LIVE TV StateNationalPoliticsCrimeEntertainmentSportsEducationFINANCE & TAXATION
Districts Chitradurga

ನ್ಯಾಯದ ಬೆಳಕು ಹರಿಸಿದ ಎನ್.ವೈ. ಸಹೋದರರ ಸಾಧನೆಯ ಗಾಥೆ

ಮೊಳಕಾಲ್ಮೂರಿನ ಮಣ್ಣಿನಿಂದ ದೆಹಲಿಯವರೆಗೂ ವಾಲ್ಮೀಕಿ ಕೀರ್ತಿ ಪತಾಕೆ ಹಾರಿಸಿದ ಕುಟುಂಬ

ವರದಿ ಹರೀಶ್ ಟಿ. ಟಿ.

 

ಮೊಳಕಾಲ್ಮೂರು: ಮೊಳಕಾಲ್ಮೂರು ಕ್ಷೇತ್ರದ ರಾಜಕೀಯ ಇತಿಹಾಸ ಬರೆಯುವಾಗ ಎನ್.ವೈ. ಕುಟುಂಬವನ್ನು ಬಿಟ್ಟು ಬರೆಯಲು ಸಾಧ್ಯವೇ ಇಲ್ಲ. ಒಂದು ಮನೆಯಿಂದ ಒಬ್ಬರು 7 ಬಾರಿ ಶಾಸಕ, ಇನ್ನೊಬ್ಬರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಸಂಸದರಾಗಿ ಸೇವೆ ಸಲ್ಲಿಸಿರುವುದು ರಾಜ್ಯದಲ್ಲೇ ಅಪರೂಪದ ದಾಖಲೆ.

 

 ಜನನಾಯಕ ಎನ್.ವೈ. ಗೋಪಾಲಕೃಷ್ಣ - ನಡೆದು ಬಂದ ದಾರಿ

ಮೊಳಕಾಲ್ಮೂರು ಕ್ಷೇತ್ರದಲ್ಲಿ ಸತತ 5 ಬಾರಿ, ಕೂಡ್ಲಿಗಿಯಲ್ಲಿ 1 ಬಾರಿ ಬಳ್ಳಾರಿಯಲ್ಲಿ ಒಂದು ಬಾರಿ -ಒಟ್ಟು 7 ಬಾರಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಏಕೈಕ ವಾಲ್ಮೀಕಿ ನಾಯಕ. ಅವರಿದ್ದಾಗ ಮೊಳಕಾಲ್ಮೂರು ಅಭಿವೃದ್ಧಿಯ ಸುವರ್ಣ ಯುಗ ಕಂಡಿತ್ತು.

news_1793036156_0_947.webp

 

ನ್ಯಾಯದಿಂದ ಸಂಸತ್ತಿನತ್ತ - ಜಸ್ಟಿಸ್ ಎನ್.ವೈ. ಹನುಮಂತಪ್ಪ ಅವರ ಕೊಡುಗೆ

ಗೋಪಾಲಕೃಷ್ಣ ಅವರ ಹಿರಿಯ ಸಹೋದರ, ನಾಡು ಕಂಡ ನ್ಯಾಯದೇವತೆ ನ್ಯಾಯಮೂರ್ತಿ ಎನ್.ವೈ. ಹನುಮಂತಪ್ಪ ಅವರು ಒರಿಸ್ಸಾ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿ ನಿವೃತ್ತರಾದ ನಂತರ ಸುಮ್ಮನೆ ಕುಳಿತುಕೊಳ್ಳಲಿಲ್ಲ.

ನಿವೃತ್ತಿಯ ನಂತರ ಅವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿ ದೆಹಲಿ ಅಂಗಳದಲ್ಲಿ ಮೊಳಕಾಲ್ಮೂರಿನ ಧ್ವನಿಯಾದರು. ಸಂಸದರಾಗಿದ್ದ ಅವಧಿಯಲ್ಲಿ ಅವರು ಮಾಡಿದ ಸಾಧನೆ ಅಸಾಮಾನ್ಯ.

ಮೊಳಕಾಲ್ಮೂರು ಭಾಗದ ಬರಡು ಭೂಮಿಯನ್ನು ರಕ್ಷಣಾ ಮತ್ತು ವಿಜ್ಞಾನ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದವರು ಅವರೇDRDOಯ ದೊಡ್ಡ ಯೋಜನೆಗಳನ್ನು ಮೊಳಕಾಲ್ಮೂರು - ಚಳ್ಳಕೆರೆ ಭಾಗಕ್ಕೆ ತರುವಲ್ಲಿ ಅವರ ಪಾತ್ರ ಪ್ರಮುಖ ISRO ಗೆ ಸಂಬಂಧಿಸಿದ ವೈಜ್ಞಾನಿಕ ಚಟುವಟಿಕೆಗಳು, ರಕ್ಷಣಾ ಇಲಾಖೆಯ ಸಂಸ್ಥೆಗಳು ಈ ಭಾಗದಲ್ಲಿ ಬರಲು ಸಂಸತ್ತಿನಲ್ಲಿ ಹೋರಾಡಿದವರು ಅವರು. ಇದರಿಂದಾಗಿ ಇಂದು ಸಾವಿರಾರು ಯುವಕರಿಗೆ ಉದ್ಯೋಗ, ಪ್ರದೇಶಕ್ಕೆ ಬೆಲೆ ಬಂದಿದೆ.

 

ಒಬ್ಬ ನ್ಯಾಯಮೂರ್ತಿ ರಾಜಕೀಯಕ್ಕೆ ಬಂದರೆ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಅವರು ತೋರಿಸಿಕೊಟ್ಟರು.

ವಾಲ್ಮೀಕಿ ಸಮಾಜಕ್ಕೆ ನೀಡಿದ ಗೌರವ ಮತ್ತು ಕುಟುಂಬದ ನ್ಯಾಯ ಸೇವೆ:

ಈ ಕುಟುಂಬದ ಇನ್ನೊಂದು ದೊಡ್ಡ ಗುಣವೆಂದರೆ ಅವರ ವಕೀಲ ವೃತ್ತಿ ಮತ್ತು ಉಚಿತ ನ್ಯಾಯ ಸೇವೆ.

ಎನ್.ವೈ. ಕುಟುಂಬ ಮೂಲತಃ ನ್ಯಾಯವಾದಿಗಳ ಕುಟುಂಬ. ಇಂದಿಗೂ ಅವರ ಕುಟುಂಬದವರು ನ್ಯಾಯಾಲಯಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷವಾಗಿ ಯಾರೇ ಕಡು ಬಡವರು, ದೀನ ದಲಿತರು ನ್ಯಾಯ ಕೇಳಿಕೊಂಡು ಅವರ ಮನೆ ಬಾಗಿಲಿಗೆ ಹೋದರೆ, ಒಂದೇ ಒಂದು ರೂಪಾಯಿ ಪಡೆಯದೇ ಉಚಿತವಾಗಿ ಕೇಸ್ ನಡೆಸಿಕೊಟ್ಟು ನ್ಯಾಯ ಕೊಡಿಸುವ ಸಂಪ್ರದಾಯವನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ.

news_1793036156_1_704.webp

 

news_1793036156_9_922.webp

 

ಹಣವಿದ್ದವರಿಗೆ ಒಬ್ಬ ವಕೀಲ ಸಿಗುತ್ತಾನೆ, ಆದರೆ ಬಡವರಿಗೆ ನ್ಯಾಯವೇ ಸಿಗುವುದಿಲ್ಲ ಎಂಬ ಸ್ಥಿತಿಯಲ್ಲಿ, ಎನ್.ವೈ. ಕುಟುಂಬ ಬಡವರ ಪಾಲಿಗೆ ನ್ಯಾಯ ದೇವತೆಯಾಗಿದೆ.

ವಾಲ್ಮೀಕಿ ಸಮಾಜಕ್ಕೆ ಎಸ್.ಟಿ. ಮೀಸಲಾತಿ, ಜಯಂತಿ ಆಚರಣೆ, ಸಮುದಾಯ ಭವನಗಳ ಹೋರಾಟದಲ್ಲಿ ಈ ಸಹೋದರರ ಕೊಡುಗೆ ಚಿನ್ನದ ಅಕ್ಷರಗಳಲ್ಲಿ ಬರೆಯುವಂತಹದ್ದು.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಒಂದು ಮನೆಯಲ್ಲಿ ಹುಟ್ಟಿದ ಇಬ್ಬರು ಸಹೋದರರು - ಒಬ್ಬರು ವಿಧಾನಸಭೆಯಲ್ಲಿ ಜನರ ಧ್ವನಿಯಾದರೆ, ಇನ್ನೊಬ್ಬರು ನ್ಯಾಯಾಲಯದಲ್ಲಿ ನ್ಯಾಯದ ಧ್ವನಿಯಾಗಿ, ಕೊನೆಗೆ ಸಂಸತ್ತಿನಲ್ಲಿ ದೇಶದ ರಕ್ಷಣಾ ಯೋಜನೆಗಳನ್ನು ತಮ್ಮ ತವರೂರಿಗೆ ತಂದರು. ಇಂತಹ ಕುಟುಂಬ ನಾಡಿಗೆ ಮಾದರಿ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀಪಗಳ ಹಬ್ಬದ ಮಹತ್ವ, ಆಚರಣೆಯ ವಿಧಿ ವಿಧಾನ ಇಲ್ಲಿದೆಕೋಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಇಟಲಿಯ ಹೈಡ್ರೋನಿಕ್' ಸಂಸ್ಥೆ ಹಾಗೂ 'ಲಿಫ್ಟ್ ಎಕ್ಸ್ಪೋಗೆ' ಡಾ. ಬಿ.ಎಂ. ಉಮೇಶ್ ಕುಮಾರ್ ಭೇಟಿಮಕ್ಕಳನ್ನು ಮೊಬೈಲ್ನಿಂದ ದೂರವಿಟ್ಟು ಕ್ರೀಡೆಗಳಲ್ಲಿ ತೊಡಗಿಸಿ: ಬಸವರಾಜ್ ಶೀಲವಂತರ್ ಕರೆನಕಲಿ ಮತದಾರರಿಗೆ ರಕ್ಷಣೆ ನೀಡುವುದೇ ಎಸ್ಐಆರ್ ವಿರೋಧಿಗಳ ಅಜೆಂಡಾ ಅಲ್ಲವೇ?” – ಪ್ರಭಾಕರ್ ರಾಗಿ ಅಂಗಡಿಗೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆಹಳ್ಳಿ-ಹಳ್ಳಿಗೆ ತೆರಳಿ ಕಾಂಗ್ರೆಸ್ ಭದ್ರಕೋಟೆ ನಿರ್ಮಿಸುತ್ತಿರುವ ಡಾ. ಯೋಗೇಶ್ ಬಾಬುವಾಲ್ಮೀಕಿನಾಯಕ ಸಮಾಜದವರು ಖಡ್ಗದ ಬದಲಾಗಿ ಶಿಕ್ಷಣದ ಅಸ್ತ್ರಹಿಡಿಯಿರಿಚಲನಚಿತ್ರ ನಟ, ನಿರ್ದೇಶಕ ಚಂದ್ರಹಾಸ ಆಳ್ವರಿಗೆ ಸನ್ಮಾನಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ