನು ಕರ್ನಾಟಕದ ಪ್ರಗತಿಗೆ ಧಾರೆ ಎರೆಯಿರಿ

ನಿಮಗೆ ಬೇಕಾದ ಸಹಕಾರ ಸರಕಾರದಿಂದ ಲಭ್ಯ

ನವದೆಹಲಿ:  ನಿಮ್ಮ ಶಕ್ತಿ ಅದಮ್ಯ. ನೀವು ಮನಸ್ಸು ಮಾಡಿದರೆ ಅಭಿವೃದ್ಧಿ ರಥ ಮುನ್ನುಗ್ಗುತ್ತದೆ. ಹೀಗಾಗಿ ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಕೈಜೋಡಿಸಿ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಿಗೆ ಕರೆ ನೀಡಿದರು.

news_1781115488_0_355.webp

 

ಕರ್ನಾಟಕ ಭವನದಲ್ಲಿ ಅಧಿಕಾರಿಗಳ ಜತೆ ಬುಧವಾರ ರಾತ್ರಿ ಏರ್ಪಡಿಸಿದ್ದ ಔತಣಕೂಟ ಸಂವಾದದಲ್ಲಿ ಅವರು ಮನವಿ ಮಾಡಿದರು.

 

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಬಳಿಕ ಇದೇ ಮೊದಲ ಬಾರಿಗೆ ದೆಹಲಿಗೆ ಆಗಮಿಸಿದ್ದ ಶಿವಕುಮಾರ್ ಅವರು ಇಷ್ಟು ಬೇಗ ತಮ್ಮನ್ನು ಕರೆದು ಸಭೆ ಮಾಡಿದ್ದಕ್ಕೆ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು.

 

ನಿಮ್ಮಲ್ಲಿ ಅಪಾರ ಜ್ಞಾನ ಸಂಪತ್ತಿದೆ. ಸಾಮರ್ಥ್ಯ ಇದೆ. ನಿಮ್ಮಲ್ಲಿರುವ ಆಗಾಧ ಪ್ರತಿಭೆಯನ್ನು ಕರ್ನಾಟಕದ ಪ್ರಗತಿಗೆ ವಿನಿಯೋಗಿಸಿ. ನಿಮಗೆ ಬೇಕಾದ ಸಹಕಾರವನ್ನು ಸರಕಾರ ನೀಡಲಿದೆ ಎಂದು ಸಿಎಂ ಅವರು ತಿಳಿಸಿದರು.

news_1781115488_1_195.webp

 

ಕೇಂದ್ರ ಸರಕಾರದ ಅನೇಕ ಯೋಜನೆಗಳ ಲಾಭ ರಾಜ್ಯಕ್ಕೆ ದೊರೆಯುವಂತೆ ಮಾಡುವಲ್ಲಿ ನಿಮ್ಮ ಸಹಕಾರ ಬಹು ಮುಖ್ಯ. ಕರ್ನಾಟಕದಲ್ಲಿರುವ ನಿಮ್ಮದೇ ಸಹೋದ್ಯೋಗಿಗಳ ಜತೆ ನಿರಂತರ ಸಂಪರ್ಕ, ಸಮಾಲೋಚನೆ ನಡೆಸಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ. ಬಾಕಿ ಇರುವ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಿ ಎಂದು ಹೇಳಿದರು.

 

ನೀವು 35 ವರ್ಷ ಸೇವೆಯಲ್ಲಿರುತ್ತಿರಿ. ನಾವು ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಹಗ್ಗಜಗ್ಗಾಟ ನಡೆಸುತ್ತೇವೆ. ಆದರೆ ಒಂದು ಸರಕಾರಕ್ಕೆ ಉತ್ತಮ ಹೆಸರು ತರುವ ಶಕ್ತಿ ನಿಮ್ಮ ಕೈಯಲ್ಲೇ ಇದೆ. ನಾನು ಅಧಿಕಾರಕ್ಕಾಗಿ ಅಧಿಕಾರ ಮಾಡುವವನಲ್ಲ. ಏನಾದರೂ ಸಾಧನೆ ಮಾಡಬೇಕೆಂಬ ಛಲಕ್ಕೆ ಅಧಿಕಾರ ಬಳಸುವವನು. ನಿಮ್ಮ ಸಹಕಾರ ಇದ್ದರೆ ಸಾಧನೆ ಅಸಾಧ್ಯವಲ್ಲ ಎಂದರು.

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST