LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಪ್ರೇಕ್ಷಕರ ಕಣ್ಣಲ್ಲಿ ಭಾವನಾತ್ಮಕ ಕಣ್ಣೀರು ತರಿಸಿದ "ಕಾಲಘಟ್ಟ"

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಭಾವನಾತ್ಮಕ ಕಥೆಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ನಿರ್ದೇಶಕರ ಸಾಲಿನಲ್ಲಿ ಎಸ್. ಮಹೇಂದರ್ ಮತ್ತು ಜೋಗಿ ಪ್ರೇಮ್ ಹೆಸರುಗಳು ಸದಾ ಮುಂಚೂಣಿಯಲ್ಲಿವೆ. ಇದೀಗ ಅದೇ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿರುವ ಹೆಸರು ನಿರ್ದೇಶಕ ಕೆ. ಪ್ರಕಾಶ್ ಅಂಬಳೆ.

news_1783073413_3_781.webp

 

    ನಿರ್ಮಾಪಕ ಲಯನ್ ಚಿಕ್ಕೇಗೌಡ ಟಿ.ಸಿ. ತಳಗವಾಡಿ ಅವರ ನಿರ್ಮಾಣದಲ್ಲಿ  "ಕಾಲಘಟ್ಟ" ಚಿತ್ರ ಇತ್ತೀಚೆಗೆ ರಾಜ್ಯಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರ ಮನಸ್ಸನ್ನು ಸ್ಪರ್ಶಿಸುತ್ತಿದೆ. ಚಿತ್ರಮಂದಿರಗಳಲ್ಲಿ ಹಲವರ ಕಣ್ಣಲ್ಲಿ ಅರಿಯದಂತೆ ಕಣ್ಣೀರು ತರಿಸುತ್ತಿದೆ.  ಜನಪದ ಸೊಗಡು, ಮಣ್ಣಿನ ಪರಿಮಳ, ಕುಟುಂಬದ ಬಾಂಧವ್ಯ ಮತ್ತು ಮಾನವೀಯ ಮೌಲ್ಯಗಳನ್ನು ಮನಮುಟ್ಟುವಲ್ಲಿ ಚಿತ್ರದ ಕಥೆ ಮತ್ತು ನಿರೂಪಣೆ ಪ್ರೇಕ್ಷಕರನ್ನು ಆರಂಭದಿಂದ ಅಂತ್ಯದವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಿಶೇಷವಾಗಿ ಚಿತ್ರದ ಕ್ಲೈಮ್ಯಾಕ್ಸ್ ಮತ್ತು ಭಾವನಾತ್ಮಕ ದೃಶ್ಯಗಳು ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾದ ಪ್ರಭಾವ ಮೂಡಿಸುತ್ತಿವೆ. ಅನೇಕ ಪ್ರೇಕ್ಷಕರು ಚಿತ್ರ ವೀಕ್ಷಣೆಯ ವೇಳೆ ನಂತರ ಹೊರಬಂದ ಮೇಲೂ  ಭಾವುಕರಾಗಿರುವುದು "ಕಾಲಘಟ್ಟ" ಚಿತ್ರದ ದೊಡ್ಡ ಗೆಲುವಾಗಿದೆ. ಚಿತ್ರದ ಯಶಸ್ಸಿನ ಹಿಂದೆ ನಿರ್ಮಾಪಕ ಲಯನ್ ಚಿಕ್ಕೇಗೌಡ ಟಿ.ಸಿ. ತಳದವಾದಿ ಅವರ ಬೆಂಬಲವೂ ಪ್ರಮುಖವಾಗಿದೆ. ಕನ್ನಡದ ಮಣ್ಣಿನ ಕಥೆಯನ್ನು ದೊಡ್ಡ ಪರದೆಯ ಮೇಲೆ ತರಬೇಕೆಂಬ ಉದ್ದೇಶದಿಂದ ಅವರು ಚಿತ್ರತಂಡಕ್ಕೆ ಸಂಪೂರ್ಣ ಸಹಕಾರ ನೀಡಿದ್ದು, ಚಿತ್ರದ ಗುಣಮಟ್ಟಕ್ಕೆ ಯಾವುದೇ ರಾಜಿ ಮಾಡಿಕೊಳ್ಳದೆ ನಿರ್ಮಾಣ ಮಾಡಿದ್ದಾರೆ.

news_1783073413_4_260.webp

 

   

 ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದ ಪ್ರತಿಭೆ ಕೆ. ಪ್ರಕಾಶ್ ಅಂಬಳೆ ಅವರು ಕನ್ನಡದ ನೆಲದ ಕಥೆಯನ್ನು ಕನ್ನಡಿಗರ ಮುಂದಿಟ್ಟಿರುವ ರೀತಿ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ. ವಾಣಿಜ್ಯ ಅಂಶಗಳ ಜೊತೆಗೆ ಸಂಸ್ಕೃತಿ, ಪರಂಪರೆ ಮತ್ತು ಕುಟುಂಬದ ಮೌಲ್ಯಗಳನ್ನು ಸಮತೋಲನವಾಗಿ ಕಟ್ಟಿಕೊಟ್ಟಿರುವುದು ಚಿತ್ರದ ಮತ್ತೊಂದು ವಿಶೇಷತೆ. ಕಲಾವಿದರೂ,ತಂತ್ರಜ್ಞರೂ ಅಷ್ಟೇ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ "ಕಾಲಘಟ್ಟ" ಚಿತ್ರ, ಕುಟುಂಬ ಸಮೇತ ನೋಡಬಹುದಾದ ಉತ್ತಮ ಮನರಂಜನಾ ಚಿತ್ರವಾಗಿ ಹೊರಹೊಮ್ಮಿದ್ದು, ಮಾಧ್ಯಮದವರಿಂದಲೂ ಉತ್ತಮ ಪ್ರಶಂಸೆಗಳು ವ್ಯಕ್ತವಾಗಿವೆ. ನಿರ್ಮಾಪಕ ಲಯನ್ ಚಿಕ್ಕೇಗೌಡ ಟಿ.ಸಿ. ತಳಗವಾಡಿ ಹಾಗೂ ನಿರ್ದೇಶಕ ಕೆ. ಪ್ರಕಾಶ್ ಅಂಬಳೆ ಅವರ ಜೋಡಿ ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿದ್ದು ಇನ್ನೂ ಹೆಚ್ಚು ಚಿತ್ರಗಳು ಇವರಿಂದ ನಿರ್ಮಾಣವಾಗಲಿ ಎಂದು ಶುಭ ಹಾರೈಸೋಣ.

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST