LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Vijayanagara

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಹಸ್ರ ಬಿಲ್ವಾರ್ಚನ ಪೂಜೆ.

ಮರಿಯಮ್ಮನಹಳ್ಳಿ : ಪಟ್ಟಣ ಸಮೀಪದ ಜಿ.ನಾಗಲಾಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಹಸ್ರ ಬಿಲ್ವಾರ್ಚನ ಪೂಜೆ ಹಾಗೂ ಧಾರ್ಮಿಕ ಸಭಾ  ಕಾರ್ಯಕ್ರಮವನ್ನು ಶ್ರೀ ಶ್ರೀ ನಿರಂಜನ ಪ್ರಭುದೇವರು ಮಹಾಸ್ವಾಮಿಗಳು ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು,

ಊರಿನ ಏಳಿಗೆಗೆ ಈ ತರಹದ ಕಾರ್ಯಕ್ರಮಗಳು ಯೋಜನ ವತಿಯಿಂದ ಮಾಡುತ್ತಿರುವುದು ಊರಿಗೆ ಒಂದು ಸಂತಸದ ವಿಚಾರ ಹಾಗೂ ಸಾಮಾಜಿಕ ರಂಗದಲ್ಲಿ ಪೂಜ್ಯರು ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ಸಾಮಾಜಿಕ ರಂಗದಲ್ಲಿ ನೀಡುತ್ತಿರುವ ಕೊಡುಗೆ ಮೆಚ್ಚುಗೆ ಎಂದು ಹೇಳಿದರು.

ನಂತರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ಮಾತನಾಡಿ ಯೋಜನೆಯ ಕಾರ್ಯಕ್ರಮಗಳು, ನಡೆದು ಬಂದ ರೀತಿ, ಯೋಜನೆ ಮುಖಾಂತರವಾಗಿ ಧಾರ್ಮಿಕ ಕೇಂದ್ರಗಳ ನೀಡುವ ಮಣ್ಣನೆ, ಜೀರ್ಣೋದ್ಧಾರ ಕುರಿತು ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳಿಂದ ಮಾತ್ರ ಜನರ ಒಗ್ಗೂಡುವಿಕೆ ಹಾಗೂ ಊರಿನ ಒಗ್ಗಟ್ಟು ಮತ್ತು ಧಾರ್ಮಿಕ ಸಭೆಗಳಿಗೆ ಇರುವ ಮಹತ್ವದ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಮಾನ್ಯ ಯೋಜನಾಧಿಕಾರಿಗಳಾದ  ಮಂಜುನಾಥ್ ನಾಯಕ್ , ವಲಯ ಮೇಲ್ವಿಚಾರಕರಾದ ನಂದನ್  ಮತ್ತು ಮಂಜುನಾಥ್ ಸೇವಾ ಪ್ರತಿನಿಧಿಗಳಾದ ಕಲಾವತಿ, ಗೌರಿ ,ಯಶೋದ, ಚೆನ್ನಮ್ಮ, ಲಕ್ಷ್ಮಿ ,ಅಂಜಿನಮ್ಮ , ಹಾಗೂ ಶೃತಿ , ಮಹೇಶ್ವರಿ.ಊರಿನ ಮುಖಂಡರಾದ ಕoಪಾಲಪ್ಪ ಒಪ್ಪತಜ್ಜ ಹಾಗೂ ವಿರೂಪಾಕ್ಷಯ್ಯ, ಗಜೇಂದ್ರ ಉಪಸ್ಥಿತರಿದ್ದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST