LIVE TV StateNationalPoliticsCrimeEntertainmentSportsEducationFINANCE & TAXATION
Districts

ರೈಲ್ವೇ ಸೌಲಭ್ಯಗಳಿಗಾಗಿ ಮನವಿ

ಬಳ್ಳಾರಿ : ನಗರದ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದ ಸಿಕಂದರಾಬಾದ್ ದಕ್ಷಿಣ ಮಧ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಸಂಜಯ್ ಕುಮಾರ್ ಶ್ರೀವಾತ್ಸವ ಹಾಗೂ ಗುಂತಕಲ್ ರೈಲ್ವೆ ವಿಭಾಗದ ಮ್ಯಾನೇಜರ್ ಚಂದ್ರಶೇಖರ್ ಗುಪ್ತ ಇವರಿಗೆ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಹಲವು ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದೆ.

ಸಮಿತಿಯ ಅಧ್ಯಕ್ಷ ಕೆಎಂ ಮಹೇಶ್ವರ ಸ್ವಾಮಿ ನೇತೃತ್ವದಲ್ಲಿ ಮನವಿ ಸಲ್ಲಿಸಿ, ಗುಂತಕಲ್ ರೈಲ್ವೆ ನಿಲ್ದಾಣದಿಂದ ದೇಶದ ನಾನಾ ಭಾಗಗಳಿಗೆ ಸಂಚರಿಸಲು ಸಾಕಷ್ಟು ರೈಲು ಗಳ ವ್ಯವಸ್ಥೆ ಇದ್ದು ಅಲ್ಲಗೆ ಬಳ್ಳಾರಿ ಭಾಗದ ಜನತೆ ಸಂಚರಿಸಲು ಸಾಕಷ್ಟು ರೈಲುಗಳ ಸೌಲಭ್ಯ ಇರುವುದಿಲ್ಲ ಅದಕ್ಕಾಗಿ ಬಳ್ಳಾರಿಯಿಂದ ಗುಂತಕಲ್ ಗೆ ಹೋಗಿ ಬರಲು ದಿನವೊಂದಕ್ಕೆ ನಾಲ್ಕು ರೈಲುಗಳ ವ್ಯವಸ್ಥೆ ಆಗಬೇಕು. ಕೊಲ್ಲಾಪುರ್ ಬೆಳಗಾವಿ ಮನುಗೂರು ದಿನನಿತ್ಯ ಎಕ್ಸ್ಪ್ರೆಸ್ ರೈಲುಪುನರ್ ಆರಂಭ ಆಗಬೇಕು. ಬಳ್ಳಾರಿ ಹಗರಿ ಮೂಲಕ ಆದೋನಿಗೆ ನೇರ ರೈಲ್ವೆ ಸಂಪರ್ಕ ಕಲ್ಪಿಸಲು ಆಲೂರು ಮಾರ್ಗವಾಗಿ ನೂತನ ಬ್ರಾಡ್ ಗೆಜ್ ರೈಲು ಮಾರ್ಗ ಆರಂಭವಾಗಬೇಕು.

ಜೊತೆಗೆ ನಗರದ ರಾಘವೇಂದ್ರ ಕಾಲೋನಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಿಂದ ಬಸವೇಶ್ವರ ನಗರದ ಪಕ್ಕದಿಂದ ಸಂಗನಕಲ್ಲು ರಸ್ತೆ ಸಂಪರ್ಕಿಸಲು ರೈಲ್ವೆ ಹಳಿ ಕಿಲೋಮೀಟರ್ ನಂಬರ್ 211 ಹತ್ತಿರ 30 ಅಡಿ ಅಗಲದ ಮೇಲ್ ಸೇತುವೆ ನಿರ್ಮಿಸಬೇಕು ಎಂಬ ಬೇಡಿಕೆ ಸಲ್ಲಿಸಲಾಯ್ತು.

ಈ ವೇಳೆ ಸಮಿತಿಯ ಅಧ್ಯಕ್ಷ ಕೆ ಯಂ ಮಹೇಶ್ವರ ಸ್ವಾಮಿ, ರೈತ ಮುಖಂಡರಾದ ದರೂರ್ ಪುರುಷೋತ್ತಮ್ ಗೌಡ, ಪಿ.ಎಸ್. ಸೋಮಲಿಂಗನಗೌಡ ಸಮಿತಿಯ ಪದಾಧಿಕಾರಿಗಳಾದ ಪಿ. ಬಂಡೆಗೌಡ ಹೆಚ್. ಕೆ. ಗೌರಿಶಂಕರ ಸ್ವಾಮಿ, ಗಂಗಾವತಿ ವೀರೇಶ್ ಕಣೆಕಲ್ ಎರ್ರಿಸ್ವಾಮಿ, ಸಿ.ಎಂ. ಗಂಗಾಧರಯ್ಯ, ಜಾಲಿಹಾಳ ಶ್ರೀಧರ್ ಗೌಡ, ಶಿವಶಂಕರಗೌಡ ಬಿಸಲಳ್ಳಿ ಎಸ್. ಪ್ರಸಾದ್, ಬಸವರಾಜ್, ರಾಮಕೃಷ್ಣ ಮೊದಲಾದವರು ಇದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ