LIVE TV StateNationalPoliticsCrimeEntertainmentSportsEducationFINANCE & TAXATION
Districts

ಜ.25ರಂದು ಲಲಿತಕಲಾ ರಂಗದ 41ನೇ ವಾರ್ಷಿಕೋತ್ಸವ

ಮರಿಯಮ್ಮನಹಳ್ಳಿ: ಲಲಿತಕಲಾ ರಂಗದ 41ನೇ ವಾರ್ಷಿಕೋತ್ಸವವನ್ನು ಜ.25 ಭಾನುವಾರ ದಂದು ಹಮ್ಮಿಕೊಳ್ಳಲಾಗುತ್ತಿದೆ ಎಂದು‌ ಪಟ್ಟಣದ ಲಲಿತ ಕಲಾರಂಗದ ಕಾರ್ಯದರ್ಶಿ ಬಿಎಂಎಸ್ ಮೃತ್ಯುಂಜಯರವರು  ತಿಳಿಸಿದರು.

ಅವರು ಪಟ್ಟಣದ ದುರ್ಗಾದಾಸ ಕಲಾಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ‌ಮಾತನಾಡಿದರು. 41ನೇ ವಾರ್ಷಿಕೋತ್ಸವ ಅಂಗವಾಗಿ ಕಲಾನಿಧಿ ಪ್ರಶಸ್ತಿ  ಹಾಗೂ ಗಮಕ ವಾಚನ ಮತ್ತು  ಗುಡಿಯ ನೋಡಿರಣ್ಣ  ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ಕಲಾವಿದೆ ಗಂಗಮ್ಮ ಅವರನ್ನು ಕಲಾನಿಧಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಹಗರಿಬೊಮ್ಮನಹಳ್ಳಿಯ ಉಪನ್ಯಾಸಕಿ ಸುಧಾ ಚಿದಾನಂದ ಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ . ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ ಬಿ ಅಂಬಣ್ಣ, ಉದ್ಯಮಿ ಕೀರ್ತಿ ರಾಜ್ ಜೈನ್, ನಿವೃತ್ತಿ ಶಿಕ್ಷಕರಾದ ಡಿ ಭಾರತಿ, ಕೆ ಕರಿಬಸಪ್ಪ ಉಪಸ್ಥಿತಿ ಇದ್ದು, ಲಲಿತ  ಕಲಾರಂಗದ  ಅಧ್ಯಕ್ಷ ಹುರುಕೊಳ್ಳಿ ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಲಲಿತ ಕಲಾರಂಗದ ಉಪಾಧ್ಯಕ್ಷ ಜಿ ಎಂ ಕೊಟ್ರೇಶ್, ಖಜಾಂಚಿ ಜಿ ಮಲ್ಲಪ್ಪ, ಕಟ್ಟಿ ಉಮೇಶ ಇದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ