ಕಂಪ್ಲಿ: ಕಂಪ್ಲಿ ಪುರಸಭೆಯ15ನೇ ವಾರ್ಡಿನ ಮಾಜಿ ಸದಸ್ಯರು ಮತ್ತು ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಛಲವಾದಿ ಮಹಾಸಭಾ ಸಂಘಟನೆಯನ್ನು ಸ್ಥಾಪಿಸಿ, ಬೆಳೆಸುವಲ್ಲಿ ಪ್ರಮುಖರು, ಹಿರಿಯ ಹೋರಾಟಗಾರ ಎಂ.ಸಿ. ಮಾಯಪ್ಪ (75) ಬುಧವಾರ ಸಂಜೆ ನಿಧನರಾದರು. ಇವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು, ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಗುರುವಾರ ಮಧ್ಯಾಹ್ನ 12.30 ಗಂಟೆಗೆ ಕಂಪ್ಲಿಯ ಸಾರ್ವಜನಿಕ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.