LIVE TV StateNationalPoliticsCrimeEntertainmentSportsEducationFINANCE & TAXATION
Entertainment News

ಚಿತ್ರ ಸಾಹಿತಿ ವಿ.ನಾಗೇಂದ್ರಪ್ರಸಾದ ನಿರ್ದೇಶನದ ‘ಶುಭಲಾಭ’ ಚಲನಚಿತ್ರಕ್ಕೆ ಮುಹೂರ್ತ

ಬೆಂಗಳೂರು: ರಿಯಾ ಕಂಬೈನ್ಸ್ ಲಾಂಛನದ ಅಡಿಯಲ್ಲಿ ಶ್ರೀಮತಿ ಯಮುನಾ ಪ್ರಸಾದ್ ನಿರ್ಮಿಸುತ್ತಿರುವ ‘ಶುಭಲಾಭ’ ಹೊಸ ಕನ್ನಡ ಚಲನ ಚಿತ್ರದ ಮುಹೂರ್ತ ಸಮಾರಂಭ ಮುದ್ದಿನ ಪಾಳ್ಯದ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನೆರವೇರಿತು.

news_1792772748_0_278.webp

 

ಕನ್ನಡ ಚಿತ್ರರಂಗದ ಹೆಸರಾಂತ ಚಿತ್ರ ಸಾಹಿತಿ ಕವಿರತ್ನ ಡಾ. ವಿ.ನಾಗೇಂದ್ರ ಪ್ರಸಾದ್ ಈ ಬಾರಿ ನಿರ್ದೇಶನದ ಜೊತೆಗೆ ‘ಶುಭಲಾಭ’

ಚಿತ್ರದ ಮೂಲಕ ಪುತ್ರ ಉತ್ಸವ್ ಪ್ರಸಾದ್‌ರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸ್ತಿರೋದು ವಿಶೇಷ . ವಿಜಯ ದಶಮಿ ಹಬ್ಬದ ಪ್ರಯುಕ್ತ ಉದ್ಯಮಕ್ಕೆ ಶುಭ ಸೂಚಿಸುವ..ಲಾಭ ನಿರೀಕ್ಷಿಸುವ ಕಾರ್ಯಕ್ಕೆ ನಾಗೇಂದ್ರ ಪ್ರಸಾದ ಚಾಲನೆ ನೀಡಿದ್ದು , ಚಿತ್ರದ ಮುಹೂರ್ತದಲ್ಲಿ ಲವ್ಲೀ ಸ್ಟಾರ್ ಪ್ರೇಮ್ ಆರಂಭ ಫಲಕ ತೋರಿಸಿದರೆ, ಹಿರಿಯ ನಿರ್ದೇಶಕ ಎಸ್. ಮಹೇಂದರ್ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭಕೋರಿದರು. ಈ ಸಂದರ್ಭದಲ್ಲಿ ಚಿತ್ರರಂಗದ ಪ್ರಮುಖರು ,ಚಿತ್ರತಂಡ ಉಪಸ್ಥಿತರಿದ್ದರು. ಹಿರಿಯ ನಟ ದತ್ತಣ್ಣ ಬಹು ಮುಖ್ಯ ಪಾತ್ರದಲ್ಲಿದ್ದು, ಅವರೊಟ್ಟಿಗೆ ಉತ್ಸವ್ ಪ್ರಸಾದ್ ನಾಯಕ ನಟನಾಗಿ ಮೊದಲ ಸಲ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ವಿಜಯಪುರ, ಬಾದಾಮಿ, ಬಾಗಲಕೋಟೆ , ಸಿಂದಗಿ ಭಾಗದಲ್ಲಿ ನಡೆಯಲಿದ್ದು ಸದ್ಯದಲ್ಲೇ ಚಿತ್ರೀಕರಣಕ್ಕೆ ಚಾಲನೆ ನೀಡಲಾಗುತ್ತಿದೆ. ಉತ್ತರ ಕರ್ನಾಟಕದ ಸ್ಥಳೀಯ ಅನುಭವಿಕ, ರಂಗಭೂಮಿಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ. ಚಿತ್ರದಲ್ಲಿ ಮೂರು ಹಾಡುಗಳಿವೆ ಎಂದು  ಚಿತ್ರ ಸಾಹಿತಿ, ನಿರ್ದೇಶಕ ವಿ.ನಾಗೇಂದ್ರ ಪ್ರಸಾದ ಹೇಳಿದರು.

news_1792772732_0_980.webp

 

ಉಪ್ಪಿ ,ವಿದ್ಯ ನಾಗೇಶ್ ಛಾಯಾಗ್ರಹಣ , ವಿಜಯಾನಂದ್ ಸಂಭಾಷಣೆ, ವಿ. ಹರಿಕೃಷ್ಣ ಸಂಗೀತ, ಸುರೇಶ್ ಅರಸು ಸಂಕಲನ, ವಿನ್ಯಾಸ ಸಾಕ್ಷಿ ಶಿವು, ಪತ್ರಿಕಾ ಸಂಪರ್ಕ ಪ್ರವೀಣ್ ಏಕಾಂತ್ , ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಸಹಾಯಕ ನಿರ್ದೇಶನ ಪವನ್ ರಾವ್,ಚೇತನ್ ಪಡುಕೋಣೆ, ಕಥೆ ಚಿತ್ರಕಥೆ ಸಾಹಿತ್ಯ ನಿರ್ದೇಶನ ಡಾ.ವಿ ನಾಗೇಂದ್ರ ಪ್ರಸಾದ್ ಅವರದಿದ್ದು ನಿರ್ಮಾಣ ನಿರ್ವಹಣೆ ಹರಿಹರನ್ ಬಿಪಿ ಮತ್ತು ಸುನಿಲ್ ಅವರದಿದೆ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೊಪ್ಪಳ ; ಎಸ್.ಐ.ಆರ್ ರದ್ದುಪಡಿಸಲು ಆಗ್ರಹಿಸಿ ಬೃಹತ್ ಪ್ರತಿರೋಧ ‘ತಿರಂಗಾ ಯಾತ್ರೆ’ಡಂಬಳ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ನವರ ಜಯಂತಿ ಆಚರಣೆನಾಳೆ ನಡೆಯುವ ಪ್ರತಿಭಟನೆಗೆ ಪಕ್ಷಾತೀತವಾಗಿ ಬಾಗವಹಿಸಿ : ಮಲ್ಲು ಚಾನಕೋಟಿರಕ್ತದಾನ ಮತ್ತು ರಕ್ತದ ಗುಂಪು ತಪಾಸಣೆಯ ಮಹತ್ವಪದವೀಧರರು ಪ್ರಜಾಪ್ರಭುತ್ವದ ಬಲವರ್ಧನೆಗೆ ಕೈಜೋಡಿಸಬೇಕು: ಆನಂದ್ ಎನ್.ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ರಾಣಿ ಬೆಳವಡಿ ಮಲ್ಲಮ್ಮ ಸ್ಮರಣಾರ್ಥ ಭಾರತಿದರ್ಶ ಫೌಂಡೇಶನ್ನಿಂದ 100 ಉಚಿತ ಕುಡಿಯುವ ನೀರಿನ ಸೇವೆಪ್ರಣಿತಾ ಪಿ. ರಂಗಪ್ರವೇಶ — ನೃತ್ಯ ವೈಭವದ ಅನನ್ಯ ಅನಾವರಣಮಾನಸಿಕ ಆರೋಗ್ಯ ಸೇವೆಯನ್ನು ಪಡೆಯಲು ಯಾರು ಹಿಂದೇಟು ಹಾಕಬಾರದು. :ಡಾ ನಂದಿತಾ ಎಮ್ ಎನ್. ನಾಡಕಾರ್ಯಾಲಯಕ್ಕೆ ನಿರ್ಮಿಸಿದ ಕಾಂಪೌಂಡ್ನ ಉದ್ಘಾಟನೆಚಿತ್ರ ಸಾಹಿತಿ ವಿ.ನಾಗೇಂದ್ರಪ್ರಸಾದ ನಿರ್ದೇಶನದ ‘ಶುಭಲಾಭ’ ಚಲನಚಿತ್ರಕ್ಕೆ ಮುಹೂರ್ತ