ಮರಿಯಮ್ಮನಹಳ್ಳಿ : ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹಳೆ ಮಲಪನಗುಡಿ ಗ್ರಾಮದ ಭರಮಪ್ಪನವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷ ನಾಯಕರ ಪರಶುರಾಮ(44) ಹೃದಯಾಘಾತದಿಂದ ಮಂಗಳವಾರ ಬೆಳಗಿನಜಾವದಲ್ಲಿ ನಿಧನರಾದರು. ಮೃತನು ತಂದೆ, ತಾಯಿ, ಹೆಂಡತಿ, ಒಬ್ಬ ಪುತ್ರಿ, ಇಬ್ಬರು ಪುತ್ರರು, ಸೋದರ, ಸೋದರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತನ ಅಂತ್ಯಕ್ರಿಯೆಯನ್ನು ಮಲಪನಗುಡಿ ಗ್ರಾಮದ ಸಾರ್ವಜನಿಕ ರುದ್ರ ಭೂಮಿಯಲ್ಲಿ ಮಂಗಳವಾರ ನಡೆಯಿತು.