LIVE TV StateNationalPoliticsCrimeEntertainmentSportsEducationFINANCE & TAXATION
Districts Chitradurga

ನಾಯಕನಹಟ್ಟಿ ಪಟ್ಟಣ ಪಂಚಾಯತಿಯಲ್ಲಿ 71ನೇ ಕನ್ನಡ ರಾಜ್ಯೋತ್ಸವ ಆಚರಣೆ

ಕನ್ನಡ ರಾಜ್ಯೋತ್ಸವದಲ್ಲಿ ನಮ್ಮ ಕವಿಗಳಿಗೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿದೆ: ಮಂಜುಳಾ ಶ್ರೀಕಾಂತ್

ನಾಯಕನಹಟ್ಟಿ :  ಕನ್ನಡ ರಾಜ್ಯೋತ್ಸವದಲ್ಲಿ ನಮ್ಮ ಕವಿಗಳಿಗೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿದೆ, ಇದು ಕನ್ನಡದ ಹಿರಿಮೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್ ಹೇಳಿದರು.

 

ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿಭಾನುವಾರ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ ಭಾರತದ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿ ಎಂಟು ಬಾರಿ ಬಂದಿದೆ. ಇದು ಯಾವುದೇ ಭಾಷೆಗೆ ಸಿಗದ ದೊಡ್ಡ ಗೌರವ. ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ, ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಸೇರಿದಂತೆ ನಮ್ಮ ಕವಿಗಳು, ಸಾಹಿತಿಗಳು ದೇಶಕ್ಕೆ ಕನ್ನಡದ ಶಕ್ತಿ ತೋರಿಸಿದ್ದಾರೆ. ಈ ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಮಾತನಾಡಿದರೆ ಎಷ್ಟು ಶಕ್ತಿ ಬರುತ್ತದೆ ಎಂದು ತೋರಿಸುತ್ತವೆ ಎಂದರು.

 

ಕನ್ನಡ ನಮ್ಮ ತಾಯಿ ಭಾಷೆ, ತಾಯಿ ಭಾಷೆಯಲ್ಲಿ ಮಾತನಾಡುವುದು ನಮ್ಮ ಜನ್ಮಸಿದ್ಧ ಹಕ್ಕು. ಕನ್ನಡದಲ್ಲಿ ಮಾತನಾಡಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ. ನಮ್ಮ ಹಬ್ಬ, ಜಾತ್ರೆ, ಗುರು ತಿಪ್ಪೇರುದ್ರಸ್ವಾಮಿಯ ಇತಿಹಾಸ ಎಲ್ಲವೂ ಕನ್ನಡದಲ್ಲಿದೆ. ನಾವು ಮನೆಯಲ್ಲಿ, ಕಚೇರಿಗಳಲ್ಲಿ ಕನ್ನಡ ಮಾತನಾಡಿದರೆ ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ತಿಳಿಯುತ್ತದೆ.

 

ಕನ್ನಡ ಮಾತನಾಡುವುದರಿಂದ ಉದ್ಯೋಗ ಕೂಡ ಸಿಗುತ್ತದೆ. ಕರ್ನಾಟಕದಲ್ಲಿ ಸರ್ಕಾರಿ ಕೆಲಸಕ್ಕೆ ಕನ್ನಡ ಕಡ್ಡಾಯ. ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡಿ, ಕಚೇರಿಗಳಲ್ಲಿ ಕನ್ನಡದಲ್ಲೇ ಅರ್ಜಿ ಬರೆಯಿರಿ. ಕನ್ನಡಕ್ಕೆ ನಾಚಬೇಡಿ, ಹೆಮ್ಮೆ ಪಡಿ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂದು ಕರೆ ನೀಡಿದರು.

 

ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸದ ಕೆಲ ಸದಸ್ಯರುಗಳು ಇಚ್ಚಶಕ್ತಿ ತೋರಿದ್ದಾರೆಹಲವಾರು ಸದಸ್ಯರು ಗೈರಾಜರಾಗಿದ್ದರೆ

ಈ ಸಂದರ್ಭದಲ್ಲಿ ಮಾಜಿ ಉಪಾಧ್ಯಕ್ಷೆ ಸರ್ವಮಂಗಳ ಉಮಾಪತಿ, ಮುಖ್ಯಾಧಿಕಾರಿ ಓ. ಶ್ರೀನಿವಾಸ್, ಸಿಬ್ಬಂದಿ, ಪೌರಕಾರ್ಮಿಕರು ಇದ್ದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀಪಗಳ ಹಬ್ಬದ ಮಹತ್ವ, ಆಚರಣೆಯ ವಿಧಿ ವಿಧಾನ ಇಲ್ಲಿದೆಕೋಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಇಟಲಿಯ ಹೈಡ್ರೋನಿಕ್' ಸಂಸ್ಥೆ ಹಾಗೂ 'ಲಿಫ್ಟ್ ಎಕ್ಸ್ಪೋಗೆ' ಡಾ. ಬಿ.ಎಂ. ಉಮೇಶ್ ಕುಮಾರ್ ಭೇಟಿಮಕ್ಕಳನ್ನು ಮೊಬೈಲ್ನಿಂದ ದೂರವಿಟ್ಟು ಕ್ರೀಡೆಗಳಲ್ಲಿ ತೊಡಗಿಸಿ: ಬಸವರಾಜ್ ಶೀಲವಂತರ್ ಕರೆನಕಲಿ ಮತದಾರರಿಗೆ ರಕ್ಷಣೆ ನೀಡುವುದೇ ಎಸ್ಐಆರ್ ವಿರೋಧಿಗಳ ಅಜೆಂಡಾ ಅಲ್ಲವೇ?” – ಪ್ರಭಾಕರ್ ರಾಗಿ ಅಂಗಡಿಗೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆಹಳ್ಳಿ-ಹಳ್ಳಿಗೆ ತೆರಳಿ ಕಾಂಗ್ರೆಸ್ ಭದ್ರಕೋಟೆ ನಿರ್ಮಿಸುತ್ತಿರುವ ಡಾ. ಯೋಗೇಶ್ ಬಾಬುವಾಲ್ಮೀಕಿನಾಯಕ ಸಮಾಜದವರು ಖಡ್ಗದ ಬದಲಾಗಿ ಶಿಕ್ಷಣದ ಅಸ್ತ್ರಹಿಡಿಯಿರಿಚಲನಚಿತ್ರ ನಟ, ನಿರ್ದೇಶಕ ಚಂದ್ರಹಾಸ ಆಳ್ವರಿಗೆ ಸನ್ಮಾನಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ