LIVE TV StateNationalPoliticsCrimeEntertainmentSportsEducationFINANCE & TAXATION
Districts Gadag

ಶಿಸ್ತು ಬದ್ಧ ಬದುಕಿಗೆ ಇನ್ನೊಂದು ಹೆಸರೇ ಎ.ಬಿ.ಹಿರೇಮಠ - ಹೆಚ್.ಎಸ್. ಚವಟಗಿ

ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದ ಪ್ರತಿಷ್ಠಿತ ಕೆ.ಆರ್.ಬೆಲ್ಲದ್ ಕಾಲೇಜಿನ ಪ್ರಾಚಾರ್ಯರಾಗಿ ವಿಶ್ರಾಂತ ಜೀವನ ನಡೆಸುತ್ತಿರುವ ಎ.ಬಿ.ಹಿರೇಮಠ ಅವರು ಶಿಸ್ತು ಬದ್ಧ ಜೀವನಕ್ಕೆ ಸಾಕ್ಷಿ ಪ್ರಜ್ಞೆಯಾಗಿದ್ದಾರೆ ಎಂದು ದಾವಣಗೆರೆ ಮೋತಿ ವೀರಪ್ಪ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕರಾಗಿರುವ ಹೆಚ್.ಎಚ್.ಚವಟಗಿ ಅವರು ಹೇಳಿದರು.

 

ಮುಂಡರಗಿ ಅನ್ನದಾನೀಶ್ವರ ಮಠದ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ವಿಶ್ರಾಂತ ಪ್ರಾಚಾರ್ಯ ಎ.ಬಿ.ಹಿರೇಮಠ ಅವರ ೮೫ನೇ ಜನ್ಮೋತ್ಸವ ಹಾಗೂ ಕರ್ತವ್ಯ ಶೀಲ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಕೆ.ಆರ್.ಬೆಲ್ಲದ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿ ಮಾತನಾಡಿದ ಅವರು, ೧೯೯೩ರಿಂದ ೧೯೯೬ರವರೆಗೆ ಕೆ.ಆರ್.ಬೆಲ್ಲದ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಎ.ಬಿ.ಹಿರೇಮಠ ಅವರನ್ನು ತುಂಬಾ ಹತ್ತಿರದಿಂದ ಗಮನಿಸಿದ್ದೇವೆ. ಅವರ ಸರಳ ಜೀವನ, ಸಮಯ ಪ್ರಜ್ಞೆಯಿಂದ ನಮ್ಮಂತಹ ಅನೇಕ ವಿದ್ಯಾರ್ಥಿಗಳು ಪ್ರಭಾವಗೊಂಡಿದ್ದೇವೆ. ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಬದುಕು ರೂಪಿಸಿಕೊಳ್ಳಲು ನೆರವಾಗಿದ್ದ ಅವರು, ಶಿಸ್ತು ಬದ್ಧ ಬದುಕಿಗೆ ಸ್ಫೂರ್ತಿ ತುಂಬಿದ್ದಾರೆ. ಅವರದ್ದು ಅನುಪಮವಾದ ಬದುಕು ಎಂದರು.

 news_1790095723_3_917.webp

 

ಇಂತಹ ಕಾರ್ಯಕ್ರಮಕ್ಕೆ ಕೆ.ಆರ್.ಬೆಲ್ಲದ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾಗಿದ್ದ ಡಿವೈಎಸ್‌ಪಿ ವೆಂಕಟಪ್ಪ ನಾಯಕ, ಹಿರಿಯ ಸಿವಿಲ್ ನ್ಯಾಯಾಧೀಶರಾಗಿರುವ ಯಮನಪ್ಪ ಮತ್ತು ಪತ್ರಕರ್ತರಾದ ಎಂ.ವಿ.ಜೋಷಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಎ.ಬಿ.ಹಿರೇಮಠ ಗುರುಗಳ ಈ ಸಮಾರಂಭಕ್ಕೆ ದೂರದೂರಿನಿಂದ ಆಗಮಿಸಿ ಅವರ ಆಶೀರ್ವಾದ ಪಡೆದು ಧನ್ಯರಾಗಿದ್ದಾರೆ. ಎ.ಬಿ.ಹಿರೇಮಠ ಅವರು ಮುಂದಿನ ದಿನಗಳಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಇನ್ನಷ್ಟು ಉತ್ಸುಕರಾಗಿ ಜೀವಿಸಲಿ ಎಂದು ಶುಭ ಹಾರೈಸಿದರು. 

 

ಕಾಯಕ, ಸಮಯಪ್ರಜ್ಞೆ, ಕರ್ತವ್ಯ ನಿಷ್ಠೆಯಿಂದ ಎ.ಬಿ. ಹಿರೇಮಠ ಅವರು ಗುರುತಿಸಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿರುವ ಎ.ಬಿ.ಹಿರೇಮಠರು ಆದರ್ಶ ಶಿಕ್ಷಕರಾಗಿ ದಕ್ಷತೆ, ಪ್ರಾಮಾಣಿಕತೆ,ಶಿಸ್ತಿನ ಜೀವನ ನಡೆಸುವ ಮೂಲಕ ಮಾದರಿಯಾಗಿದ್ದಾರೆ ಎಂದರು.

 

ದಿವ್ಯ ಸಾನಿಧ್ಯ ವಹಿಸಿದ್ದಡಾ. ನಾಡೋಜ ಅನ್ನದಾನೀಶ್ವರ ಮಹಾಶಿವಯೋಗಿಗಳು ಆಶೀರ್ವಚನ ನೀಡಿ, ದಕ್ಷ ಪ್ರಾಚಾರ್ಯ ಎ.ಬಿ. ಹಿರೇಮಠರು ಕ್ರಿಯಾಶೀಲತೆ ಯಿಂದ ಕರ್ತವ್ಯ ಶೀಲರಾಗಿರುವುದು ಯೋಗ್ಯವಾಗಿದೆ ಎಂದರು.

 

ಬೆಳಗಾವಿ ಶೇಗುಣಸಿಯ ಶ್ರೀ ಮಹಾಂತ ಪ್ರಭು ಸ್ವಾಮಿಗಳು ಆಶೀರ್ವಚನ ನೀಡಿ, ಕನ್ನಡ ಶಾಲೆಗಳು ಉಳಿಯುವುದು ಕಷ್ಟದಾಯಕವಾಗಿದೆ. ಕನ್ನಡ ಉಳಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಲು ಮುಂದಾ ಗಬೇಕು ಎಂದರು. ಶಿರಹಟ್ಟಿ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಮಾತನಾಡಿದರು.

 

ಮಾಜಿ ಸಚಿವ ಎಸ್.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಸ್.ಬಿ.ಕೆ.ಗೌಡರ, ಡಾ.ಬಿ.ಎಲ್.ಲಕ್ಕಣ್ಣವರ, ಅಕ್ಕಮಹಾದೇವಿ ಹಂಪಿಹೋಳಿ, ಅಮೀನಸಾಬ ಬಿಸನಳ್ಳಿ, ಉದಯಕುಮಾರ ಎಲಿವಾಳ ಮಾತನಾಡಿದರು.

 news_1790095723_4_349.webp

 

ಶ್ರೀ ನಿಜಗುಣ ಶಿವಯೋಗಿಗಳು, ಎ.ಬಿ. ಹಿರೇಮಠ, ಬಿ.ಎಪ್.ಚೇಗರೆಡ್ಡಿ, ಯಮನಪ್ಪ.ಕೆ, ಡಾ.ಬಿ.ಜಿ.ಜವಳಿ, ಈಶ್ವರಪ್ಪಹಂಚಿನಾಳ, ಕೊಟ್ರೇಶ ಅಂಗಡಿ, ಅಲ್ಲಮಪ್ರಭು ಬೆಟ್ಟದೂರು, ಜಯದೇವ ಮೆಣಸಗಿ, ಬಿ.ಎಸ್.ಶಿರೋಳ, ಜಿ.ಬಿ.ಪಾಟೀಲ ಉಪಸ್ಥಿತರಿದ್ದರು.

 

ಅಡಿವೆಯ್ಯ ನಾಗೇಶ ಹುಬ್ಬಳ್ಳಿ ಸ್ವಾಗತಿಸಿದರು. ಗಾಯತ್ರಿದೇವಿ ಹಿರೇಮಠ ಪ್ರಾಸ್ತಾವಿಕ ನುಡಿ ಆಡಿದರು. ಡಾ. ಸಂತೋಷ ಹಿರೇಮಠ, ಶಶಿಕಲಾ ಕುಕನೂರು ನಿರೂಪಿಸಿದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯ ದಶಮಿಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದಸರಾ ಹಾಗೂ ಆಯುಧ ಪೂಜೆಜಾತಿಭೇದವಿಲ್ಲದೆ ದಲಿತರ ಮನೆಯಲ್ಲಿ ಊಟ ಸವಿದ ಡಾ. ಬಿ. ಯೋಗೇಶ್ ಡಿಸ್ಕವರಿ ವಾಹಿನಿಯಲ್ಲಿ ಕೆಐಐಟಿ ಸಾಧನೆ ಬಣ್ಣನೆ ಕನ್ನಡಿಗರು ವಿಶಾಲತೆ, ಸಾಮರಸ್ಯ ಉಳ್ಳವರಾಗಿರುವುದರಿಂದಲೇ ಕನ್ನಡಕ್ಕೆ ಕಂಟಕ!ಹಾಡಿನ ಚಿತ್ರೀಕರಣದೊಂದಿಗೆ ‘ಚಂದ್ರಗಿರಿ’ ಚಿತ್ರೀಕರಣ ಮುಕ್ತಾಯಸರ್ವೋದಯ ಮಹಾವಿದ್ಯಾಲಯದ ಸೌಕರ್ಯ, ಶೈಕ್ಷಣಿಕ ಸಾಧನೆಗೆ ದಾವಣಗೆರೆ ವಿವಿ ಉಪಕುಲಪತಿ ಮೆಚ್ಚುಗೆಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ