ಅನುಷಾ ಜೋಶಿ
ಹೌದು, ಮಧ್ಯಮ ವರ್ಗದ ಕುಟುಂಬಗಳಿಗೆ ವ್ಯವಸ್ಥಿತ ಹೂಡಿಕೆ ಯೋಜನೆ ಸಾಮಾನ್ಯವಾಗಿ ಸುರಕ್ಷಿತ ಮತ್ತು ಸೂಕ್ತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಇದು ಸಣ್ಣ ಮೊತ್ತ ವಾಗಿರುವ ತಿಂಗಳಿಗೆ 500ರ ಮೊತ್ತವನ್ನು ನೇರವಾಗಿ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ ಹಾಗೂ ಇದು ಮಾರುಕಟ್ಟೆಯ ಸಮಯವನ್ನು ನಿವಾರಿಸುತ್ತದೆ ಮತ್ತು ರೂಪಾಯಿ ವೆಚ್ಚ ಸರಾಸರಿ ಎಂಬ ವೈಶಿಷ್ಟ್ಯದ ಮೂಲಕ ಹಠಾತ್ ನಷ್ಟಗಳಿಂದ ರಕ್ಷಿಸುತ್ತದೆ.
ಮಧ್ಯಮ ವರ್ಗದ ಕುಟುಂಬಕ್ಕೆ ಎಸ್ಐಪಿಗಳು ಹಲವಾರು ವೈಶಿಷ್ಟ್ಯ ಪ್ರಯೋಜನಗಳನ್ನು ನೀಡುತ್ತವೆ ಅವುಗಳೆಂದರೆ
ಬಜೆಟ್ ಸ್ನೇಹಿ : ನೀವು ನಿಮ್ಮ ಎಸ್ಐಪಿ ಪ್ರಯಾಣವನ್ನು ಸಣ್ಣ ಹೂಡಿಕೆಯಿಂದ ನಿರ್ವಹಿಸಬಹುದಾದ ಕೊಡುಗೆಗಳಿಂದ ಪ್ರಾರಂಭಿಸಬಹುದು ಇದು ಮಕ್ಕಳ ಶಿಕ್ಷಣ ಅಥವಾ ನಿವೃತ್ತಿ ಅಂತಹ ದೀರ್ಘಕಾಲಿನ ಗುರಿಗಳಿಗಾಗಿ ದೈನಂದಿನ ಮನೆಯ ವೆಚ್ಚಗಳನ್ನು ಸಮತೋಲನಗೊಳಿಸಲು ಸುಲಭಗೊಳಿಸುತ್ತದೆ.
ಶಿಸ್ತು: ಇದರಲ್ಲಿ ಹೆಚ್ಚಿನ ಮಟ್ಟಿಗೆ ಶಿಸ್ತನ್ನು ಬ್ಯಾಂಕುಗಳ ಮೂಲಕ ಎಸ್ ಎಸ್ ಐ ಪಿ ಯನ್ನು ನಿರ್ವಹಿಸಿದಾಗ ಕಾಣಬಹುದು ಹಾಗೂ ಸಂಪತ್ತು ಸೃಷ್ಟಿಗೆ ಸ್ಥಿರವಾದ ಮೌಲ್ಯವರ್ಧಿತವಾಗಿ ಸಹಾಯ ಮಾಡುತ್ತದೆ.
ದೀರ್ಘಕಾಲಿನ ಬೆಳವಣಿಗೆ : ಇದು ಸಂಯುಕ್ತ ಬಡ್ಡಿಯ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಇಕ್ವಿಟಿ ಫಂಡ್ಗಳಲ್ಲಿನ ಎಸ್ಐಪಿ ಗಳು ಐತಿಹಾಸಿಕವಾಗಿ ಸಾಂಪ್ರದಾಯಕವಾಗಿ ಉಳಿತಾಯ ಖಾತೆಗಳನ್ನು ಮೀರಿಸಲು ಅನುಕೂಲಕರವಾಗಿದೆ ಮತ್ತು ಹಣದುಬ್ಬರವನ್ನು ನಿವಾರಿಸಲು ಅನುಕೂಲಕರವಾಗಿದೆ.
ಕೊನೆಯಲ್ಲಿ ಹೇಳುವುದಾದರೆ ಹೌದು ಷೇರು ಮಾರುಕಟ್ಟೆಯನ್ನು ವಿಶ್ಲೇಷಿಸಲು ಮತ್ತು ಅರ್ಥೈಸಲು ಸಾಕಷ್ಟು ಸಮಯವನ್ನು ಪಡೆಯುವಂತಹ ಮಧ್ಯಮ ವರ್ಗದವರಿಗೆ ಎಸ್ಐಪಿ ಗಳು ಒಂದು ವರದಾನವಾಗಿದೆ. ಮತ್ತು ಇದರ ಪ್ರಕ್ರಿಯೆಯು ಸರಳವಾಗಿದೆ ಇದರ ಬಗ್ಗೆ ತಿಳಿದಿರುವ ಯಾರಿಗಾದರೂ ತಮ್ಮ ಹಣವನ್ನು ನೀಡಿ ಇದರ ಅಪಾಯವನ್ನು ತೆಗೆದುಕೊಳ್ಳುವ ಸಾಮರ್ಥ್ಯಕ್ಕನುಗುಣವಾಗಿ ಎಸ್ಐಪಿಗಳನ್ನು ನೀಡಲಾಗುತ್ತದೆ ಇದರಿಂದ ಕುಟುಂಬದ ಖರ್ಚಿನ ಸಮತೋಲನ ಹಾಗೂ ದೇಶದ ಹಣದುಬ್ಬರವನ್ನು ಸರಿದೂಗಿಸಬಹುದಾಗಿದೆ.