LIVE TV StateNationalPoliticsCrimeEntertainmentSportsEducationFINANCE & TAXATION
Districts

ನಗರದಲ್ಲಿ 10.ಕೆ, 5.ಕೆ,3ಕೆ ಅಡ್ವೋಕಥಾನ್

ಬೆಂಗಳೂರು :  ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಮಹತ್ವದ ಬಗ್ಗೆ ಅರಿವು ಮೂಡಿಸುವ “ಅಡ್ವೋಕಥಾನ್” ಗೆ ನಟ, ನಿರ್ಮಾಪಕ, ಗಂಡಸಿ ಸದಾನಂದ ಸ್ವಾಮಿ ನಗರದ ಫ್ರಿಡಂ ಪಾರ್ಕ್ ನಲ್ಲಿ ಚಾಲನೆ ನೀಡಲಾಯಿತು.

ಜಸ್ಟಿಟಿಟಿಯಾ “ಅಡ್ವೋಕಥಾನ್” ಫ್ರಿಡಂ ಪಾರ್ಕ್ ನಿಂದ ಕಂಠೀರವ ಸ್ಟೇಡಿಯಂ ಮಾರ್ಗವಾಗಿ ಎಂ.ಜಿ, ರಸ್ತೆ, ಹೈಕೋರ್ಟ್ ಮತ್ತು ವಿಧಾನಸೌಧ ವರೆಗೆ ನಡೆದ 10.ಕೆ, 5.ಕೆ, 3ಕೆ ಯಲ್ಲಿ 750 ಸ್ಪರ್ಧಿಗಳು ಭಾಗವಹಿಸಿದ್ದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಮಹತ್ವದ ಬಗ್ಗೆ ಅರಿವು ಮೂಡಿಸುವ, ಕ್ರೀಡೆ ಮತ್ತು ದೈಹಿಕ ಸದೃಢತೆಯ ಮೂಲಕ ಬಾಲಾಪರಾಧ ತಡೆಗಟ್ಟುವ ದಿಸೆಯಲ್ಲಿ ಪ್ರಗತಿಪರ ಕಾನೂನು ಸಂಸ್ಥೆ “ಜಸ್ಟಿಟಿಟಿಯಾ” ತಂಡ ಇದೇ ಮೊದಲ ಬಾರಿಗೆ  “ಅಡ್ವೋಕಥಾನ್”  ಆಯೋಜಿಸಿ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಿತು.



ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ದೇಶದ ಸದೃಢತೆ, ಕಾನೂನು ವೃತ್ತಿಪರರು ಮತ್ತು ನಾಗರಿಕರಲ್ಲಿ ಮಾನಸಿಕ – ಶಾರೀರಿಕ ಆರೋಗ್ಯ ವೃದ್ಧಿಗೊಳಿಸುವ ಉದ್ದೇಶದಿಂದ ಅಡ್ವೋಕಥಾನ್ ಏರ್ಪಡಿಸಲಾಗಿದೆ. ಇದು ಕೇವಲ ಓಟವಲ್ಲ. ನ್ಯಾಯಾಂಗ ವ್ಯವಸ್ಥೆಯ ಬಲ, ಏಕತೆ ಮತ್ತು ನೈತಿಕ ಹೊಣೆಗಾರಿಕೆಯನ್ನು ಜಾರಿಗೊಳಿಸುವ ಗುರಿ ಹೊಂದಲಾಗಿದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ, ಸಾರ್ವಜನಿಕರ ನಡುವೆ ಸಂವಾದ, ಸಹಕಾರ ಹೆಚ್ಚಿಸುವುದು ಈ ಕಾರ್ಯಕ್ರಮದ ಧ್ಯೇಯವಾಗಿದೆ ಎಂದು ತಿಳಿಸಿದರು.

ವಕೀಲರಾದ ನಂಜಪ್ಪ ಕಾಳೆಗೌಡ ಅಂಟೋನಿ ಜೋಸೆಫ್, ಡಾ. ಮಿರ್ ರಫಿಕುಲ್ ಇಸ್ಲo, ರಾಹುಲ್,ಥಾಮಸ್ ಮತ್ತಿತರರು ಉಪಸ್ಥಿತರಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ