LIVE TV StateNationalPoliticsCrimeEntertainmentSportsEducationFINANCE & TAXATION
Districts Gadag

ಸೆ.೨೦ ರಂದು ಪ್ರೊ.ಎ.ಬಿ.ಹಿರೇಮಠ ಅವರ `ಕರ್ತವ್ಯಶೀಲ' ಅಭಿನಂದನ ಗ್ರಂಥ ಬಿಡುಗಡೆ

ಗದಗ: ಜಿಲ್ಲೆಯ ಮುಂಡರಗಿಯಲ್ಲಿರುವ ಶ್ರೀ ಜಗದ್ಗುರು ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಇದೇ ಸೆಪ್ಟೆಂಬರ್ ೨೦ ರಂದು ಕೆ.ಆರ್.ಬೆಲ್ಲದ್ ಕಾಲೇಜಿನ ಪ್ರಾಚಾರ್ಯರಾಗಿದ್ದ ಎ.ಬಿ.ಹಿರೇಮಠ ಅವರ ೮೫ನೇ ಜನ್ಮದಿನೋತ್ಸವ ಹಾಗೂ `ಕರ್ತವ್ಯ ಶೀಲ' ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ. 

 

ಮುಂಡರಗಿಯ ಪ್ರಾಚಾರ್ಯ ಎ.ಬಿ.ಹಿರೇಮಠ ಅಭಿನಂದನ ಸಮಿತಿ ಇವರು ಆಯೋಜಿಸಿರುವ ಸಮಾರಂಭ ಬೆಳಿಗ್ಗೆ ೧೦ ಗಂಟೆಯಿAದ ಆರಂಭವಾಗಲಿದ್ದು, ದಿವ್ಯ ಸಾನಿಧ್ಯವನ್ನು ಮುಂಡರಗಿಯ ಶ್ರೀ ಜಗದ್ಗುರು ಅನ್ನದಾನೇಶ್ವರ ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಮ.ನಿ.ಪ್ರ. ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ವಹಿಸಲಿದ್ದಾರೆ. ಶಿರಹಟ್ಟಿ-ಬಾಳೆಹೊಸೂರು ಸಂಸ್ಥಾನಮಠದ ಶ್ರೀ ಮ.ನಿ.ಪ್ರ.ಜಗದ್ಗುರು ಫಕೀರದಿಂಗಾಲೇಶ್ವರ ಮಹಾಸ್ವಾಮಿಗಳ ಸಮ್ಮುಖದಲ್ಲಿ, ಮುಂಡರಗಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ಉತ್ತರಾಧಿಕಾರಿಗಳಾದ ಶ್ರೀ ಮ.ನಿ.ಪ್ರ.ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಸೇಗುಣಸಿ-ಬೆಳಗಾವಿ ವಿರಕ್ತಮಠದ ಶ್ರೀ ಮ.ನಿ.ಪ್ರ.ಮಹಾಂತಪ್ರಭು ಸ್ವಾಮಿಗಳು ಮತ್ತು ಹತ್ತಿಮತ್ತೂರು-ಕರ್ಜಗಿ ವಿರಕ್ತಮಠದ ಶ್ರೀ ಮ.ನಿ.ಪ್ರ. ನಿಜಗುಣ ಶಿವಯೋಗಿಗಳು ನೇತೃತ್ವ ವಹಿಸಲಿದ್ದಾರೆ.

 

ಕರ್ನಾಟಕ ಸರ್ಕಾರದ ಮಾಜಿ ಸಹಕಾರ ಸಚಿವರಾದ ಎಸ್.ಎಸ್.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆವ ಸಮಾರಂಭವನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರು ಅವರು ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ಮುಂಡರಗಿಯ ವಿಶ್ರಾಂತ ಪ್ರಾಚಾರ್ಯರಾದ ಪ್ರೊ. ಎಸ್. ಬಿ. ಕರಿಭರಮಗೌಡರ ಗ್ರಂಥ ಸಂಪಾದಕೀಯ ನುಡಿಗಳನ್ನಾಡಲಿದ್ದಾರೆ.

 

ಮುಖ್ಯ ಅತಿಥಿಗಳಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ರಹಮತ್ ತರೀಕೆರೆ, ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಮೌಲ್ಯ ಮಾಪನ ಕುಲಸಚಿವರಾದ ಡಾ. ಬಿ. ಎಲ್. ಲಕ್ಕಣ್ಣವರ, ಧಾರವಾಡದ ಪ್ರೊ. ಬಿ. ಎಸ್. ಶಿರೋಳ, ನರೇಗಲ್ ನ ವಿಶ್ರಾಂತ ಪ್ರಾಚಾರ್ಯ ಪ್ರೊ. ಬಿ. ಎಫ್. ಚೇಗರಡ್ಡಿ ಅವರು ಪಾಲ್ಗೊಳ್ಳಲಿದ್ದಾರೆ. ಹಿರೇಕೇರೂರಿನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿ. ಎಫ್. ದೊಡ್ಡಮನಿ, ಅಮೇರಿಕಾದ ಸಿಯಾಟೆಲ್ ನ ಅಕ್ಕಮಹಾದೇವಿ ಹಂಪಿಹೊಳಿ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಲಿದ್ದಾರೆ.

 

ಕೊಪ್ಪಳದ ಡಾ. ಅಲ್ಲಮಪ್ರಭು ಬೆಟ್ಟದೂರು, ಹುಲಕೋಟಿಯ ಡಾ. ಅರ್ಜುನ ಗೊಳಸಂಗಿ, ಗಜೇಂದ್ರಗಡದ ಪ್ರೊ. ಬಿ. ಎ. ಕೆಂಚರಡ್ಡಿ, ಹುಬ್ಬಳ್ಳಿಯ ಡಾ. ಲಿಂಗರಾಜ ಅಂಗಡಿ, ಗದುಗಿನ ಪ್ರಾ. ಜಿ. ಬಿ. ಪಾಟೀಲ, ಪ್ರೊ. ಕೆ. ಎಚ್. ಬೇಲೂರ, ಪ್ರೊ. ಎನ್. ಎಂ. ಮುಲ್ಲಾ, ಜಯದೇವ ಮೆಣಸಗಿ, ಪ್ರೊ. ಸೋಮಶೇಖರ ಕನಕಾಚಲ, ವಿಜಯಪುರದ ಡಾ. ಎನ್. ಬಿ. ಪಾಟೀಲ, ಕೋಗನೂರಿನ ಎಚ್. ಎಸ್. ಕೆಂಗೊAಡೆಪ್ಪನವರ, ಲಕ್ಷೆö್ಮÃಶ್ವರದ ಲಲಿತಮ್ಮ ಚ. ಕೆರಿಮನಿ ಗೌರವ ಉಪಸ್ಥಿತಿ ವಹಿಸಲಿದ್ದಾರೆ.

 

ಮೇರುಗುರು ಪ್ರಾ.ಎ.ಬಿ.ಹಿರೇಮಠ ಅವರ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಅನಿಸಿಕೆ ವ್ಯಕ್ತವಾಗಲಿದ್ದು ಮುಂಡರಗಿಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾಗೇಶ ಹುಬ್ಬಳ್ಳಿ, ಹುಬ್ಬಳ್ಳಿಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಯಮನಪ್ಪ ಕೆ., ಕೊಪ್ಪಳದ ಡಿವೈಎಸ್‌ಪಿ ವಿ.ಎಚ್.ನಾಯಕ್, ವಕೀಲರಾದ ಎಸ್.ಎಚ್.ಸುರಪುರ, ಬಳ್ಳಾರಿ ಗುಪ್ತಚರ ವಾರ್ತೆ ಅಧೀಕ್ಷಕರಾದ ಎಸ್.ಎಚ್.ತಳವಾರ, ಬೆಂಗಳೂರು ಸಿಐಡಿ ವಿಭಾಗದ ಡಿವೈಎಸ್‌ಪಿ ಮಹೇಶ್ವರಗೌಡ, ಹೊಸಪೇಟೆಯ ಪ್ರಾಚಾರ್ಯರಾದ ಅನಸೂಯ ಅಂಗಡಿ, ಅಳವಂಡಿಯ ಪ್ರಾಚಾರ್ಯರಾದ ಡಾ.ನಾಗರಾಜ ಹಾವಿನಾಳ, ಬೆಳಗಾವಿಯ ಬಸವರಾಜ ಗಾರ್ಗಿ, ಬೆಂಗಳೂರಿನ ಶಾಂತಕುಮಾರ ಪೂಜಾರ, ಹರಪನಹಳ್ಳಿಯ ನಿವೃತ್ತ ಪ್ರಾಚಾರ್ಯ ಗಂಗಪ್ಪ, ಪೇಠಾಲೂರು ಪ್ರಾಚಾರ್ಯರಾದ ಎಸ್.ವೈ.ಬೀಳಗಿ, ಹಿರೇವಡ್ಡಟ್ಟಿಯ ಪ್ರಾಚಾರ್ಯರಾದ ಹನುಮಂತಪ್ಪ ಬಿ.ಪೂಜಾರ, ಕಾರಟಗಿಯ ಅಧ್ಯಾಪಕರಾದ ಕಳಕೇಶ ಗುಡ್ಲಾನೂರು, ಬಾಗಲಕೋಟೆಯ ಪ್ರಾಧ್ಯಾಪಕರಾದ ಡಾ.ಪ್ರದೀಪ್ ಜೋಶಿ, ಗಂಗಾವತಿಯ ಎಲ್.ಐ.ಸಿ.ಅಧಿಕಾರಿ ಆರ್ ವೈ ಕುರಿ, ಬೆಳ್ಳಟ್ಟಿಯ ಆರ್.ಆರ್.ಗಡ್ಡದೇವರಮಠ, ಮುಂಡರಗಿಯ ಪ್ರೊ.ಎಸ್.ಎಂ.ಹೊಸಮಠ, ಎಲ್ಲಪ್ಪ ಕರಡಿ, ಸಹಾಯಕ ನಿರ್ದೇಶಕರಾದ ಉದಯಕುಮಾರ ಯಲಿವಾಳ, ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ವೀರೇಶ ಸಜ್ಜನ, ಅಳವಂಡಿಯ ಡಾ.ಸಂಗಯ್ಯ ಶಿರೂರುಮಠ, ಗದುಗಿನ ಪ್ರಾಚಾರ್ಯರಾದ ಡಾ.ಬಿ.ಬಿ.ಹೊಳಗುಂದಿ, ಗಿಣಗೇರಿಯ ಪ್ರಾಚಾರ್ಯರಾದ ವೀರೇಶ ಕಾತರಕಿ, ಕೊಪ್ಪಳ ಲೋಕೋಪಯೋಗಿ ಇಲಾಖೆಯ ಮಲ್ಲಾರಾವ್ ಕುಲಕರ್ಣಿ, ದಾವಣಗೆರೆಯ ಉಪನ್ಯಾಸಕರಾದ ಪ್ರೊ.ಎಚ್.ಎಸ್.ಚವಟಗಿ, ಕೊಪ್ಪಳದ ವೆಂಕಟೇಶ್ ಬೋಗಾಪುರ ಇವರು ಮಾತನಾಡಲಿದ್ದಾರೆ. 

 

ಪ್ರಾ.ಎ.ಬಿ.ಹಿರೇಮಠ:

 

ಅವಿಭಜಿತ ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಿಜೂರು ಗ್ರಾಮದವರಾದ ಅನ್ನದಾನಯ್ಯ ಬಸಯ್ಯ ಹಿರೇಮಠ ಇವರು ಪ್ರಾಚಾರ್ಯ ಎ. ಬಿ. ಹಿರೇಮಠ ಎಂದೇ ಚಿರಪರಿಚಿತರು. ಇವರ ಚಿಕ್ಕಪ್ಪ ವೀರಯ್ಯನವರು ಸ್ವಾತಂತ್ರ‍್ಯ ಹೋರಾಟಗಾರ ಮೈಲಾರ ಮಹಾದೇವರೊಂದಿಗೆ ಹಾವೇರಿ ಜಿಲ್ಲೆಯ ಹೊಸರಿತ್ತಿಯ ಗೋಲಿಬಾರಿನಲ್ಲಿ ವೀರಮರಣ ಹೊಂದಿದವರು. ಇವರದು ಸ್ವಾತಂತ್ರ‍್ಯ ಹೋರಾಟಗಾರರ ಹಿನ್ನೆಲೆ ಇರುವ ಕುಟುಂಬ. ಹಾಗಾಗಿ ಆ ಹೋರಾಟದ ಮನೋಭಾವ ಅವರಲ್ಲಿ ಸ್ಥಾಯಿಯಾಗಿರುವುದನ್ನು ಕಾಣಬಹುದು. ಕ್ರಿ.ಶ.೧೯೪೧ ರಲ್ಲಿ ಜನಿಸಿದ ಇವರು ಕೋಗನೂರಿನಲ್ಲಿ ೫ನೇ ತರಗತಿವರೆಗೆ, ೬ ಮತ್ತು ೭ನೇ ತರಗತಿವರೆಗೆ ಮುಂಡರಗಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ, ೮ ಮತ್ತು ೯ನೇ ತರಗತಿಗಳನ್ನು ಅನ್ನದಾನೀಶ್ವರ ಪ್ರೌಢಶಾಲೆಯಲ್ಲಿ ಓದಿದರು. ೧೦ ಮತ್ತು ೧೧ನೇ ತರಗತಿಯನ್ನು ಶಿರಹಟ್ಟಿಯಲ್ಲಿ ಪಡೆದುಕೊಂಡರು. ಮುಂದೆ ಧಾರವಾಡದ ಮುರುಘಾಮಠದಲ್ಲಿದ್ದು ಪೂಜ್ಯ ಮೃತ್ಯುಂಜಯ ಹಾಗೂ ಮಹಾಂತಪ್ಪಗಳ ಸಾನಿಧ್ಯದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ ಪದವಿಯನ್ನು, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

 

೧೯೬೭-೬೮ ರಲ್ಲಿ ಹಾನಗಲ್ಲಿನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮತ್ತು ಮರು ವರ್ಷವೇ ಬೈಲಹೊಂಗಲದ ಕಿತ್ತೂರ ರಾಣಿ ಚೆನ್ನಮ್ಮ ಎಜುಕೇಶನಲ್ ಸೊಸೈಟಿಯಲ್ಲಿ ಒಂದು ವರ್ಷ, ಮೂರು ವರ್ಷ ಚಿಕ್ಕೋಡಿಯಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ೧೯೭೦ರಲ್ಲಿ ಮೇ ೧೭ ರಂದು ಹುಬ್ಬಳ್ಳಿಯ ಅನ್ನಪೂರ್ಣಾದೇವಿಯವರನ್ನು ಕೈಹಿಡಿದ ಇವರಿಗೆ, ಮಗಳು ರೇಖಾ ಹಾಗೂ ಮಗ ವೀರೇಂದ್ರ ಕುಮಾರ್ ಜನಿಸಿದರು. ಮಗಳು ಸದ್ಯ ಆಸ್ಟ್ರೇಲಿಯಾದಲ್ಲಿ ಅಧ್ಯಾಪಕಿಯಾಗಿ, ಮಗ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಎ. ಬಿ. ಹಿರೇಮಠ ಅವರು ಪೂಜ್ಯ ಅನ್ನದಾನೀಶ್ವರರ ಕೃಪಾಶೀರ್ವಾದದಿಂದ ೧೯೭೭ರಲ್ಲಿ ಅನ್ನದಾನಿಶ್ವರ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಂತರ ಆಗಸ್ಟ್ ೧೧ ೧೯೮೦ ರಲ್ಲಿ ಆರಂಭವಾದ ಕ.ರಾ. ಬೆಲ್ಲದ ಮಹಾವಿದ್ಯಾಲಯದ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ, ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳನ್ನು ಏರ್ಪಡಿಸಿದ್ದಾರೆ.

 

ಕನ್ನಡ ಸಂಘ ಸ್ಥಾಪನೆ ಮಾಡಿ ಅದರ ಅಡಿಯಲ್ಲಿ ೧೬ ಕೃತಿಗಳನ್ನು ಪ್ರಕಟಿಸಿದರು. ಮೈಲಾರ ಮಹಾದೇವ ಇವರ ಸ್ವತಂತ್ರ ಕೃತಿ. ಅಲ್ಲದೆ ಶಾಲಾ ದಿನಗಳಲ್ಲಿ ಸ್ವತಃ ನಾಟಕಗಳಲ್ಲಿ ಅಭಿನಯಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಂತವರು. ಅಲ್ಲದೆ ಕಾರ್ಲ್ ಮಾರ್ಕ್ಸ್ ಶತಮಾನೋತ್ಸವ ಕುರಿತು ವಿಚಾರ ಸಂಕಿರಣ, ೧೯೯೯ ರಲ್ಲಿ ಎರಡನೆಯ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನ, ಕರ್ನಾಟಕ ಜಾನಪದ ಸಾಹಿತ್ಯ ಸಮ್ಮೇಳನ ಏರ್ಪಡಿಸಿದ್ದರು. ಮಹಾವಿದ್ಯಾಲಯದಲ್ಲಿ ಎನ್.ಸಿ.ಸಿ., ಎನ್. ಎಸ್. ಎಸ್. ಘಟಕಗಳ ಸ್ಥಾಪನೆ ಮಾಡಿದರು. ಈ ಮುಖೇನ ವಿಶ್ವವಿದ್ಯಾಲಯ ಮಟ್ಟದ ಕ್ಯಾಂಪುಗಳನ್ನು ಆಯೋಜಿಸಿದ್ದಾರೆ. ಜ. ಅ. ಸಮಿತಿಯ ಆಡಳಿತಾಧಿಕಾರಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನ ಆಜೀವ ಸದಸ್ಯರಾಗಿ, ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಎರಡು ಗದಗ ಜಿಲ್ಲಾ ಸಮ್ಮೇಳನಗಳನ್ನು ಸಂಘಟಿಸಿದ್ದಾರೆ. ಅಲ್ಲದೆ ಇವರ ಸಂಘಟನಾ ಚತುರತೆಯ ಫಲವಾಗಿ ೨೦೧೦ರಲ್ಲಿ ಗೀತಾ ನಾಗಭೂಷಣ ಅವರ ಸರ್ವಾಧ್ಯಕ್ಷತೆಯಲ್ಲಿ ಗದಗ ಜಿಲ್ಲೆಯ ಪ್ರಪ್ರಥಮ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನೆರವೇರಿತು. ಇಂಥ ಸಾಂಸ್ಕೃತಿಕ ನಾಯಕ, ಮಾರ್ಗ ಪ್ರವರ್ತಕ, ಮೇರು ಗುರುವಿಗೆ, ಅಭಿನಂದನ ಸಮಾರಂಭ ಏರ್ಪಡಿಸಿದ್ದು ಸರ್ವರೂ ಆಗಮಿಸಿ ಅಭಿನಂದನೆ ಹಾಗೂ ಗುರುವಂದನೆ ಸಲ್ಲಿಸಿ ಧನ್ಯರಾಗುವಂತೆ ಸ್ವಾಗತ ಸಮಿತಿಯ ಅಧ್ಯಕ್ಷರಾದ ಎಸ್.ಎಸ್.ಪಾಟೀಲ್, ಪದಾಧಿಕಾರಿಗಳಾದ ನಾಗೇಶ ಹುಬ್ಬಳ್ಳಿ, ಈಶ್ವರಪ್ಪ ಹಂಚಿನಾಳ, ಕೊಟ್ರೇಶ ಅಂಗಡಿ, ಡಾ.ಬಿ.ಜಿ.ಜವಳಿ, ಡಾ.ಡಿ.ಸಿ.ಮಠ ಮತ್ತು ಷಡಕ್ಷರಿ ಅಡವಯ್ಯನಮಠ, ಎಚ್.ಎ.ಗಾಯತ್ರಿದೇವಿ, ಡಾ.ಎಚ್.ಎ.ವೀರೇಂದ್ರಕುಮಾರ, ಶರಣಬಸವ ಹಿರೇಮಠ ಸಹೋದರ, ಸಹೋದರಿಯರು ತಿಳಿಸಿದ್ದಾರೆ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯ ದಶಮಿಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದಸರಾ ಹಾಗೂ ಆಯುಧ ಪೂಜೆಜಾತಿಭೇದವಿಲ್ಲದೆ ದಲಿತರ ಮನೆಯಲ್ಲಿ ಊಟ ಸವಿದ ಡಾ. ಬಿ. ಯೋಗೇಶ್ ಡಿಸ್ಕವರಿ ವಾಹಿನಿಯಲ್ಲಿ ಕೆಐಐಟಿ ಸಾಧನೆ ಬಣ್ಣನೆ ಕನ್ನಡಿಗರು ವಿಶಾಲತೆ, ಸಾಮರಸ್ಯ ಉಳ್ಳವರಾಗಿರುವುದರಿಂದಲೇ ಕನ್ನಡಕ್ಕೆ ಕಂಟಕ!ಹಾಡಿನ ಚಿತ್ರೀಕರಣದೊಂದಿಗೆ ‘ಚಂದ್ರಗಿರಿ’ ಚಿತ್ರೀಕರಣ ಮುಕ್ತಾಯಸರ್ವೋದಯ ಮಹಾವಿದ್ಯಾಲಯದ ಸೌಕರ್ಯ, ಶೈಕ್ಷಣಿಕ ಸಾಧನೆಗೆ ದಾವಣಗೆರೆ ವಿವಿ ಉಪಕುಲಪತಿ ಮೆಚ್ಚುಗೆಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ