LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Vijayanagara

ರಾಘವೇಂದ್ರ ಸ್ವಾಮಿಗಳ 355ನೇಯ ಆರಾಧನಾ ಮಹೋತ್ಸವ

ಪಟ್ಟಣದಲ್ಲಿ 5 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು

ಮರಿಯಮ್ಮನಹಳ್ಳಿ: ಕಲಿಯುಗ ಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಗಳ 5 ದಿನಗಳಕಾಲ ವಿವಿಧ ಕಾರ್ಯಕ್ರಮಗಳ ಮೂಲಕ  355ನೇಯ ಆರಾಧನಾ ಮಹೋತ್ಸವವು ಆರಂಭವಾಗಿದ್ದು, ಸೆಪ್ಟಂಬರ್ 1ರವರೆಗೆ ನಡೆಯಲಿದೆ ಎಂದು ರಾಘವೇಂದ್ರಸ್ವಾಮಿ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಜೆ.ರಾಮಮೂರ್ತಿ ರವರು ಹೇಳಿದರು.

ಅವರು ಪಟ್ಟಣದ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಇಂದು ಶ್ರೀರಾಘವೇಂದ್ರಸ್ವಾಮಿಗಳ ಪೂರ್ವಾಧನೆ ನಿಮಿತ್ತ ಸುಪ್ರಭಾತ, ವಿಷ್ಣುಸಹಸ್ರನಾಮಪಾರಾಯಣ, ವೆಂಕಟೇಶ್ವರ ಸ್ತೋತ್ರ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ರಥೋತ್ಸವ, ಬೆಳಿಗ್ಗೆ ಹೊಸಪೇಟೆಯ ವಿಶ್ವನಾಥಾಚಾರ್ ಪೂಜಾರಿಂದ ಉಪನ್ಯಾಸ, ನೈವೇದ್ಯ, ಹಸ್ತೋದಕ, ರಥೋತ್ಸವ, ಸ್ವಸ್ತಿವಾಚನ, ಮಂಗಳಾರತಿ, ಇದೇ ದಿನ ರಾಜ್ಯಪ್ರಶಸ್ತಿಪುರಸ್ಕೃತ ಡಾ.ವಿಜಯವೆಂಕಟೇಶ ರವರಿಗೆ ಸನ್ಮಾನ ನಡೆಯಲಿದೆ.

ಸಂಜೆ ಶ್ರೀಲಕ್ಷ್ಮೀ ಶೋಭಾನಭಜನಾ ಮಂಡಳಿ ಇವರಿಂದಕಾರ್ಯಕ್ರಮ ನಡೆಯಲಿದೆ.

30ರಂದು ಶ್ರೀರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ ಅಂಗವಾಗಿ, ಸುಪ್ರಭಾತ, ವಿಷ್ಣುಸಹಸ್ರನಾಮ ಪಾರಾಯಣ,ವೆಂಕಟೇಶ್ವರ ಸ್ತೋತ್ರ, ಅಷ್ಟೋತ್ತರ, ಪಂಚಾಮೃತ ಅಭಿಷೇ, ರಥೋತ್ಸವ, ಸಂಜೆ ಬೆಂಗಳೂರಿನ ದಿವ್ಯಾಗಿರಿಧರ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

31ರಂದು ಶ್ರೀರಾಘವೇಂದ್ರಸ್ವಾಮಿಗಳ ಉತ್ತರಾಧನೆ ನಡೆಯಲಿದೆ, ಪ್ರತಿದಿನದಂತೆ ಧಾರ್ಮಿಕ ವಿಧಿವಿಧಾನಗಳು, ರಾಯರ ಗ್ರಾಮಪ್ರದಕ್ಷಿಣೆ ನಂತರ ಸಾರ್ವಜನಿಕರ ರಥೋತ್ಸವ ನಂತರ ನೈವೇದ್ಯೆ, ಹಸ್ತೋದಕ, ಸ್ವಸ್ತೀವಾಚನ, ಮಹಾ ಮಂಗಳಾರತಿನಂತರ ತೀರ್ಥಪ್ರಸಾದ ಸಂಜೆ ಸ್ವಸ್ತಿವಾಚನ,ಮಹಾಮಂಗಳಾರತಿ ನೆರವೇರಲಿದೆ.

ಸೆ.1ರಂದು ರಾಘವೇಂದ್ರಸ್ವಾಮಿಗಳಮೂರನೇ ಶಿಷ್ಯರಾದ ಶ್ರೀ ಸುಜ್ಞಾನೇಂದ್ರತೀರ್ಥರ ಆರಾಧನೆ,ಬೆಳಿಗ್ಗೆ ಸುಪ್ರಭಾತ,ಸತ್ಯನಾರಾಯಣಪೂಜೆ,ಹರಿವಾಯುಸ್ತುತಿ,ನೈವೇದ್ಯೆ,ಮಹಾಮಂಗಳಾರತಿ,ತೀರ್ಥಪ್ರಸಾದ ನಡೆಯಲಿವೆ‌.ಸರ್ವಭಕ್ತರು 5ದಿನಗಳ ಆರಾಧನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಯರ ಕೃಪೆಗೆ ಪಾತ್ರರಾಗಲು ತಿಳಿಸಿದರು.

ಶ್ರೀರಾಘವೇಂದ್ರ ಸೇವಾಸಮಿತಿ ಟ್ರಸ್ಟ್ ಕಾರ್ಯದರ್ಶಿ ಎಸ್.ನಾರಾಯಣಾಚಾರ್,ಉಪಾಧ್ಯಕ್ಷ ಟಿ. ಪ್ರಭಾಕರಭಟ್

ನಿರ್ದೇಶಕರಾದ ವಿನಾಯಕಭಟ್, ಶ್ರೀನಾಥಭಟ್ ಅರ್ಚಕ ಶೇಷಗಿರಿ ಆಚಾರ್ ಸೇರಿದಂತೆ ಇತರರಿದ್ದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST