LIVE TV StateNationalPoliticsCrimeEntertainmentSportsEducationFINANCE & TAXATION
Districts Vijayanagara

ಕಾಲೇಜಿನ ಹಣ ದುರ್ಬಳಕೆ ಆರೋಪ ಆಧಾರ ರಹಿತ: ಲೋಕಾಯುಕ್ತರು

ಹೊಸಪೇಟೆ: ಕರ್ನಾಟಕ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಕೆ ಎ ಓಬಳೇಶ್ ಎಂಬುವರು ೨೦೨೫ರ ಜನವರಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಅಂದಿನ ಕಾಲೇಜಿನ ಪ್ರಾಂಶುಪಾಲ ನಾರಾಯಣ ಹೆಬಸೂರ್ ಅವರಿಂದ ಪಡೆದು ಹೊಸಪೇಟೆಯ ಶ್ರೀ ಶಂಕರ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೧೯-೨೨ರ ಅವಧಿಯಲ್ಲಿ ಪ್ರಾಂಶುಪಾಲರಾಗಿದ್ದ ಡಾ. ಬಿ. ಜಿ. ಕನಕೇಶಮೂರ್ತಿಯವರು ಕಾಲೇಜಿನ ಅರೆ ಸರ್ಕಾರಿ ಖಾತೆಗಳ ಹಣ ರೂ.೮.೩೯,೨೮೮/-ಗಳನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿರುವುದು ಕಾನೂನು ರೀತ್ಯಾ ದುರ್ಬಳಕೆಯಾಗಿದೆ. ಆದ್ದರಿಂದ ಇವರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಕೋರಿ ರಾಜ್ಯ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ದೂರುದಾರ ಕೆ.ಎ. ಓಬಳೇಶ್ ಮತ್ತು ಎದುರುದಾರರಾದ ಡಾ ಬಿ ಜಿ ಕನಕೇಶಮೂರ್ತಿ-ಇವರ ದೂರು ಮತ್ತು ಆಕ್ಷೇಪಣೆ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿದ ರಾಜ್ಯ ಲೋಕಾಯುಕ್ತವು ಸರ್ಕಾರದ ಯಾವುದೇ ಹಣ ದುರ್ಬಳಕೆಯಾಗಿರುವುದು ಕಂಡುಬಂದಿರುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಈ ಪ್ರಾಧಿಕಾರದ ಅಧಿಕಾರ ವ್ಯಾಪ್ತಿಗೆ ಒಳಪಡುವುದಿಲ್ಲ. ಅವರ ದೂರು ಆಧಾರರಹಿತವಾದುದು. ಹಾಗಾಗಿ ಈ ದೂರನ್ನು ಮುಕ್ತಾಯಗೊಳಿಸಲಾಗಿದೆ ಎಂದು ಹೇಳುವ ಮೂಲಕ ಕ್ಲೀನ್ ಚಿಟ್ ನೀಡಿದೆ.

 

 ನನ್ನ ಸೇವಾವಧಿಯಲ್ಲಿ ಕಾಲೇಜಿನ ಸರ್ವತೋಮುಖ ಬೆಳವಣಿಗೆಗಾಗಿ ಶ್ರದ್ದೆ, ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೆಲಸ ಮಾಡಿದ್ದೇನೆ. ಲೋಕಾಯುಕ್ತರ ಆದೇಶ ಸತ್ಯ ಮತ್ತು ಪ್ರಾಮಾಣಿಕತೆಗಳಿಗೆ ಸಂದ ಜಯವಾಗಿದೆ. ಇನ್ನು ಮುಂದೆ ನಿಷ್ಠಾವಂತರಿಗೆ ಮಾನಸಿಕ ಅಥವಾ ಯಾವುದೇ ಬಗೆಯ ಕಿರುಕುಳ ಅಥವಾ ಹಿಂಸೆಯಾಗಬಾರದು. ಆಧಾರರಹಿತ ಸುಳ್ಳು ಆರೋಪ ಮಾಡುವವರಿಗೆ, ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆಯಾಗಬೇಕು. ನನ್ನ ತೇಜೋವಧೆ ಮಾಡುವ ದುರುದ್ದೇಶದಿಂದ ಪ್ರಾಂಶುಪಾರು ಹಾಗೂ ದೂರುದಾರರು ನನ್ನ ಬಗೆಗೆ ಸುಳ್ಳು ಮಾಹಿತಿ ನೀಡಿ ನನಗೆ ಮಾನಸಿಕ ಹಿಂಸೆ ನೀಡಿರುತ್ತಾರೆ. ಆದ್ದರಿಂದ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವೆ.–ಡಾ. ಬಿ.ಜಿ.ಕನಕೇಶಮೂರ್ತಿ, ವಿಶ್ರಾಂತ ಪ್ರಾಧ್ಯಾಪಕ

 

ಡಾ.ಬಿ.ಜಿ.ಕನಕೇಶಮೂರ್ತಿ, ವಿಶ್ರಾಂತ ಪ್ರಾಧ್ಯಾಪಕ ಆದ ನನ್ನ ವಿರುದ್ಧ ೨೦೨೨ರಲ್ಲಿ ವಿನಾಕಾರಣ ಮಾಡಿದ್ದ ಕಾಲೇಜಿನ ಹಣ ದುರ್ಬಳಕೆ ಆರೋಪ ಆಧಾರ ರಹಿತವಾದುದು ಎಂದು ರಾಜ್ಯ ಲೋಕಾಯುಕ್ತ ಅಭಿಪ್ರಾಯಪಟ್ಟು ದೂರಿನ ಕಡತವನ್ನು ಮುಕ್ತಾಯಗೊಳಿಸಿರುವ ಕುರಿತು.

 news_1789481420_1_280.webp

 

ಕೆ.ಎ. ಓಬಳೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ, ಲೋಕಿಕೆರೆ, ದಾವಣಗೆರೆ-ಇವರು ಜನವರಿ,೨೦೨೫ರಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಅಂದಿನ ಕಾಲೇಜಿನ ಪ್ರಾಂಶುಪಾಲರಾಗಿದ್ದ ನಾರಾಯಣ ಹೆಬಸೂರ್ ಅವರಿಂದ ಮಾಹಿತಿ ಪಡೆದು ‘ಹೊಸಪೇಟೆಯ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೧೯-೨೨ರ ಅವಧಿಯಲ್ಲಿ ಪ್ರಾಂಶುಪಾಲರಾಗಿದ್ದ ನಾನು, ಡಾ. ಬಿ. ಜಿ. ಕನಕೇಶಮೂರ್ತಿಯವರು ಕಾಲೇಜಿನ ಅರೆ ಸರ್ಕಾರಿ ಖಾತೆಗಳ ಹಣ ರೂ.೮.೩೯,೨೮೮/-ಗಳನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿರುವುದು ಕಾನೂನು ರೀತ್ಯಾ ದುರ್ಬಳಕೆಯಾಗಿದೆ. ಆದ್ದರಿಂದ ಇವರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ’ ಕೋರಿ ರಾಜ್ಯ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

 

ಕೆ.ಎ. ಓಬಳೇಶ್ ಅವರ ದೂರು ಮತ್ತು ಎದುರುದಾರರಾದ ಡಾ ಬಿ ಜಿ ಕನಕೇಶಮೂರ್ತಿ-ನನ್ನ ಆಕ್ಷೇಪಣೆ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿದ ರಾಜ್ಯ ಲೋಕಾಯುಕ್ತವು ಜುಲೈ ೨೦೨೬ರ ತನ್ನ ಹಿಂಬರಹದ ಟಿಪ್ಪಣಿಯಲ್ಲಿ ‘ಸರ್ಕಾರದ ಯಾವುದೇ ಹಣ ದುರ್ಬಳಕೆಯಾಗಿರುವುದು ಕಂಡುಬಂದಿರುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಈ ಪ್ರಾಧಿಕಾರದ ಅಧಿಕಾರ ವ್ಯಾಪ್ತಿಗೆ ಒಳಪಡುವುದಿಲ್ಲ. ಅವರ ದೂರು ಆಧಾರರಹಿತವಾದುದು. ಹಾಗಾಗಿ ಈ ದೂರನ್ನು ಮುಕ್ತಾಯಗೊಳಿಸಲಾಗಿದೆ’ ಎಂದು ಹೇಳಿದೆ. (ಪ್ರತಿ ಲಗತ್ತಿಸಿದೆ) ಈ ಮೂಲಕ ನನ್ನ ಮೇಲೆ ಮಾಡಿದ್ದ ಸತ್ಯದೂರವಾಗಿದ್ದು ನನಗೆ ಸಮಾಧಾನವನ್ನು ತಂದಿದೆ.

 

ಪ್ರಭಾರಿ ಪ್ರಾಂಶುಪಾಲರ ಅಧಿಕಾರವನ್ನು ವಹಿಸಿಕೊಂಡ ದಿನದಿಂದಲೂ ನಾನು ಕಾಲೇಜಿನ ಏಳಿಗೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ವರ್ಷವರ್ಷಕ್ಕೆ ಪ್ರವೇಶಾತಿ ಪ್ರಮಾಣದ ತೀವ್ರ ಏರಿಕೆ,(೨೦೧೫ರಲ್ಲಿ ೪೦೭-೨೦೨೧ರಲ್ಲಿ ೩೪೧೮) ಬೋಧನೆ, ಶಿಸ್ತು, ಉತ್ತಮ ಫಲಿತಾಂಶ, ಮೂಲಭೂತ ಸೌಲಭ್ಯಗಳು ಪಠ್ಯೇತರ ಚಟುವಟಿಕೆಗಳು-ಹೀಗೆ ಎಲ್ಲ ಆಯಾಮಗಳಲ್ಲೂ ತೀವ್ರವಾಗಿ ಬೆಳವಣಿಗೆಯಾಗಿದ್ದರೂ ಇದನ್ನು ಸಹಿಸದ, ಕಾಲೇಜಿನ ಒಳಗಿನ ಕೆಲವರು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಡೆಗಣಿಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದುದನ್ನು ಪ್ರಶ್ನಿಸಿ ಅವರ ವಿರುದ್ಧ ಕ್ರಮವಹಿಸಿದ ಕಾರಣದಿಂದಾಗಿ ಒಳಸಂಚು ರೂಪಿಸಿ, ಪಿತೂರಿ ನಡೆಸಿ ನನ್ನ ಮೇಲೆ ಗುರುತರವಾದ ಸುಳ್ಳು ಆರೋಪವನ್ನು ಮಾಡಿ ತೇಜೋವಧೆ ಮಾಡಲು ಪ್ರಯತ್ನಿಸಿದರು. ನೈತಿಕ ಸ್ಥೆöÊರ್ಯ, ವೃತ್ತಿಬದ್ಧತೆ ಹಾಗೂ ಪ್ರಾಮಾಣಿಕತೆಗಳಿಂದಾಗಿ ಎಲ್ಲವನ್ನೂ ದೈರ್ಯವಾಗಿ ಎದುರಿಸಿದೆ ಮತ್ತು ನಿವೃತ್ತಿಯ(೩೦-೦೪-೨೦೨೨) ನಂತರ ನನಗೆ ಸರ್ಕಾರದಿಂದ ಬರಬೇಕಾದ ಎಲ್ಲ ಆರ್ಥಿಕ ಸೌಲಭ್ಯಗಳೂ ಯಾವುದೇ ಅಡೆತಡೆಯಿಲ್ಲದೆ ಕಾಲಕಾಲಕ್ಕೆ ಬಂದಿವೆ.

 

ಆದರೂ, ಆರೋಪದ ಕಾರಣದಿಂದಾಗಿ ೨೦೨೨ರಲ್ಲಿ ಆಕ್ಷೇಪಣೆಯಲ್ಲಿಟ್ಟಿದ್ದ ರೂ.೮,೩೯,೨೮೮/-ಗಳ ಕಂಡಿಕೆಗಳನ್ನು ಕಾಲೇಜು ಶಿಕ್ಷಣ ಇಲಾಖೆಯ ಲೆಕ್ಕತಪಾಸಣಾ, ಪರಿಶೀಲಧಿಕಾರಿಗಳು ೨೦೨೩ರಲ್ಲಿ ತೀರುವಳಿಗೊಳಿಸಿದ್ದು, ಡಿಸೆಂಬರ್, ೨೦೨೩ರಲ್ಲಿ ನನ್ನ ಖಾತೆಗೆ ತಡೆಹಿಡಿದಿದ್ದ ರೂ.೮,೩೯,೨೮೮/-ಗಳು ಜಮೆಯಾಗಿದೆ.

 

ಜನವರಿ ೨೦೨೫ರಲ್ಲಿ ಕೆ.ಎ.ಓಬಳೇಶ್ ಎಂಬ ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಕಾಲೇಜಿನ ಅಂದಿನ ಪ್ರಾಂಶುಪಾಲ ನಾರಾಯಣ ಹೆಬಸೂರ್ ಅವರು ದಾಖಲೆಯನ್ನು ಒದಗಿಸುವ ಸಂರ್ಭದಲ್ಲಿ ‘ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಲಾಗಿದೆ’ ಎಂಬ ೨೦೨೨ರ ಹಳೆಯ ಆಕ್ಷೇಪಿತ ಮಾಹಿತಿಯನ್ನೇ ಒದಗಿಸಿ ನಿಜ ಸಂಗತಿಯನ್ನು ಮರೆಮಾಚಿ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿರುತ್ತಾರೆ. 

 

ಇದನ್ನು ಆಧಾರಿಸಿ ಕೆ.ಎ. ಓಬಳೇಶ್ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸುವ ಮೂಲಕ ನನಗೆ ಮಾನಸಿಕ ಹಿಂಸೆ ನೀಡಿದ್ದಾರೆ.

 

ಗೌರವಾನ್ವಿತ ಲೋಕಾಯುಕ್ತರ ದಿನಾಂಕ:೩೦-೦೭-೨೦೨೬ ಹಿಂಬರಹದ ಟಿಪ್ಪಣಿ ಮತ್ತು ಆದೇಶದನ್ವಯ ದೂರುದಾರರ ಆರೋಪ ಆಧಾರರಹಿತವಾದುದು. ಹಾಗಾಗಿ ಈ ದೂರನ್ನು ಮುಕ್ತಾಯಗೊಳಿಸಲಾಗಿದೆ.    

 

ಗೌರವಾನ್ವಿತ ಲೋಕಾಯುಕ್ತರ ಆದೇಶವು ಸತ್ಯ ಮತ್ತು ಪ್ರಾಮಾಣಿಕತೆಗಳಿಗೆ ಸಂದ ಜಯವಾಗಿದೆ. ಇನ್ನು ಮುಂದೆ ನಿಷ್ಠಾವಂತರಿಗೆ ಮಾನಸಿಕ ಅಥವಾ ಯಾವುದೇ ಬಗೆಯ ಕಿರುಕುಳ ಅಥವಾ ಹಿಂಸೆಯಾಗಬಾರದು. ಆಧಾರರಹಿತ ಸುಳ್ಳು ಆರೋಪ ಮಾಡುವವರಿಗೆ, ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆಯಾಗಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ.ಬಿ.ಜಿ.ಕನಕೇಶಮೂರ್ತಿ ಒತ್ತಾಯಿಸಿದ್ದಾರೆ.

 

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ತಡೆಗಟ್ಟಬಹುದು-ಡಾ. ನಿಗ್ಗುಡಗಿವಿಜಯರಾಘವೆಂದ್ರ ಅಭಿನಯದ “ರುದ್ರಾಭಿಷೇಕಂ’ ಚಿತ್ರದ ಟ್ರೈಲರ್ ಬಿಡುಗಡೆ ಪಠ್ಯದ ಜೊತೆಗೆ ಮೌಲ್ಯವರ್ಧಿತ ಕೋರ್ಸಗಳ ಆಯ್ಕೆ ಬಹುಮುಖ್ಯ-ಯಡ್ರಾಮಿ