LIVE TV StateNationalPoliticsCrimeEntertainmentSportsEducationFINANCE & TAXATION
Districts

ವಿದ್ಯಾರ್ಥಿಗಳ ಪಾಲಿಗೆ ಇದ್ದು ಇಲ್ಲದಂತಿರುವ ನಗರದ ಬಿ.ಸಿ.ಎಂ ಹಾಸ್ಟೆಲ್ ಗಳು

ಬಳ್ಳಾರಿ : ದೂರದ ಹಳ್ಳಿಗಳಿಂದ ಉನ್ನತ ಅಭ್ಯಾಸಕ್ಕಾಗಿ ಧಾವಿಸಿ ಬರುವ ಬಡ ವಿದ್ಯಾರ್ಥಿಗಳಿಗಾಗಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಬಳ್ಳಾರಿ ನಗರದಲ್ಲಿ ಮೆಟ್ರಿಕ್ ನಂತರದ 16 ಬಾಲಕರ ಹಾಸ್ಟೆಲ್ ಮತ್ತು 7 ಬಾಲಕಿಯರ ಹಾಸ್ಟೆಲ್ ಗಳನ್ನು ನಿರ್ಮಿಸಿದೆ. ಅವುಗಳ ಪ್ರವೇಶಾತಿಗೆ ಕಳೆದ ಮೇ - ಜೂನ್ ನಲ್ಲಿ ಆನ್ಲೈನ್ ಅರ್ಜಿ ಕರೆಯಲಾಗಿತ್ತು.ವಿದ್ಯಾರ್ಥಿಗಳ ಆದ್ಯತೆಗನುಸಾರ  ಹಾಸ್ಟೆಲ್ ಗಳ ಆಯ್ಕೆಗಾಗಿ ಅವಕಾಶವನ್ನೂ ಕಲ್ಪಿಸಲಾಗಿತ್ತು. ಆದರೆ ವಿದ್ಯಾರ್ಥಿಗಳ ಪಾಲಿಗೆ ವರವಾಗಬೇಕಿದೆ ಇವುಗಳು ವ್ಯರ್ಥ ಭರವಸೆಗಳಾಗಿವೆ. 

ಇಲಾಖೆಯು ನಿನ್ನೆ ಇಲಾಖೆ ಹೊರಡಿಸಿದ ಆಯ್ಕೆ ಪಟ್ಟಿಯನ್ನು ನೋಡಿದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ನಗರದ ಓ.ಬಿ.ಸಿ ಇಲಾಖೆಯು ಆಯ್ಕೆ ಪ್ರಕ್ರಿಯೆಯಲ್ಲಿ ಅವೈಜ್ಞಾನಿಕ ನಿಯಮವನ್ನು  ಅನುಸರಿಸಿದೆ ಎಂದು ಆರೋಪಿಸಿದ್ದಾರೆ.



ಏಕೆಂದರೆ ವಿದ್ಯಾರ್ಥಿಗಳು ತಮ್ಮ ಕಾಲೇಜಿಗೆ ಹತ್ತಿರವಿರುವ ಹಾಸ್ಟೆಲ್ ಗಳಿಗೆ  ಮೊದಲ ಆದ್ಯತೆ ನೀಡಿದ್ದರು, ಹೆಚ್ಚು ಅಂಕ ಪಡೆದಿದ್ದರು ಆದ್ಯತೆಯ ಹಾಸ್ಟೆಲ್ ಗಳಿಗೆ ಆಯ್ಕೆಯಾಗದಿರುವುದು ವಿದ್ಯಾರ್ಥಿಗಳಲ್ಲಿ ಅಚ್ಚರಿ ಮೂಡಿಸಿದೆ. ಇದಲ್ಲದೇ ಕಾಲೇಜಿನಿಂದ 5-6 ಕಿ.ಮೀ ದೂರವಿರುವ ಮತ್ತು ಬಸ್ ಸೌಕರ್ಯವೂ ಇಲ್ಲದ ಹಾಸ್ಟೆಲ್ ಗಳಲ್ಲಿ ಪ್ರವೇಶ ಪಡೆಯಲಿಚ್ಚಿಸದೆ ಅನೇಕ ವಿದ್ಯಾರ್ಥಿಗಳು ಹಳ್ಳಿಗಳಿಂದಲೇ ದಿನನಿತ್ಯ ಅಲೆಯಲು ಸಿದ್ಧರಾಗಿದ್ದಾರೆ.

ಈ ಮೂಲಕ ಹಳ್ಳಿ ಮಕ್ಕಳ ಪಾಲಿಗೆ ಬಿ.ಸಿ.ಎಂ ಹಾಸ್ಟೆಲ್ ಗಳು ಇದ್ದು ಇಲ್ಲದಂತಾಗಿವೆ. ಹಾಗಾಗಿ ಕೂಡಲೇ ಆಯ್ಕೆಪಟ್ಟಿಯನ್ನು ಪರಿಷ್ಕರಿಸಿ ಮತ್ತು ಗೌತಮ ನಗರದಂತಹ ದೂರದ ಹಾಸ್ಟೆಲ್ ಗಳಿಗೆ ಕೂಡಲೇ ಸರ್ಕಾರಿ ಬಸ್ ಸೌಕರ್ಯ ಕಲ್ಪಿಸಿ ಎಂದು ಜನಪ್ರತಿನಿಧಿಗಳಿಗೆ, ಸಂಬಂಧ ಪಟ್ಟ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಈ ಮೂಲಕ ಆಗ್ರಹಿಸಿದ್ದಾರೆ.

 
"ಎರಡು ದಿನ ತಡವಾದರೂ ಸರಿ. ಆಯ್ಕೆ ಪಟ್ಟಿಯನ್ನು ಪ್ರಿಯಾರಿಟಿ ಮತ್ತು ಮೇರಿಟ್ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಅವರವರ ಕಾಲೇಜಿಗಳಿಗೆ ಹತ್ತಿರವಿರುವ ಹಾಸ್ಟೆಲ್ ಗಳಿಗೆ ಆಯ್ಕೆ ಮಾಡಿ ಪಟ್ಟಿಯನ್ನು ಪ್ರಕಟ ಮಾಡಿ. ಇಲ್ಲವಾದರೆ ವಿದ್ಯಾರ್ಥಿಗಳು ಪೋಷಕರಿಗೆ ಹೊರೆಯಾಗುತ್ತಾರೆ. ಆಗ ನಿಜಕ್ಕೂ ಹಾಸ್ಟೆಲ್ ಗಳು ವಿದ್ಯಾರ್ಥಿಗಳ ಪಾಲಿಗೆ ಇದ್ದು ಇಲ್ಲದಂತಾಗುತ್ತವೆ."

   - ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ, ರಂಗ ಸಂಶೋಧಕ, ಬಳ್ಳಾರಿ.



 
"ನಾನು ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿ. ನಾನು  ಶೇಕಡ 73% ಅಂಕ ಪಡೆದಿದ್ದೇನೆ. ನನ್ನ ಕಾಲೇಜಿಗೆ ಹತ್ತಿರವಿರುವ ರೇಡಿಯೋ ಪಾರ್ಕ್  ಜನರಲ್ ಹಾಸ್ಟೆಲ್ ಗೆ ಮೊದಲ ಆದ್ಯತೆ ನೀಡಿದ್ದರು. ನನ್ನನ್ನು ದೂರದ ಮತ್ತು ಬಸ್ ಸೌಕರ್ಯವಿಲ್ಲದ ಗೌತಮ್ ನಗರದ ಬಿ.ಸಿ.ಎಂ ಹಾಸ್ಟೆಲ್ ಗೆ ಆಯ್ಕೆ ಮಾಡಲಾಗಿದೆ. ಅಲ್ಲದೆ ನನ್ನದೆ ಕಾಲೇಜಿನ 48 % ಅಂಕ ಪಡೆದ ವಿದ್ಯಾರ್ಥಿಯೊಬ್ಬನನ್ನು ರೇಡಿಯೋ ಪಾರ್ಕ್ ಹಾಸ್ಟೆಲ್ ನಂತಹ ಹತ್ತಿರದ ಹಾಸ್ಟೆಲ್ ಆಯ್ಕೆ ಮಾಡಲಾಗಿದೆ. ಯಾವ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂದು ತಿಳಿಯುತ್ತಿಲ್ಲ."

ಹೆಸರು ಹೇಳಲಿಚ್ಚಿಸದ ವಿದ್ಯಾರ್ಥಿ.


Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ