LIVE TV StateNationalPoliticsCrimeEntertainmentSportsEducationFINANCE & TAXATION
Districts Raichur

ಕಲ್ಯಾಣ ಕರ್ನಾಟಕ ದಿನ ಧ್ವಜಾರೋಹಣ

ರೋಗಿಗಳ ಆರೈಕೆಯನ್ನು ಸುರಕ್ಷಿತವಾಗಿಸಲು ಪಣತೊಡೊಣ : ಡಾ ನಂದಿತಾ

ರಾಯಚೂರು:  ರೋಗಿಗಳ ಆರೈಕೆಯಲ್ಲಿ ಉಂಟಾಗುವ ದೋಷಗಳನ್ನು ಸಕಾಲದಲ್ಲಿ ಗುರ್ತಿಸಿ ಗುಣಮಟ್ಟದ ಚಿಕಿತ್ಸೆಯ ಮಾರ್ಗಗಳನ್ನು ಕಂಡುಕೊಂಡು ಅನುಷ್ಟಾನ ಮಾಡುವ ದಿಶೆಯಲ್ಲಿ  ಎಲ್ಲರೂ ಭಾಗಿಯಾಗೊಣವೆಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ನಂದೀತಾ ಎಮ್‌ ಎನ್‌ ತಿಳಿಸಿದರು.

 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನದ ಅಂಗವಾಗಿ ಧ್ವಜಾರೋಹಣ ನೇರವೇರಿಸಿ ಮಾತನಾಡುತ್ತಾ, ಸ್ವಾತಂತ್ರ್ಯ ನಂತರದಲ್ಲಿ ಹೈದ್ರಾಬಾದ್‌ ನಿಜಾಮರ ಆಳ್ವಿಕೆಯಲ್ಲಿ ಇದ್ದ ಈ ಭಾಗವನ್ನು 1948 ಸಪ್ಟಂಬರ 17 ರಂದು ಭಾರತದೊಂದಿಗೆ ವಿಲೀನಗೊಳಿಸಲಾಯಿತು. ಪ್ರಸ್ತುತ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಯಚೂರು ಜಿಲ್ಲೆಯನ್ನು ಅರೋಗ್ಯ ಸೇವೆಗಳ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೆ ಆರೋಗ್ಯ ಸೇವೆಯನ್ನು ಒದಗಿಸೋಣ‌‌

news_1789666269_4_840.webp

 

ವಿಶ್ವ ರೋಗಿಗಳ ಸುರಕ್ಷತಾ ದಿನ ಪ್ರತಿಜ್ಞೆ:

ಸದರಿ ದಿನಾಚರಣೆಯೊಂದಿಗೆ ಇಂದು ಜಾಗತಿಕವಾಗಿ ರೋಗಿಗಳ ಆರೈಕೆಯಲ್ಲಿ ಪಾಲಕರಿಗೆ ಹಾಗೂ ಆಸ್ಪತ್ರೆಯಲ್ಲಿಯ ಅರೆ ವೈದ್ಯಕೀಯ ಸಿಬ್ಬಂದಿಯವರಿಗೆ ಔ಼ಷಧಿ, ಪರಿಕರಗಳ ಬಳಕೆಯ ತಾಂತ್ರಿಕ ಕೌಶಲ್ಯಗಳ ಬಗ್ಗೆ ನಿರಂತರವಾಗಿ ಬೆಂಬಲ, ನೆರವು ನೀಡುವ ಕಾರ್ಯವನ್ನು ತಜ್ಞರಿಂದ ಮಾಡಿಸುವುದಕ್ಕೆ ಆಧ್ಯತೆ ನೀಡಲಾಗುವುದು ಎಂದು ತಿಳಿಸಿದರು. ವೈದ್ಯರಿಂದ ಹಿಡಿದು ಸ್ವಚ್ಚತಾ ಸಿಬ್ಬಂದಿಯವರೆಗೂ ತಮ್ಮ ಆಸ್ಪತ್ರೆಗೆ ಚಿಕಿತ್ಸೆ ಆಗಮಿಸುವ ಪ್ರತಿಯೊಬ್ಬರಿಗೂ ಗೌರವಿಸಿ ಸೌಜನ್ಯಯುತವಾಗಿ ಚಿಕಿತ್ಸೆ ನೀಡೋಣ. ಕ್ಷೇತ್ರ ಮಟ್ಟದಲ್ಲಿ ಮಕ್ಕಳಿಗೆ ಯಾವುದೆ ಲಸಿಕೆ ವಂಚಿತವಾಗದಂತೆ ನಿಗಾವಹಿಸೋಣ. ಸೊಳ್ಳೆಯಿಂದ ಹರಡುವ ಡೆಂಗ್ಯು ಚಿಕುನ್ಯಗುನ್ಯಾ, ಮಲೇರಿಯಾ, ಹಾಗೂ ಕ್ಷಯರೋಗ, ಕುಷ್ಠರೋಗದಂತಹ ಹಾಗೂ ವಾಂತಿಬೇದಿಯಂತಹ ಸಾಂಕ್ರಾಮಿಕ ರೋಗಗಳನ್ನು ಹಾಗೂ ರಕ್ತದೊತ್ತಡ,  ಮಧುಮೇಹ, ಕ್ಯಾನ್ಸರ್‌ ಸೇರಿದಂತೆ ಇತರೆ  ಅಸಾಂಕ್ರಾಮಿಕ ರೋಗಗಳ ನಿಯಂತ್ರಣದ ಕಾರ್ಯವನ್ನು ಪ್ರತಿಯೊಬ್ಬರ ಬೆಂಬಲದೊಂದಿಗೆ ಈಗಿನಂತೆ ಮುಂದುವರೆಸೊಣ,  ಹೆಚ್ಐವಿಯ ಸ್ಥಿತಿಗತಿಯನ್ನು ಸ್ವಯಂ ಗುರ್ತಿಸುವ ಮೋಬಲೈಷೆನ್‌ ಕಾರ್ಯವನ್ನು ಪರಿಣಾಮಕಾರಿ ಯಾಗಿಸೊಣ. ಹೆಚ್ಚು ಹೆಚ್ಚು ಜಾಗೃತಿಗಾಗಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳು, ಪತ್ರಿಕೆಗಳು ಹಾಗೂ ಇತರ ಮಾಧ್ಯಮಗಳ ಮೂಲಕ ಪರಿಣಾಮಕಾರಿ ಪ್ರಚಾರ ಕಾರ್ಯಕೈಗೊಳ್ಳಲು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಗಣೇಶ್ ಕೆ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ ಶಿವಕುಮಾರ ನಾರಾ, ತಾಲೂಕಾ ಆರೋಗ್ಯಾಧಿಕಾರಿ ಡಾ ಸತೀಶ್‌, ಡಿಹೆಚ್‌ಇಓ ಈಶ್ವರ ದಾಸಪ್ಪನವರ, ಡಿವೈಹೆಚ್‌ಇಓ ಬಸಯ್ಯ, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಪುಂಡಲಿಕ ಗಂಜಿ, ಕಚೇರಿ ಅಧಿಕ್ಷಕರು ಸುಧಾರಾಣಿ ಸೇರಿದಂತೆ ಎಲ್ಲ ವಿಭಾಗಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ತಡೆಗಟ್ಟಬಹುದು-ಡಾ. ನಿಗ್ಗುಡಗಿವಿಜಯರಾಘವೆಂದ್ರ ಅಭಿನಯದ “ರುದ್ರಾಭಿಷೇಕಂ’ ಚಿತ್ರದ ಟ್ರೈಲರ್ ಬಿಡುಗಡೆ ಪಠ್ಯದ ಜೊತೆಗೆ ಮೌಲ್ಯವರ್ಧಿತ ಕೋರ್ಸಗಳ ಆಯ್ಕೆ ಬಹುಮುಖ್ಯ-ಯಡ್ರಾಮಿ